More

    ಹೈಕೋರ್ಟ್ ಉದ್ಯೋಗಿಯ ಹನಿಟ್ರ್ಯಾಪ್​ಗೆ ಯತ್ನ: ಮಹಿಳೆಯರಿಬ್ಬರು ಸೇರಿ 10 ಮಂದಿಯ ಬಂಧನ

    ಬೆಂಗಳೂರು: ಹೈಕೋರ್ಟ್ ಉದ್ಯೋಗಿಯನ್ನೇ ಹನಿಟ್ರ್ಯಾಪ್ ಬಲೆಗೆ ಕೆಡವಲು ಯತ್ನಿಸಿದ್ದ ಖತರ್ನಾಕ್​ ಗ್ಯಾಂಗ್​ ಅನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 10 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳು ಹೈಕೋರ್ಟ್​ ಉದ್ಯೋಗಿ ಜೈರಾಮ್ ಎಂಬುವರನ್ನು ಹನಿಟ್ರ್ಯಾಪ್ ಮಾಡಲು ಯತ್ನಿಸಿದ್ದರು. ಆರೋಪಿ ಅನುರಾಧ, ಕಾವ್ಯಾ, ಸಿದ್ದರಾಜು ಎಂಬುವರು ಎರಡು ವರ್ಷದಿಂದ ಜೈರಾಮ್​ಗೆ ಪರಿಚಿತರಾಗಿದ್ದರು.

    ಪ್ರಕರಣವೊಂದ ಸಂಬಂಧ ಕೋರ್ಟ್​ಗೆ ಬಂದಾಗ ಅನುರಾಧ ಎಂಬುವಳಿಗೆ ಜೈರಾಮ್​ ಪರಿಚಯವಾಗಿತ್ತು. ಹೀಗಿರುವ ಮನೆಯಲ್ಲಿ ಶಾರ್ಟ್​ ಸೆರ್ಕ್ಯೂಟ್​ನಿಂದ ಬೆಂಕಿ ತಗುಲಿ ಮನೆಗೆ ಹಾನಿಯಾಗಿದೆ ಎಂದು ಹೇಳಿ ಜೈರಾಮ್​ನಿಂದ ಅನುರಾಧ 10 ಸಾವಿರ ರೂ. ಸಾಲ ಪಡೆದುಕೊಂಡಿದ್ದಳು. ಅ.10ರಂದು ಹಣ ಹಿಂತಿರುಗಿಸಿದ್ದು, ಮತ್ತೆ 5 ಸಾವಿರ ಕೇಳಿದ್ದಳು. ಆಕೆಗೆ ಸಾಲ ಕೊಡಲು ಆಕೆಯ ಮನೆಗೆ ಬಂದಾಗ ಜೈರಾಮ್​ರನ್ನು ಹಿಡಿದುಕೊಂಡಿದ್ದ ಇತರ ಆರೋಪಿಗಳು, ಅಲ್ಲಿಯೇ ಆತನನ್ನು ಬಂಧಿಸಿ, ಎರಡು ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ ವಿಡಿಯೋ ಹರಿ ಬಿಡುವುದಾಗಿ ಬೆದರಿಕೆ ಹಾಕಿದ್ದರು.

    ಆರೋಪಿ ಒಬ್ಬ ತನ್ನ ಪತ್ನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ದೂರು ನೀಡುವುದಾಗಿ ಬೆದರಿಸಿದ್ದಾನೆ. ಅನು ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದ ಜೈರಾಮ್​ ಹಣ ಕೊಟ್ಟು, ಆಕೆಯೊಂದಿಗೆ ಸೇರಲು ಮನೆಗೆ ಬಂದಿದ್ದಾಗ ಜೈರಾಮ್​ ಗ್ಯಾಂಗ್​ ಕೈಗೆ ಸಿಕ್ಕಿಬಿದ್ದಿದ್ದ. ಆರೋಪಿಗಳು ಎಷ್ಟೇ ಬೆದರಿಕೆ ಹಾಕಿದರು ಜೈರಾಮ್​ ಹಣ ಕೊಡಲು ಒಪ್ಪಲಿಲ್ಲ. ಬಳಿಕ ಅವರ ಮೇಲೆ ಹಲ್ಲೆ ಮಾಡಿ ಬಿಟ್ಟು ಕಳುಹಿಸಿದ್ದರು. ನಂತರ ಈ ಬಗ್ಗೆ ಕಾಮಾಕ್ಷಿಪಾಳ್ಯ ಠಾಣೆಗೆ ಜೈರಾಮ್​ ದೂರು ನೀಡಿದ್ದರು. ಈ ಹಿನ್ನೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. (ದಿಗ್ವಿಜಯ ನ್ಯೂಸ್​)

    ಸ್ವತಂತ್ರ ಭಾರತದ ಮೊದಲ ಮತದಾರ ಶ್ಯಾಮ್​ ಸರಣ್​ ನೇಗಿ ವಿಧಿವಶ: ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

    ರಾಜ್ಯದ ಕೆಲವೆಡೆ ಎನ್​ಐಎ ದಾಳಿ: ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಮೂವರು ಆರೋಪಿಗಳ ಬಂಧನ

    ಡ್ರೈವಿಂಗ್​ ವೇಳೆ ಮೊಬೈಲ್​ನಲ್ಲಿ ಚಾಟಿಂಗ್​ ಮಾಡ್ತಿದ್ದ ಬಸ್​ ಚಾಲಕನನ್ನು ವಶಕ್ಕೆ ಪಡೆದ ಸಾರಿಗೆ ಇಲಾಖೆ ಅಧಿಕಾರಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts