More

    2025ರ ಮೆಗಾ ಹರಾಜಿಗೆ ಹೊಸ ನಿಯಮ ಜಾರಿಗೆ ತರಲು ಮುಂದಾದ ಬಿಸಿಸಿಐ; ಏನದು?

    ನವದೆಹಲಿ: ವಿಶ್ವ ಮಿಲಿಯನ್​ ಡಾಲರ್​ ಟೂರ್ನಿಗಳಲ್ಲಿ ಒಂದಾಗಿರುವ ಐಪಿಎಲ್​ನ 17ನೇ ಆವೃತ್ತಿಯು ಈಗಾಗಲೇ ಅಭಿಮಾನಿಗಳನ್ನು ರಂಜಿಸಲು ಯಶಸ್ವಿಯಾಗಿದ್ದು, 2025ರಲ್ಲಿ ನಡೆಯಲಿರುವ 18ನೇ ಆವೃತ್ತಿಯ ಐಪಿಎಲ್​ಗೆ ಈಘಾಗಲೇ ಸಿದ್ಧತೆಗಳು ಆರಂಭಗೊಂಡಿವೆ. ಇದೀಗ ಮುಂದಿನ ವರ್ಷ ನಡೆಯಲಿರುವ ಐಪಿಎಲ್​ ಮೆಗಾ ಹರಾಜಿನ ಕುರಿತು ಮಹತ್ವದ ಸುದ್ದಿಯೊಂದು ಹೊರಬಿದ್ದಿದ್ದು, 18ನೇ ಆವೃತ್ತಿ ಕುರಿತು ನಿರೀಕ್ಷೆಗಳು ಗರಿಗೆದರ ತೊಡಗಿವೆ.

    18ನೇ ಆವೃತ್ತಿ ಆರಂಭಕ್ಕೂ ಮುನ್ನ ಮೆಗಾ ಹರಾಜು ಕಾರ್ಯ ನಡೆಯಲಿದೆ. ಐಪಿಎಲ್​ ನಿಯಮದ ಪ್ರಕಾರ ಮೆಗಾ ಹರಾಜಿನಲ್ಲಿ ಭಾಗಿಯಾಗುವ ತಂಡಗಳು ನಾಲ್ಕು ಆಟಗಾರರನ್ನು ಉಳಿಸಿಕೊಂಡು ಉಳಿದವರನ್ನು ತಂಡದಿಂದ ಬಿಡುಗಡೆ ಮಾಡಬೇಕು. ಹೀಗೆ ತಂಡದಿಂದ ಬಿಡುಗಡೆಯಾದ ಆಟಗಾರರು ಮತ್ತೊಮ್ಮೆ ಹರಾಜಿಗೆ ಬರಲಿದ್ದಾರೆ. 

    2025ರ ಮೆಗಾ ಹರಾಜಿಗೆ ಹೊಸ ನಿಯಮ ಜಾರಿಗೆ ತರಲು ಮುಂದಾದ ಬಿಸಿಸಿಐ; ಏನದು?

    ಇದನ್ನೂ ಓದಿ: ಸಿಎಂ ಸ್ಥಾನದಿಂದ ಕೇಜ್ರಿವಾಲ್ ಪದಚ್ಯುತಿಗೆ ಆಗ್ರಹಿಸಿ ಅರ್ಜಿ; ಇದೇನು ಜೇಮ್ಸ್​ ಬಾಂಡ್​ ಚಿತ್ರವಲ್ಲ ಎಂದ ಕೋರ್ಟ್

    ಹರಾಜಿಗೆ ಬರುವ ಆಟಗಾರರು ಕಳೆದ ಆವೃತ್ತಿಯಲ್ಲಿ ಪಡೆದ ಸಂಭಾವನೆಗಿಂತ ಹೆಚ್ಚು ಅಥವಾ ಕಡಿಮೆ ಮೊತ್ತ ಪಡೆಯಲಿದ್ದಾರೆ. ಆದರೆ, ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಕೆಲವು ಫ್ರಾಂಚೈಸಿಗಳು ಬಿಸಿಸಿಐ ಮುಂದೆ ಒಂದು ಬೇಡಿಕೆ ಇಟ್ಟಿದ್ದು, ಇದಕ್ಕೆ ಬಿಸಿಸಿಐ ಸಮ್ಮತಿಸಿದೆ ಎಂದು ಉನ್ನತ ಸುದ್ದಿ ಮೂಲಗಳು ತಿಳಿಸಿವೆ.

    ಅದೇನೆಂದರೆ ಮುಂದಿನ ವರ್ಷ ನಡೆಯಲ್ಲಿರುವ ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಳ್ಳಬಹುದಾದ ಆಟಗಾರರ ಸಂಖ್ಯೆಯನ್ನು 4 ರ ಬದಲು 8 ಕ್ಕೆ ಏರಿಸಬೇಕು ಎಂದು ಫ್ರಾಂಚೈಸಿಗಳು ಬಿಸಿಸಿಐ ಬಳಿ ಬೇಡಿಕೆ ಇರಿಸಿವೆ ಎಂದು ವರದಿಯಾಗಿದೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಬಿಸಿಸಿಐ ಕೂಡ ಫ್ರಾಂಚೈಸಿಗಳ ಈ ಮನವಿಗೆ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಪ್ರಕಟಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts