More

    ಅಂಜನಾದ್ರಿ ಬೆಟ್ಟದಲ್ಲಿ ಪ್ರತ್ಯಕ್ಷನಾದ ಜಾಂಬವಂತ!

    ಕೊಪ್ಪಳ: ಅಂಜನಾದ್ರಿ ಬೆಟ್ಟದಲ್ಲಿ ಜಾಂಬವಂತ ಪ್ರತ್ಯಕ್ಷನಾಗಿದ್ದು, ಪ್ರತಿನಿತ್ಯ ಭೇಟಿ ನೀಡುವ ಭಕ್ತರು ಭಯ ಬಿದ್ದಿದ್ದಾರೆ! ಹೌದು, ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ನಿನ್ನೆ(ಫೆ.5) ರಾತ್ರಿ ಕರಡಿಯೊಂದು ಕಾಣಿಸಿಕೊಂಡಿದೆ. ಇದು ಭಕ್ತಾದಿಗಳ ಚಿಂತೆಗೆ ಕಾರಣವಾಗಿದೆ.

    ಪ್ರತಿನಿತ್ಯ ಅಂಜನಾದ್ರಿಗೆ ಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಸದ್ಯ ನಿನ್ನೆ ರಾತ್ರಿ ಕರಡಿ ಬಂದಿರುವ ದೃಶ್ಯಗಳು ಭಕ್ತರ ಮೊಬೈಲ್​ನಲ್ಲಿ ಸೆರೆಯಾಗಿದೆ. ಕರಡಿಯ ಚಲನವಲನಗಳ ಫೋಟೋ, ವೀಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಯಭೀತರಾದ ಭಕ್ತರು ಅಂಜನಾದ್ರಿ ಬೆಟ್ಟಕ್ಕೆ ಬರಲು ಯೋಚಿಸುತ್ತಿದ್ದಾರೆ.

    ಈ ಹಿಂದೆ ಅಂಜನಾದ್ರಿ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಇದೀಗ ಕರಡಿ ಪ್ರತ್ಯಕ್ಷವಾಗಿರುವ ಹಿನ್ನೆಲೆಯಲ್ಲಿ ಆತಂಕ ಮೂಡಿದೆ. ಬೆಟ್ಟದಲ್ಲಿದ್ದ ಕಸದ ಬುಟ್ಟಿಯನ್ನು ಕೆಡವಿ ಹಾಕಿದ್ದು, ಬಳಿಕ ಅದರಲ್ಲಿನ ವಸ್ತುಗಳನ್ನು ತಿಂದಿದೆ. ಇದೇ ವೇಳೆ ನಾಯಿಯೊಂದು ಕರಡಿ ಬಳಿ ಬಂದಿದೆ. ಜತೆಗೆ ಚಲನವಲನಗಳನ್ನು ವೀಡಿಯೋ ಮಾಡುತ್ತಿದ್ದ ವ್ಯಕ್ತಿಯ ಬಳಿಗೂ ಕರಡಿ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts