More

    ಫೀಲ್ಡ್​ಗೆ ಇಳಿದ ಬಿಬಿಎಂಪಿ ವೈದ್ಯರು; ದಿಢೀರ್​ ಭೇಟಿ, ತಪಾಸಣೆ ನಡೆಸುತ್ತಿರುವ ಅಧಿಕಾರಿಗಳು..!

    ಬೆಂಗಳೂರು: ಕರೋನಾ ಹಿನ್ನೆಲೆ ಸಮರೋಪಾದಿಯಲ್ಲಿ ಆಸ್ಪತ್ರೆಗಳಲ್ಲಿ ಮಾಕ್​ ಡ್ರಿಲ್​, ಆಕ್ಸಿಜನ್​ ಸಿಲಿಂಡರ್​ಗಳು ಎಷ್ಟಿವೆ, ಅಗತ್ಯ ಸಲಕರಣೆಗಳು ಇದೆಯಾ ಎಂದು ಚೆಕ್​ ಮಾಡಲಾಗುತ್ತಿದ ಈ ನಡುವೆ ರಾಜ್ಯ ಸರ್ಕಾರವೂ ಕರೋನಾ ನಿಯಂತ್ರಿಸಲು ರೂಲ್ಸ್​ ಮಾಡುತ್ತಿದ್ದು ಜನರಲ್ಲಿ ಮಿಶ್ರ ಪ್ರತಿಕ್ರಿಯೆ ಕಾಣಿಸಿಕೊಂಡಿದೆ.

    ಗಾಂಧಿಬಜಾರ್​ನಲ್ಲಿ ಬಹುಪಾಲು ಜನರು ನಿಯಮಗಳನ್ನು ಗಾಳಿಗೆ ತೂರಿ ಮಾಸ್ಕ್​ ಇಲ್ಲದೇ, ಸಾಮಾಜಿಕ ಅಂತರ ಕಾಪಾಡದೇ ಓಡಾಡುತ್ತಿದ್ದಾರೆ. ಲಾಲ್​ಬಾಗ್​ನಲ್ಲೂ ಪ್ರವಾಸಿಗರ ದಂಡು ಬರುತ್ತಿದೆ. ಈ ಎಲ್ಲಾ ಪರಿಸ್ಥಿತಿಗಳನ್ನು ಗಮನದಲ್ಲಿ ಇರಿಸಿಕೊಂಡ ಬಿಬಿಎಂಪಿಯ ವೈದ್ಯಾಧಿಕಾರಿಗಳು ಫೀಲ್ಡ್​ಗೆ ಇಳಿದಿದ್ದಾರೆ.

    ಇದೀಗ ಬಿಬಿಎಂಪಿ ಆರೋಗ್ಯ ವೈದ್ಯಾಧಿಕಾರಿಗಳ ತಂಡ ಫೀಲ್ಡ್ ಗೆ ಇಳಿದಿದ್ದು ಹೋಟೆಲ್, ರೆಸ್ಟೋರೆಂಟ್ ಸಿಬ್ಬಂದಿಗಳಿಗೆ ಕಡ್ಡಾಯ ಎರಡು ಡೋಸ್ ಲಸಿಕೆ ಪಡೆದಿರಬೇಕು ಎಂಬ ಆದೇಶದ ಹಿನ್ನೆಲೆಯಲ್ಲಿ ರೆಸ್ಟೋರೆಂಟ್ ಹಾಗೂ ಹೋಟೆಲ್​ಗಳಿಗೆ ದಿಢೀರ್ ಭೇಟಿ,ತಪಾಸಣೆ ನಡೆಸುತ್ತಿದ್ದಾರೆ.

    ಈ ಸಂದರ್ಭದಲ್ಲಿ ಬಿಬಿಎಂಪಿ ವೈದ್ಯಾಧಿಕಾರಿಗಳು ಹೋಟೆಲ್ ಸಿಬ್ಬಂದಿಯ ವ್ಯಾಕ್ಸಿನೇಷನ್‌ ಸರ್ಟಿಫಿಕೇಟ್ ಪರಿಶೀಲನೆ ನಡೆಸುತ್ತಿದ್ದಾರೆ. ಬಿಬಿಎಂಪಿ ದಕ್ಷಿಣ ವಲಯದ ಆರೋಗ್ಯವಿಭಾಗದ ಅಧಿಕಾರಿಗಳಿಂದ ತಪಾಸಣೆ ನಡೆಯುತ್ತಿದ್ದು ಗಾಂಧಿಬಜಾರ್​ನಲ್ಲಿರುವ ರೆಸ್ಟೋರೆಂಟ್ ಗಳಲ್ಲಿ ತಪಾಸಣೆ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts