More

    ಕರೊನಾ ಸೋಂಕಿತರಿಗೆ ಬಿಸಿಸಿಐನಿಂದ 2 ಸಾವಿರ ಆಕ್ಸಿಜನ್ ಕಾನ್ಸನ್‌ಟ್ರೇಟರ್

    ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎನಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದೆ. ದೇಶದ ಆರೋಗ್ಯ ಸೇವೆಗೆ ನೆರವಾಗುವ ಸಲುವಾಗಿ ವೈದ್ಯಕೀಯ ಸಂಸ್ಥೆಗಳಿಗೆ 10 ಲೀಟರ್‌ಗಳ 2 ಸಾವಿರ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ವಿತರಿಸುವುದಾಗಿ ಬಿಸಿಸಿಐ ಸೋಮವಾರ ಪ್ರಕಟಿಸಿದೆ.

    ದೇಶದಲ್ಲಿ ಅಬ್ಬರಿಸುತ್ತಿರುವ ಕೊರನಾ ಸೋಂಕಿನ 2ನೇ ಅಲೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಸಾಕಷ್ಟು ಕರೊನಾ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಬಿಸಿಸಿಐ ಆಕ್ಸಿಜನ್ ಪೂರೈಕೆಯ ಮೂಲಕ ಕರೊನಾ ವಿರುದ್ಧದ ಹೋರಾಟಕ್ಕೆ ಸಹಾಯಹಸ್ತ ಚಾಚಿದೆ.

    ಇದನ್ನೂ ಓದಿ:  ಭಾರಿ ಚರ್ಚೆಗೆ ಕಾರಣವಾಗಿದೆ ವಿರಾಟ್ ಕೊಹ್ಲಿ ಹೊಸ ಲುಕ್!

    ‘ಮುಂದಿನ ಕೆಲ ತಿಂಗಳ ಕಾಲ ಮಂಡಳಿಯ ವತಿಯಿಂದ ದೇಶದ ವಿವಿಧ ಭಾಗಗಳಲ್ಲಿ ಕಾನ್ಸನ್‌ಟ್ರೇಟರ್‌ಗಳನ್ನು ಪೂರೈಸಲಾಗುತ್ತದೆ. ತುರ್ತು ಆರೋಗ್ಯ ಸೇವೆಯ ಅಗತ್ಯವಿರುವ ಸೋಂಕಿತರಿಗೆ ಇದರಿಂದ ನೆರವಾಗುವ ಮತ್ತು ಕರೊನಾ ವೈರಸ್‌ನಿಂದ ಜೀವಹಾನಿಯಾಗುವುದನ್ನು ಈ ಮೂಲಕ ತಪ್ಪಿಸುವ ಭರವಸೆ ಹೊಂದಿದ್ದೇವೆ’ ಎಂದು ಬಿಸಿಸಿಐ ತಿಳಿಸಿದೆ. ಕಳೆದ ವರ್ಷ ಕರೊನಾ ವೈರಸ್ ಮಹಾಮಾರಿ ಕಾಡಿದಾಗ ಬಿಸಿಸಿಐ, ಪಿಎಂ ಕೇರ್ಸ್‌ಗೆ 51 ಕೋಟಿ ರೂಪಾಯಿ ದೇಣಿಗೆ ನೀಡಿತ್ತು.

    ‘ವೈರಸ್ ವಿರುದ್ಧದ ಹೋರಾಟದಲ್ಲಿ ವೈದ್ಯಕೀಯ ಸಿಬ್ಬಂದಿ ನಿರ್ವಹಿಸಿರುವ ಪ್ರಮುಖ ಪಾತ್ರಕ್ಕೆ ಬಿಸಿಸಿಐ ಕೃತಜ್ಞತೆ ಸಲ್ಲಿಸುತ್ತದೆ. ಅವರು ನಿಜವಾಗಿಯೂ ್ರಂಟ್‌ಲೈನ್ ವಾರಿಯರ್ಸ್‌. ನಮ್ಮನ್ನು ರಕ್ಷಿಸಲು ಅವರು ಎಲ್ಲ ರೀತಿಯ ಹೋರಾಟವನ್ನು ನಡೆಸಿದ್ದಾರೆ. ಆರೋಗ್ಯ ಮತ್ತು ಸುರಕ್ಷತೆಗೆ ಬಿಸಿಸಿಐ ಯಾವಾಗಲೂ ಪ್ರಮುಖ ಆದ್ಯತೆ ನೀಡಿದೆ ಮತ್ತು ಮುಂದೆಯೂ ಅದಕ್ಕೆ ಬದ್ಧವಾಗಿರುತ್ತದೆ. ತಕ್ಷಣಕ್ಕೆ ಅಗತ್ಯವಿರುವವರಿಗೆ ಆಕ್ಸಿಜನ್ ಕಾನ್ಸನ್‌ಟ್ರೇಟರ್ ದೊಡ್ಡ ಸಮಾಧಾನ ನೀಡಲಿದೆ ಮತ್ತು ಅವರ ಶೀಘ್ರ ಚೇತರಿಕೆಗೆ ನೆರವಾಗಲಿದೆ’ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

    10 ಲೀಟರ್ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಒಂದರ ಬೆಲೆ ಸುಮಾರು 60 ಸಾವಿರದಿಂದ 1 ಲಕ್ಷ ರೂಪಾಯಿವರೆಗೆ ಇರುತ್ತದೆ. 2 ಸಾವಿರ ಕಾನ್ಸನ್‌ಟ್ರೇಟರ್ ಸುಮಾರು 12 ಕೋಟಿ ರೂಪಾಯಿ ಮೌಲ್ಯ ಹೊಂದಿರುತ್ತದೆ.

    ಪಾಂಡ್ಯ ಸಹೋದರರಿಂದಲೂ ಕಾನ್ಸನ್‌ಟ್ರೇಟರ್
    ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್‌ಗಳಾದ ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಸಹೋದರರು, ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ಹಂಚಿಕೆ ಮಾಡುವ ಮೂಲಕ ಕರೊನಾ ಸೋಂಕಿನ ವಿರುದ್ಧ ಹೋರಾಟಕ್ಕೆ ನೆರವಾಗಿದ್ದಾರೆ. ‘ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳ ಹೊಸ ಗುಂಪುಗಳನ್ನು ನಾವು ಕೋವಿಡ್ ಸೆಂಟರ್‌ಗಳಿಗೆ ಕಳುಹಿಸುತ್ತಿದ್ದೇವೆ. ಜತೆಗೆ ಎಲ್ಲರ ಶೀಘ್ರ ಚೇತರಿಕೆಗೆ ನಮ್ಮ ಹೃದಯದಿಂದ ಪ್ರಾರ್ಥನೆ ಸಲ್ಲಿಸುತ್ತೇವೆ’ ಎಂದು ಕೃನಾಲ್ ಪಾಂಡ್ಯ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ತಾವು ಹಂಚಿಕೆ ಮಾಡುತ್ತಿರುವ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳ ಚಿತ್ರವನ್ನೂ ಪ್ರಕಟಿಸಿದ್ದಾರೆ. ಈ ಮುನ್ನ ಹಾರ್ದಿಕ್ ಪಾಂಡ್ಯ ಅವರು, 200 ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ದೇಶದ ಗ್ರಾಮೀಣ ಭಾಗಗಳಿಗೆ ಹಂಚಿಕೆ ಮಾಡುವುದಾಗಿ ಟ್ವಿಟರ್‌ನಲ್ಲೇ ಪ್ರಕಟಿಸಿದ್ದರು.

    ಕರೊನಾ ವಿರುದ್ಧದ ಹೋರಾಟಕ್ಕೆ ಆರ್‌ಸಿಬಿ ನೀಡುತ್ತಿರುವ ಕೊಡುಗೆಗಳೇನು ಗೊತ್ತೇ?

    ಈ ಐಪಿಎಲ್ ತಂಡ ನನಗಿನ್ನೂ ವೇತನ ನೀಡಿಲ್ಲ ಎಂದ ಆಸೀಸ್ ಕ್ರಿಕೆಟಿಗ ಬ್ರಾಡ್ ಹಾಡ್ಜ್!

    18 ದಿನಗಳಲ್ಲಿ 5 ರಾಜ್ಯ ಸುತ್ತಾಡಿ ತಲೆಮರೆಸಿಕೊಂಡಿದ್ದ ಸುಶೀಲ್ ಕುಮಾರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts