More

    ಸಾರಿಗೆ ನೌಕರ, ವೈದ್ಯರ ಪ್ರತ್ಯೇಕ ಮುಷ್ಕರಕ್ಕೆ ತೊಂದರೆ ಅನುಭವಿಸಿದ ಸಾರ್ವಜನಿಕರು

    ಬಳ್ಳಾರಿ: ಸಾರಿಗೆ ಸಂಸ್ಥೆ ನೌಕರರು ಹಾಗೂ ಖಾಸಗಿ ವೈದ್ಯರು ಶುಕ್ರವಾರ ಕರೆ ನೀಡಿದ್ದ ಪ್ರತ್ಯೇಕ ಮುಷ್ಕರಕ್ಕೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ, ನಗರದಲ್ಲಿ ಮುಷ್ಕರದ ಬಿಸಿ ತೀವ್ರವಾಗಿತ್ತು. ಇದರಿಂದಾಗಿ ಪ್ರಯಾಣಿಕರು ಹಾಗೂ ರೋಗಿಗಳು ಪರದಾಡಿದರು.

    ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಬೆಳಗ್ಗೆಯಿಂದಲೇ ಬಹುತೇಕ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಸಾರಿಗೆ ನೌಕರರ ಮುಷ್ಕರದ ಬಗ್ಗೆ ಮಾಹಿತಿ ಇಲ್ಲದೆ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಧರಣಿ ನಿರತ ನೌಕರರೊಂದಿಗೆ ಚರ್ಚಿಸಿದ ಅಧಿಕಾರಿಗಳು ಮುಷ್ಕರ ಹಿಂಪಡೆಯುವಂತೆ ಮನವಿ ಮಾಡಿದರು. ಮಧ್ಯಾಹ್ನ 12 ಗಂಟೆ ಬಳಿಕ ನೌಕರರು ಮುಷ್ಕರ ಸ್ಥಗಿತಗೊಳಿಸದರೂ ನಿಲ್ದಾಣದಿಂದ ಹೊರಟ ಬಸ್‌ಗಳು ಸುಗಮವಾಗಿ ನಿಗದಿತ ಸ್ಥಳಕ್ಕೆ ತೆರಳಲಿದೆ ಎಂಬುದಕ್ಕೆ ಖಾತ್ರಿ ಇರಲಿಲ್ಲ. ಬೆಂಗಳೂರಿನಿಂದ ಸಿಂಧನೂರು ಕಡೆ ತೆರಳುತ್ತಿದ್ದ ಬಸ್‌ನ್ನು ನಗರದ ಎಸ್ಪಿ ವೃತ್ತದಲ್ಲಿ ಸಾರಿಗೆ ಸಂಸ್ಥೆಯ ನೌಕರರು ತಡೆದು ಪ್ರಯಾಣಿಕರನ್ನು ಇಳಿಸಿದರು.

    ಸಂಡೂರು, ಕೂಡ್ಲಿಗಿ, ಕೊಟ್ಟೂರು, ಹಬೊಹಳ್ಳಿಯಲ್ಲಿ ಬಸ್‌ಗಳ ಸಂಚಾರ ಸುಗಮವಾಗಿತ್ತು. ಹಡಗಲಿ ಹಾಗೂ ಹರಪನಹಳ್ಳಿಯಲ್ಲಿ ಬೆಳಗ್ಗೆ ಕೆಲವು ಹೊತ್ತು ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು.

    ಬಸ್‌ಗಳಿಗೆ ಕಲ್ಲು: ಹೊಸಪೇಟೆ ಹಾಗೂ ಕೂಡ್ಲಿಗಿಯಿಂದ ನಗರಕ್ಕೆ ಬರುತ್ತಿದ್ದ ಎರಡು ಬಸ್‌ಗಳ ಮೇಲೆ ಅಲ್ಲಿಪುರ ಬಳಿ ಹೆಲ್ಮೆಟ್ ಧರಿಸಿ ಬಂದವರು ಕಲ್ಲು ತೂರಿದ್ದಾರೆ. ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಂಘಟನೆಗಳಲ್ಲೇ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ.

    ಖಾಸಗಿ ಒಪಿಡಿ ಸೇವೆ ಬಂದ್: ಆಯುರ್ವೇದ ವೈದ್ಯರಿಗೆ ಶಸಚಿಕಿತ್ಸೆ ನಡೆಸಲು ಅವಕಾಶ ನೀಡಿರುವುದನ್ನು ಖಂಡಿಸಿ ಖಾಸಗಿ ವೈದ್ಯರು ಶುಕ್ರವಾರ ಹೊರ ರೋಗಿಗಳ ಸೇವೆ ಸ್ಥಗಿತಗೊಳಿಸಿದ್ದರು. ವೈದ್ಯರ ಮುಷ್ಕರಕ್ಕೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂತು. ನಗರದಲ್ಲಿ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ವಿಭಾಗ ಮುಚ್ಚಿದ್ದವು. ಇದರಿಂದಾಗಿ ರೋಗಿಗಳು ಆಸ್ಪತ್ರೆಯ ಹೊರಗೆ ಕುಳಿತಿದ್ದು ಕಂಡುಬಂತು.

    ಸಾರಿಗೆ ನೌಕರ, ವೈದ್ಯರ ಪ್ರತ್ಯೇಕ ಮುಷ್ಕರಕ್ಕೆ ತೊಂದರೆ ಅನುಭವಿಸಿದ ಸಾರ್ವಜನಿಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts