More

    ಅತ್ಯಧಿಕ ಸರಾಸರಿ ವಾರ್ಷಿಕ ವೇತನದಲ್ಲಿ ಬೆಂಗಳೂರಿಗೆ ದೇಶದಲ್ಲಿ ಮೂರನೇ ಸ್ಥಾನ!

    ಬೆಂಗಳೂರು: ಅತ್ಯಧಿಕ ಸರಾಸರಿ ವಾರ್ಷಿಕ ವೇತನದಲ್ಲಿ ಬೆಂಗಳೂರು ದೇಶದಲ್ಲಿ ಮೂರನೇ ಸ್ಥಾನವನ್ನು ಹೊಂದಿದೆ ಎಂಬುದು ಸಮೀಕ್ಷೆಯೊಂದರಲ್ಲಿ ಬಹಿರಂಗಗೊಂಡಿದೆ. ಅವರೇಜ್ ಸ್ಯಾಲರಿ ಸರ್ವೇಯಲ್ಲಿ ಈ ಅಂಶ ಕಂಡುಬಂದಿದೆ. ಅತ್ಯಧಿಕ ಸರಾಸರಿ ವಾರ್ಷಿಕ ವೇತನದಲ್ಲಿ ಸೋಲಾಪುರ ಮತ್ತು ಮುಂಬೈ ಮೊದಲೆರಡು ಸ್ಥಾನದಲ್ಲಿದ್ದು, ಬೆಂಗಳೂರು ಮೂರನೇ ಸ್ಥಾನದಲ್ಲಿದೆ.

    ಅವರೇಜ್​ ಸ್ಯಾಲರಿ ಸರ್ವೇ ಇತ್ತೀಚಿನ ಮಾಹಿತಿ ಪ್ರಕಾರ ದೇಶದಲ್ಲಿ ವಾರ್ಷಿಕ ಸರಾಸರಿ ವೇತನ 18.9 ಲಕ್ಷ ರೂ. ಇದ್ದು, ಆ ಪೈಕಿ ಬಹಳಷ್ಟು ಭಾರತೀಯ ಉದ್ಯೋಗಿಗಳು 5.77 ಲಕ್ಷ ರೂ. ವಾರ್ಷಿಕ ಸರಾಸರಿ ವೇತನ ಹೊಂದಿದ್ದಾರೆ.

    ಇದನ್ನೂ ಓದಿ: ಒಂದು ವರ್ಷದ ಅಂತರ.. ಅದೇ ಜಾಗ.. ಒಂದೇ ಥರದಲ್ಲಿ ಸಂಬಂಧಿಕರಿಬ್ಬರ ಸಾವು!

    ಮಹಾರಾಷ್ಟ್ರದ ಸೋಲಾಪುರದಲ್ಲಿ ಉದ್ಯೋಗಿಗಳ ವಾರ್ಷಿಕ ಸರಾಸರಿ ವೇತನ 28.1 ಲಕ್ಷ ರೂ. ಇದ್ದು, ಇದು ಮುಂಬೈನಲ್ಲಿ 21.2 ಲಕ್ಷ ರೂ. ಇದೆ. ಮೂರನೇ ಸ್ಥಾನದಲ್ಲಿರುವ ಬೆಂಗಳೂರಿನಲ್ಲಿನ ವಾರ್ಷಿಕ ಸರಾಸರಿ ವೇತನ 21 ಲಕ್ಷ ರೂಪಾಯಿ ಎಂದು ಈ ಸಮೀಕ್ಷೆ ತಿಳಿಸಿದೆ.

    ಇದನ್ನೂ ಓದಿ: ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!

    ದೆಹಲಿ ಹಾಗೂ ಭುವನೇಶ್ವರ ಟಾಪ್​-4 ಮತ್ತು ಟಾಪ್​-5 ಸ್ಥಾನಗಳಲ್ಲಿದ್ದು ಅನುಕ್ರಮವಾಗಿ 20.4 ಮತ್ತು 19.9 ಲಕ್ಷ ರೂ. ವಾರ್ಷಿಕ ಸರಾಸರಿ ವೇತನ ಹೊಂದಿವೆ. ಒಟ್ಟು 11,570 ಉದ್ಯೋಗಿಗಳನ್ನು ಈ ಸಮೀಕ್ಷೆಯಲ್ಲಿ ಪರಿಗಣಿಸಲಾಗಿದೆ. –ಏಜೆನ್ಸೀಸ್

    ನ್ಯಾಯಾಲಯದ ಮೊರೆ ಹೋಗಿದ್ದೇಕೆ ಎಂದು ಕಾರಣ ಕೊಟ್ಟ ಕಿಚ್ಚ; ನ್ಯಾಯಾಲಯದಲ್ಲೇ ಬಗೆಹರಿಯಲು ಬಿಡಿ ಎಂದು ಸುದೀಪ್ ಪತ್ರ

    ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿರಂಗನ್‌ಗೆ ಶ್ರೀಲಂಕಾದಲ್ಲಿ ಹೃದಯಾಘಾತ; ಶೀಘ್ರದಲ್ಲೇ ನಾರಾಯಣ ಹೃದಯಾಲಯಕ್ಕೆ ಶಿಫ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts