More

    ಈ ಕರೋನಾ ಲಸಿಕೆಯನ್ನು ಮೂಗಿನ ಮುಖಾಂತರ ತೆಗೆದುಕೊಳ್ಳಬಹುದು! ಕೈಗೆಟಕುವ ಬೆಲೆಗೆ ಸಿಗುತ್ತೆ ಹೊಸ ಮದ್ದು…

    ಬೆಂಗಳೂರು: ಹೊಸ ಕರೋನಾ ವೇರಿಯಂಟ್ BF.7ನ ಪ್ರಕರಣಗಳು ದೇಶಾದ್ಯಂತ ಹೆಚ್ಚುತ್ತಿರುವ ಸಂದರ್ಭದಲ್ಲಿ, ಭಾರತ್ ಬಯೋಟೆಕ್ ಹೊಸ ಲಸಿಕೆಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

    ಇದರ ವಿಶೇಷತೆ ಏನಪ್ಪಾ ಅಂದರೆ ಈ ಲಸಿಕೆಯನ್ನು ಮೂಗಿನ ಮೂಲಕವೇ ತೆಗೆದುಕೊಳ್ಳಬಹುದು. ಇದಕ್ಕೆ ಯಾವುದೇ ರೀತಿಯ ಚುಚ್ಚುಮದ್ದು, ಇಂಜಕ್ಷನ್​ ಅವಶ್ಯಕತೆ ಇರುವುದಿಲ್ಲ. iNCOVACC ಹೆಸರಿನ ಈ ಲಸಿಕೆ ಜನವರಿ ತಿಂಗಳ ಕೊನೇ ವಾರದಲ್ಲಿ ಬಿಡುಗಡೆ ಆಗಲಿದೆ. ಇದನ್ನು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಆಗಿ ನೀಡಲಾಗುತ್ತದೆ.

    ದೊಡ್ಡ ಪ್ರಮಾಣದ ಸಂಗ್ರಹಣೆಗಾಗಿ iNCOVACC ಪ್ರತಿ ಡೋಸ್‌ಗೆ 325 ರೂ. ಬೆಲೆ ನಿಗದಿಯಾಗಿದೆ. ಇದು ಸರ್ಕಾರಕ್ಕೆ ಮಾತ್ರ ಇರುವ ವಿಶೇಷ ಆಫರ್​. ಕೇವಲ 800ನ ರೂ.ಗೆ ಈ ಲಸಿಕೆ ಜನರಿಗೂ ಲಭ್ಯವಾಗಲಿದೆ.

    ಸೂಜಿ-ರಹಿತ ವ್ಯಾಕ್ಸಿನೇಷನ್ ಆಗಿ, ಭಾರತ್ ಬಯೋಟೆಕ್‌ನ iNCOVACC ಭಾರತದ ಮೊದಲ ಬೂಸ್ಟರ್ ಡೋಸ್ ಆಗಿರುತ್ತದೆ. ಮೂರನೇ ಡೋಸ್ ವಿಷಯಕ್ಕೆ ಬಂದಾಗ ಭಾರತದ ಜನರಿಗೆ ಈಗ ಹೆಚ್ಚಿನ ಆಯ್ಕೆಗಳು ಇರಲಿವೆ. iNCOVACC ನಿಂದಾಗಿ ಭಾರತದ ಲಸಿಕೆ ಉತ್ಪಾದನಾ ಸಾಮರ್ ಹೆಚ್ಚಾಗಿದ್ದು ಈಗ ವಿಭಿನ್ನ ಮತ್ತು ನಿರ್ದಿಷ್ಟ ಲಸಿಕೆಗಳನ್ನು ವೇಗವಾಗಿ ಉತದಪಾದನೆ ಮಾಡಬಹುದಾಗಿದೆ. ಅದಲ್ಲದೇ ಇದನ್ನು ನೇರವಾಗಿ ಜನರೇ ಬಳಸಬಹುದು. ಆದ್ದರಿಂದ ಲಸಿಕೆ ನೀಡಲು ಇನ್ನು ಕಡಿಮೆ ಸಂಖ್ಯೆಯ ವೈದ್ಯರು ಸಾಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts