More

    ಸಮಸಮಾಜ ನಿರ್ಮಾಣಕ್ಕೆ ಬಸವಣ್ಣ ಕಾರಣ: ಗಾಂಧಿನಗರ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಅಭಿಮತ

    ಬೆಂಗಳೂರು: ಸಮಾನತೆಯ ಹರಿಕಾರ ಬಸವೇಶ್ವರರ ಆದರ್ಶಗಳನ್ನು ಅಳವಡಿಸಿಕೊಂಡು ಸಮಸಮಾಜ ನಿರ್ಮಾಣಕ್ಕೆ ಎಲ್ಲರೂ ಬದ್ಧರಾಗಿ ಸಹೋದರತ್ವ ಭಾವನೆಯಿಂದ ಬಾಳಬೇಕೆಂದು ಗಾಂಧಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಕರೆ ಕೊಟ್ಟಿದ್ದಾರೆ.

    ಬಸವಜಯಂತಿ ಹಿನ್ನೆಲೆಯಲ್ಲಿ ಶಿವನಹಳ್ಳಿ, ಬೇಲಿಮಠ, ಸರ್ಪಭೂಷಣ ಮಠ ಸೇರಿದಂತೆ ಮತ್ತಿತರ ಮಠಗಳಿಗೆ ತೆರಳಿ ಶ್ರೀಗಳ ಆಶೀರ್ವಾದ ಪಡೆದ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

    ಬಸವಣ್ಣನವರ ಆಶಯಗಳನ್ನು ಈಡೇರಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ. ಬಸವಣ್ಣನವರ ಆದರ್ಶಗಳು ಎಂದೆಂದಿಗೂ ಶಾಶ್ವತವೆಂದು ಹೇಳಿದರು.

    ಸಮಾಜದಲ್ಲಿದ್ದ ಮೌಢ್ಯತೆಗಳನ್ನು ಹೋಗಲಾಡಿಸಲು 12ನೇ ಶತಮಾನದಲ್ಲಿ ಬಸವಣ್ಣನವರು ವಚನಗಳ ಮೂಲಕ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಸಂದೇಶ ಸಾರಿದ್ದರು. ಅಂದು ಅವರು ನಡೆಸಿದ ಸಾಮಾಜಿಕ ಕ್ರಾಂತಿಯಿಂದಲೇ ಸಮಾನತೆ ಬೇರೂರಿದೆ ಎಂದು ತಿಳಿಸಿದರು.

    ದಯೆಯೇ ಧರ್ಮದ ಮೂಲವಯ್ಯ ಎಂಬ ಸಾರವನ್ನು ಹೇಳಿದ ಬಸವಣ್ಣನವರು ಇವನ್ಯಾರವ ಇವನ್ಯಾರವ ಎನ್ನದೆ ಇವ ನಮ್ಮವ ಇವ ನಮ್ಮವ ಎಂದು ಸಮಾಜದಲ್ಲಿ ಮೇಲು- ಕೀಳುಗಳನ್ನು ಹೋಗಲಾಡಿಸಿದ ಮಹಾನುಭವರು. ಅವರ ಚಿಂತನೆಗಳಿಂದಲೇ ಸಮಾಜದಲ್ಲಿ ಶಾಂತಿ ಹಾಗೂ ನೆಮ್ಮದಿ ಮೂಡಿದೆ ಎಂದು ಅಭಿಪ್ರಾಯಪಟ್ಟರು. ಸಮಾನತೆಯ ಹರಿಕಾರ ಬಸವಣ್ಣ ಸರ್ವರಿಗೂ ಆದರ್ಶವಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿರುವ ಬಿಜೆಪಿ ಸರ್ಕಾರ ಅವರ ತತ್ವಗಳನ್ನು ಆಡಳಿತದಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದೆ. ಇದು ಪ್ರಧಾನಿ ನರೇಂದ್ರಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದು ಪ್ರಶಂಸಿಸಿದರು.

    ಬಸವ ಚಿಂತನೆ ತತ್ವ ಆಧಾರದ ಮೇಲೆ ಬಿಜೆಪಿ ಮುನ್ನಡೆಯುತ್ತಿದೆ. ಸಮಾಜದಲ್ಲಿ ತುಳಿತಕ್ಕೊಳಪಟ್ಟವರನ್ನು ಸಮಾಜದ ಮುಖ್ಯವಾಹಿನಿಗೆ ತಂದಿದ್ದು ನಮ್ಮ ಸರ್ಕಾರ. ದುಡಿಯುವ ಸಮಾಜದವರಿಗೆ ಗೌರವ, ಮಾನ, ಸನ್ಮಾನ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಯ ಧ್ಯೇಯ ಇಟ್ಟುಕೊಂಡಿದ್ದೇವೆ. ಮುಂದೆಯೂ ಇದೇ ರೀತಿ ನಮ್ಮ ಸರ್ಕಾರ ಮುನ್ನಡೆಯಲಿದೆ. ಗಾಂಧಿನಗರದ ಜನತೆ ಈ ಬಾರಿ ಬಿಜೆಪಿಗೆ ನೂರಕ್ಕೂ ನೂರರಷ್ಟು ಆಶೀರ್ವಾದ ಮಾಡಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

    ಮೋದಿ ಬರೋವರ್ಗ ನಿಮ್ದೇ ಹವಾ!

    ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ ಉಪಾಯಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts