More

    ರಾಜ್ಯದ ಕೆಲವೆಡೆ ಎನ್​ಐಎ ದಾಳಿ: ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಮೂವರು ಆರೋಪಿಗಳ ಬಂಧನ

    ಬೆಂಗಳೂರು: ರಾಜ್ಯದ ಕೆಲವೆಡೆ ಇಂದು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ದಾಳಿ ಮಾಡಿದ್ದು, ಬಿಜೆಪಿ ನಾಯಕ ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಮಂಗಳೂರಿನಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದೆ.

    ಇಂದು ಬೆಳಗ್ಗಿನ ಜಾವ ಬೆಳ್ಳಾರೆ ಮನೆಯಲ್ಲಿ ಆರೋಪಿಗಳಾದ ಶಾಫಿ ಬೆಳ್ಳಾರೆ ಮತ್ತು ಇಕ್ಬಾಲ್ ಬೆಳ್ಳಾರೆ ಎಂಬುವರನ್ನು ಅರೆಸ್ಟ್ ಮಾಡಿರುವುದಾಗಿ ಎನ್​ಐಎ ಉನ್ನತ ಮೂಲಗಳ ಮಾಹಿತಿ ನೀಡಿದೆ.

    ಆರೋಪಿ ಇಕ್ಬಾಲ್ ಬೆಳ್ಳಾರೆ, ಬೆಳ್ಳಾರೆ ಗ್ರಾಮದ ಪಂಚಾಯತ್​ ಸದಸ್ಯ ಮತ್ತು ಶಾಫಿ ಬೆಳ್ಳಾರೆ ಎಸ್​ಡಿಪಿಐ ರಾಜ್ಯ ಕಾರ್ಯದರ್ಶಿ. ಈ ಇಬ್ಬರು ಜೊತೆಯಲ್ಲಿ ಸುಳ್ಯದ ಇಬ್ರಾಹಿಂ ಶಾ ಎಂಬಾತನನ್ನು ಎನ್​ಐಎ ಬಂಧಿಸಿದೆ.

    ಹುಬ್ಬಳ್ಳಿಯಲ್ಲಿಯೂ ಎನ್ಐಎ ದಾಳಿ ನಡೆಸಿದೆ. ಹಳೇ‌ ಹುಬ್ಬಳ್ಳಿಯ ನೂರಾನಿ ಪ್ಲಾಟ್​ನಲ್ಲಿರುವ ಎಸ್​ಡಿಪಿಐ ಮುಖಂಡ ಇಸ್ಮಾಯಿಲ್ ನಾಲಾ‌ಬಂದ್ ಮನೆ ಮೇಲೆ‌ ಹಾಗೂ ಕಸಬಾಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕಚೇರಿಯ ಮೇಲೂ ಎನ್​ಐಎ ದಾಳಿ ಮಾಡಿ, ಪರಿಶೀಲನೆ ನಡೆಸುತ್ತಿದೆ. ಇಂದು ಬೆಳಗಿನ ಜಾವ ನಾಲ್ಕು ಗಂಟೆಗೆ 10 ಮಂದಿಯ ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ. ಮನೆಯಲ್ಲಿ ಸಂಪೂರ್ಣ ಪರಿಶೀಲನೆ ನಡೆಸಿ ಅಧಿಕಾರಿಗಳು ಹಿಂದಿರುಗಿದ್ದಾರೆ.

    ಮೈಸೂರಿನಲ್ಲೂ ಎನ್‌ಐಎ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೈಸೂರಿನ ಎನ್​ಆರ್ ಮೊಹಲ್ಲಾ ಹಾಗೂ ಮಂಡಿ‌ ಮೊಹಲ್ಲಾದಲ್ಲಿ ಎಸ್​ಡಿಪಿಐನ ಕೆಲ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ಮಾಡಿ ತಪಾಸಣೆ ನಡೆಸಿರುವ ಬಗ್ಗೆ ಮಾಹಿತಿ ಬಂದಿದೆ. (ದಿಗ್ವಿಜಯ ನ್ಯೂಸ್​)

    ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

    ಡ್ರೈವಿಂಗ್​ ವೇಳೆ ಮೊಬೈಲ್​ನಲ್ಲಿ ಚಾಟಿಂಗ್​ ಮಾಡ್ತಿದ್ದ ಬಸ್​ ಚಾಲಕನನ್ನು ವಶಕ್ಕೆ ಪಡೆದ ಸಾರಿಗೆ ಇಲಾಖೆ ಅಧಿಕಾರಿಗಳು!

    ಗುಜರಾತ್ ಚುನಾವಣೆಗೆ 50 ಸಾವಿರ ಕೋಟಿ ರೂ. ಬೆಟ್ಟಿಂಗ್? ಬಿಜೆಪಿ ಬಹುಮತ ಪಡೆಯಲಿದೆ ಎನ್ನುತ್ತಿರುವ ಬುಕ್ಕಿಗಳು

    ಟ್ವಿಟರ್​ನಿಂದ ವಜಾಗೊಂಡ ಬೆನ್ನಲ್ಲೇ ಭಾರತೀಯ ಉದ್ಯೋಗಿ ಮಾಡಿರುವ ಟ್ವೀಟ್​ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts