More

    ರವಿ ಶಾಸ್ತ್ರಿ ಕಾಲೆಳೆದ ಬಾರ್ಸಿಲೋನಾ ತಂಡದ ಅಭಿಮಾನಿಗಳು

    ಮುಂಬೈ: 80, 90ರ ದಶಕದ ಕ್ರಿಕೆಟಿಗರಿಗೆ ಹೋಲಿಸಿದರೆ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಅವರ ಚಟುವಟಿಕೆ ನೋಡಿದರೆ ಇಂದಿನ ಯುವಪೀಳಿಗೆಗೂ ಮಾದರಿಯಾಗಿದೆ. ಕೆಲವೊಂದು ವಿಷಯಗಳಲ್ಲಿ ಟ್ವೀಟ್ ಮಾಡಿ ಟ್ರೋಲ್ ಆಗುವುದು ಸಾಮಾನ್ಯದ ಸಂಗತಿ. ಆದರೆ, ಈ ಬಾರಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ ಟೀಮ್ ಇಂಡಿಯಾ ಕೋಚ್. ಲಾ ಲೀಗಾ ಫುಟ್‌ಬಾಲ್ ಲೀಗ್ ಆರಂಭಗೊಂಡ ಖುಷಿಯಲ್ಲಿ ಟ್ವೀಟ್ ಮಾಡಿದ್ದ ರವಿ ಶಾಸ್ತ್ರಿ ಅವರಿಗೆ ತಂಡ ಅಭಿಮಾನಿಗಳು ಟ್ವೀಟ್‌ನಲ್ಲೇ ಕಾಲೆಳೆದಿದ್ದಾರೆ.

    ಇದನ್ನೂ ಓದಿ: ಸುಶಾಂತ್ ಬ್ಯಾಟಿಂಗ್​ ಶೈಲಿಗೆ ಫಿದಾ ಆಗಿದ್ದ ಸಚಿನ್..!

    ಲಾಕ್‌ಡೌನ್‌ನಿಂದಾಗಿ ಕಳೆದ ಮೂರು ತಿಂಗಳಿಂದ ಜಾಗತಿಕ ಕ್ರೀಡಾಲೋಕವೇ ಸ್ತಬ್ಧಗೊಂಡಿತ್ತು. ಇದೀಗ ಹಂತ ಹಂತವಾಗಿ ಕ್ರೀಡಾ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿವೆ. ಲಾ ಲೀಗಾ ಫುಟ್‌ಬಾಲ್ ಲೀಗ್ ಕೂಡ ಆರಂಭಗೊಂಡಿದೆ. ಶನಿವಾರದ ಮೊದಲ ಪಂದ್ಯದಲ್ಲಿ ಬಾರ್ಸಿಲೋನಾ ಎಫ್ ಸಿ ಹಾಗೂ ರಿಯಲ್ ಮಾರ್ಲೊಕಾ ತಂಡಗಳು ಎದುರಾಗಿದ್ದವು. ಈ ಪಂದ್ಯವನ್ನು ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಒಳಗೊಂಡ ಬಾರ್ಸಿಲೋನಾ 4-0 ಯಿಂದ ಗೆದ್ದುಗೊಂಡಿತ್ತು.‘ಶ್ರೇಷ್ಠ ತಂಡವೊಂದು ಉತ್ತಮ ನಿರ್ವಹಣೆಯೊಂದಿಗೆ ವಾಪಸ್ ಬಂದಿದೆ ಎಂದು ಪಂದ್ಯದ ಎರಡು ಚಿತ್ರಗಳೊಂದಿಗೆ ರವಿ ಶಾಸ್ತ್ರಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಾರ್ಸಿಲೋನಾ ಅಭಿಮಾನಿಗಳು, ಇನ್ಮುಂದೆ ನಿಮ್ಮನ್ನು ಟ್ರೋಲ್ ಮಾಡುವುದಿಲ್ಲ. ನಮ್ಮ ತಂಡ ಬೆಂಬಲಿಸಿದ್ದಕ್ಕೆ ಧನ್ಯವಾದಗಳು’ ಎಂದು ಕಾಲೆಳೆದಿದ್ದಾರೆ.

    ರವಿ ಶಾಸ್ತ್ರಿ ಕಾಲೆಳೆದ ಬಾರ್ಸಿಲೋನಾ ತಂಡದ ಅಭಿಮಾನಿಗಳು

    ಜತೆಗೆ ಕ್ರಿಕೆಟ್ ಚಟುವಟಿಕೆಗಳು ಬೇಗ ಆರಂಭಗೊಳ್ಳಲಿ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಟೂರ್ನಿ ಕೂಡ ಅನಿಶ್ಚಿತತೆಯಲ್ಲಿ ಮುಳುಗಿದೆ. ಸದ್ಯ ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದು, ಖಾಲಿ ಸ್ಟೇಡಿಯಂನಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. 

    ಕೆಎಲ್ ರಾಹುಲ್ ಸ್ಥಿರ ಬ್ಯಾಟಿಂಗ್ ಹಿಂದಿದೆ ಆ ನೋವು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts