More

    ಸ್ವತಂತ್ರ ಭಾರತದ ಮೊದಲ ಮತದಾರ ಶ್ಯಾಮ್​ ಸರಣ್​ ನೇಗಿ ವಿಧಿವಶ: ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

    ನವದೆಹಲಿ: ಸ್ವತಂತ್ರ ಭಾರತದ ಮೊದಲ ಮತದಾರ ಎಂಬ ಹೆಗ್ಗಳಿಕೆ ಹೊಂದಿದ್ದ ಶ್ಯಾಮ್​ ಸರಣ್​ ನೇಗಿ ಅವರು ಶನಿವಾರ ಬೆಳಗ್ಗೆ ವಯೋ ಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ.

    ಹಿಮಾಚಲ ಪ್ರದೇಶದ ಕಿನ್ನೌರ್ ಮೂಲದ ನೇಗಿ ಅವರಿಗೆ 106 ವರ್ಷ ವಯಸ್ಸಾಗಿತ್ತು. ಪ್ರಸ್ತುತ ಹಿಮಾಚಲ ಪ್ರದೇಶದಲ್ಲಿ ವಿಧಾನ ಸಭಾ ಚುನಾವಣೆ ನಡೆಯುತ್ತಿದ್ದು ನವೆಂಬರ್​ 2ರಂದು ನಡೆದ ಮತದಾನ ವೇಳೆ ನೇಗಿ ಮತ ಚಲಾಯಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದರು. ಮತದಾನ ಸಮಯದಲ್ಲೂ ಅವರ ಆರೋಗ್ಯ ಸರಿಯಿರಲಿಲ್ಲ.

    ಇಂದು ಬೆಳಗ್ಗೆ ಅಸುನೀಗಿರುವ ನೇಗಿ ಅವರಿಗೆ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸುವುದಾಗಿ ಕಿನ್ನೌರ್​ ಜಿಲ್ಲಾಧಿಕಾರಿ ಅಬಿದ್​ ಹುಸೇನ್​ ತಿಳಿಸಿದ್ದು, ಜಿಲ್ಲಾಡಳಿತದಿಂದಲೇ ಅಂತಿಮ ಕ್ರಿಯೆ ಸಿದ್ಧತೆಗಳು ನಡೆಯುತ್ತಿವೆ.

    1917ರಲ್ಲಿ ಜನಿಸಿದ ನೇಗಿ, ಕಲ್ಪಾದಲ್ಲಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. 1947ರಲ್ಲಿ ಬ್ರಿಟಿಷ್​ ಆಡಳಿತ ಅಂತ್ಯಗೊಂಡು, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ 1951ರಲ್ಲಿ ದೇಶದಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಅ.25ರಂದು ನೇಗಿ ಅವರು ಮೊದಲ ಮತದಾನ ಮಾಡಿದರು.

    ಮೊದಲ ಚುನಾವಣೆಯ ಹೆಚ್ಚಿನ ಮತದಾನವು 1952ರ ಫೆಬ್ರವರಿ ತಿಂಗಳಲ್ಲಿ ನಡೆದವು. ಆದರೆ, ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಹಿಮಾಚಲ ಪ್ರದೇಶದಲ್ಲಿ ಹವಾಮಾನವು ಪ್ರತಿಕೂಲವಾಗಿರುತ್ತದೆ ಮತ್ತು ಆ ಅವಧಿಯಲ್ಲಿ ಭಾರಿ ಹಿಮಪಾತವು ಸಂಭವಿಸುವುದರಿಂದ ನಾಗರಿಕರು ಮತದಾನ ಕೇಂದ್ರಕ್ಕೆ ತೆರಳಲು ತೊಂದರೆಯಾಗುತ್ತದೆ ಅಂತಾ ಐದು ತಿಂಗಳ ಮುಂಚಿತವಾಗಿಯೇ ಹಿಮಾಚಲ ಪ್ರದೇಶದಲ್ಲಿ ಮತದಾನಕ್ಕೆ ಅನುವು ಮಾಡಿಕೊಡಲಾಗಿತ್ತು. ಹೀಗಾಗಿ ದೇಶದ ಮೊಟ್ಟ ಮೊದಲ ಚುನಾವನೆ ಹಿಮಾಚಲ ಪ್ರದೇಶದಲ್ಲಿ ನಡೆದಿತ್ತು ಮತ್ತು ಶ್ಯಾಮ್​ ಸರಣ್​ ನೇಗಿ ಅವರು ಮೊದಲ ಮತದಾನ ಮಾಡಿದ ಹೆಗ್ಗಳಿಕೆ ಹೊಂದಿದರು.

    ಅಂದಹಾಗೆ ಶ್ಯಾಮ್​ ಸರಣ್​ ನೇಗಿ ಅವರು ಸನಾಮ್​ ರೇ ಶೀರ್ಷಿಕೆಯ ಹಿಂದಿ ಸಿನಿಮಾದಲ್ಲೂ ನಟಿಸಿದ್ದಾರೆ. (ಏಜೆನ್ಸೀಸ್​)

    ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

    ಗುಜರಾತ್ ಚುನಾವಣೆಗೆ 50 ಸಾವಿರ ಕೋಟಿ ರೂ. ಬೆಟ್ಟಿಂಗ್? ಬಿಜೆಪಿ ಬಹುಮತ ಪಡೆಯಲಿದೆ ಎನ್ನುತ್ತಿರುವ ಬುಕ್ಕಿಗಳು

    ಟ್ವಿಟರ್​ನಿಂದ ವಜಾಗೊಂಡ ಬೆನ್ನಲ್ಲೇ ಭಾರತೀಯ ಉದ್ಯೋಗಿ ಮಾಡಿರುವ ಟ್ವೀಟ್​ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts