More

    ವಿಧ್ವಂಸಕ ಕೃತ್ಯಕ್ಕೆ ಶಂಕಿತ ಉಗ್ರರಿಂದ ಸಂಚು: ಪೊಲೀಸ್​ ಆಯುಕ್ತರಿಂದ ಸ್ಫೋಟಕ ಮಾಹಿತಿ ಬಹಿರಂಗ

    ಬೆಂಗಳೂರು: ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗುವುದಕ್ಕೆ ಸಂಚು ರೂಪಿಸಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಸಿಸಿಬಿ ಯಶಸ್ವಿಯಾಗಿದೆ ಎಂದು ನಗರ ಪೊಲೀಸ್​ ಆಯುಕ್ತ ಬಿ. ದಯಾನಂದ್​ ತಿಳಿಸಿದರು.

    ಐವರು ಶಂಕಿತ ಉಗ್ರರ ಬಂಧನ ಕುರಿತು ಸುದ್ದಿಗೋಷ್ಠಿ ನಡೆಸಿದ ದಯಾನಂದ್​, ಹೆಬ್ಬಾಳ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ ಐವರು ಶಂಕಿತ ಉಗ್ರರ ಮನೆಗಳ ಮೇಲೆ ದಾಳಿ ನಡೆಸಿ ಸಿಸಿಬಿ ತಂಡ ಬಂಧಿಸಿದೆ. ಬಂಧಿತರಿಂದ ಏಳು ಪಿಸ್ತೂಲ್, ಹಲವು ಜೀವಂತ ಗುಂಡುಗಳು ಹಾಗೂ ವಾಕಿಟಾಕಿ ಸೇರಿದಂತೆ ಅನೇಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿಸಿದರು.

    ಇದನ್ನೂ ಓದಿ: ಹುಡ್ಗಿ ಕೈ ಕೊಟ್ಲು, ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದ ನಟ ಅಬ್ಬಾಸ್

    ಐದು ಜನರಿಗೆ ತರಬೇತಿ 

    ಐವರೂ ಕೂಡ ಬೆಂಗಳೂರು ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗುವುದಕ್ಕೆ ಸಂಚು ರೂಪಿಸಿದ್ದರು. ವಿಚಾರಣೆ ವೇಳೆಯೂ ಆರೋಪಿಗಳು ಒಪ್ಪಿಕೊಂಡಿದ್ದಾರೆ. 2008ರ ಸರಣಿ ಬಾಂಬ್ ಸ್ಫೋಟದ ರೂವಾರಿ ನಾಸಿರ್ ಮತ್ತು 2017ರ ಕೇಸ್​ನ ಮುಖ್ಯ ಆರೋಪಿ ಈ ಐದು ಜನರಿಗೆ ತರಬೇತಿ ಕೊಟ್ಟಿದ್ದಾರೆ. ಮುಖ್ಯ ಆರೋಪಿ ವಿದೇಶಕ್ಕೆ ಎಸ್ಕೇಪ್ ಆಗಿದ್ದಾನೆ. ವಿಧ್ವಂಸಕ ಕೃತ್ಯ ಎಸಗುವುದಕ್ಕೆ ಇವರು ಏನೆಲ್ಲಾ ಪ್ಲ್ಯಾನ್​ ಮಾಡಿಕೊಂಡಿದ್ದರು ಎಂಬುದನ್ನು ತಿಳಿಯಲು ತನಿಖೆ ಮಾಡಲಾಗುತ್ತದೆ. ಆರೋಪಿಗಳನ್ನು 15 ದಿನ ಕಸ್ಟಡಿಗೆ ಪಡೆಯಲಾಗಿದೆ ಎಂದು ತಿಳಿಸಿದರು.

    ವಿದೇಶದಲ್ಲಿದ್ದಾನೆ ಮುಖ್ಯ ಆರೋಪಿ

    ಶಂಕಿತ ಉಗ್ರರಿಗೆ ಬೇರೆ ಯಾವ ಸಂಘಟನೆಗಳ ಜತೆ ಸಂಪರ್ಕ ಇದೆ ಎಂಬುದರ ಬಗ್ಗೆ ತಿಳಿಯಲು ತನಿಖೆ ನಡೆಯುತ್ತಿದೆ. ಆರೋಪಿಗಳು 18 ತಿಂಗಳು ಜೈಲಿನಲ್ಲಿದ್ದರು. ಈ ವೇಳೆ ನಾಸೀರ್ ಪರಿಚಯ ಆಗಿ ಈ ರೀತಿ ಪ್ಲಾನ್ ಮಾಡಿದ್ದಾರೆ. ವಿದೇಶದಲ್ಲಿರುವ ಮುಖ್ಯ ಆರೋಪಿ ಇವರಿಗೆ ಎಲ್ಲ ವಸ್ತುಗಳನ್ನು ಕಳುಹಿಸಿ ಕೊಟ್ಟಿದ್ದಾನೆ. ಆ ವಸ್ತುಗಳನ್ನು ಯಾರು ಇಲ್ಲಿಗೆ ತಂದು ಕೊಟ್ಟಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕಿದೆ ಎಂದರು.

    ಇದನ್ನೂ ಓದಿ: ‘ಗೃಹಲಕ್ಷ್ಮಿ’ಯರಿಗೆ ಅಧಿಕ ಮಾಸ! -ದಾವಣಗೆರೆ ಜಿಲ್ಲೆಯ 4.5 ಲಕ್ಷ ಮಂದಿಗೆ ಲಾಭ ನಿರೀಕ್ಷೆ -ನಾಳೆಯಿಂದ ಅರ್ಜಿ ಸ್ವೀಕಾರ 

    ಹಿಂದುಗಳು ಮನೆಯಲ್ಲಿ ವಾಸ

    ಸುಲ್ತಾನ್ ಪಾಳ್ಯದ ಮುಕ್ರಾಮ್ ಮಸೀದಿ ಬಳಿ ಶಂಕಿತರು ವಾಸವಾಗಿದ್ದರು. ಕಳೆದು ಮೂರು ತಿಂಗಳ ಹಿಂದೆ ಬಂದು ಹಿಂದುಗಳ ಮನೆಯಲ್ಲಿ ವಾಸವಾಗಿದ್ದರು. ನಾಲ್ಕು ಜನ ಶಂಕಿತರು ಹಾಗೂ ಇಬ್ಬರು ಮಹಿಳೆಯರು ಮನೆಯಲ್ಲಿ ವಾಸವಾಗಿದ್ದರು. ಸಿಸಿಬಿಯಿಂದ ಸುಲ್ತಾನ್ ಪಾಳ್ಯದ ಮನೋರಮಾ ಪಾಳ್ಯದಲ್ಲಿ ಶಂಕಿತರ ಬಂಧನವಾಗಿದೆ ಎಂದು ಮಾಹಿತಿ ನೀಡಿದರು.

    ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದ ಆರೋಪಿಗಳು.

    * A1- ಟಿ. ನಜೀರ್, ಸದ್ಯ ಜೈಲಿನಲ್ಲಿದ್ದಾನೆ.
    * A2- ಜುನೈದ್, ಪರಾರಿಯಾಗಿದ್ದಾನೆ.
    * A3- ಸುಹೇಲ್, ಬಂಧನ
    * A4- ಉಮರ್, ಬಂಧನ
    * A5- ಜಾಹಿದ್, ಬಂಧನ
    * A6- ಮುದಾಸಿರ್, ಬಂಧನ
    * A7- ಫೈಜರ್, ಬಂಧನ

    ಬೆಂಗಳೂರಿನಲ್ಲಿ ಭಾರಿ ಸ್ಫೋಟಕ್ಕೆ ಸಂಚು: ಐವರು ಶಂಕಿತ ಉಗ್ರರ ಬಂಧನ

    ಪಾಕಿಸ್ತಾನದ ವೈರಲ್ ಚಾಯ್‍ವಾಲಾ ಈಗ ಲಂಡನ್‍ನಲ್ಲಿ ಮಾಡೋ ಕೆಲಸ ಏನು?

    I.N.D.I.A ಆಗಿ ಬದಲಾದ UPA; ಕಾನೂನು ಪ್ರಕಾರ ಸರಿಯೇ? ಮಾಜಿ ಕಾನೂನು ಸಚಿವರು ಹೇಳಿದ್ದಿಷ್ಟು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts