More

    ಕ್ರೀಡೆಯಿಂದ ಬಾಂಧವ್ಯ ವೃದ್ಧಿ

    ನಾಪೋಕ್ಲು: ಕ್ರೀಡಾಕೂಟ ಬಾಂಧವ್ಯ ವೃದ್ಧಿಸಲು ಸಹಕಾರಿ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

    ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕುಂಜಿಲ ಗ್ರಾಮದ ನಾಲ್ನಾಡು ಶಿವಾಜಿ ಯೂತ್ಸ್ ವತಿಯಿಂದ ಜ.17 ರಿಂದ 21ರವರೆಗೆ ಆಯೋಜಿಸಲಾಗಿದ್ದ ಪ್ರಥಮ ವರ್ಷದ ಕ್ರಿಕೆಟ್ ಪಂದ್ಯಾವಳಿ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

    ಕ್ರೀಡೆಯಲ್ಲಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಸೌಹಾರ್ಧ ದೃಷ್ಠಿಯಲ್ಲಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು ಎಂದರು.
    ಶಾಸಕ ಎಸ್. ಪೊನ್ನಣ್ಣ, ಜನಪದ ತಜ್ಞ ಉತ್ತುಕುಟ್ಟಡ ತಿಮ್ಮಯ್ಯ (ಉಪ್ಪಚ್ಚ), ವಾಲಗ ತಜ್ಞ ಕೊಟ್ಟ ಕುಟ್ಟಂಡ ಶಂಭು ಅವರನ್ನು ಸನ್ಮಾನಿಸಲಾಯಿತು.
    ಕುಂಜಿಲ-ಕಕ್ಕಬೆ ನಾಲ್ನಾಡು ಶಿವಾಜಿ ಯೂತ್ ಕ್ಲಬ್ ಅಧ್ಯಕ್ಷ ಉತ್ತುಕುಟ್ಟಡ ನಿತಿನ್ ಪೊನ್ನಪ್ಪ, ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ, ಬಾಚಮಂಡ ರಾಜಾ ಪೂವಣ್ಣ, ಮೂಕುಟ್ಟಡ ಬೋಪಣ್ಣ, ಮೊಳ್ಳೆಕುಟ್ಟಂಡ ದಿನು ಭೋಜಪ್ಪ, ಬಾಚಮಂಡ ಲವ ಚಿಣ್ಣಪ್ಪ , ಕುಡಿಯರ ಮುತ್ತಪ್ಪ, ಹೇಮಾವತಿ, ಧರ್ಮಜಾ ಉತ್ತಪ್ಪ ಇತರರು ಇದ್ದರು.

    ಕ್ರೀಡಾಕೂಟದ ವಿಜೇತರು: ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅರಮೇರಿಯ ಎವೈಸಿಸಿ ತಂಡ ಗೆಲುವು ಸಾಧಿಸಿತು. ಪುತ್ತುಮಾಡ್ ಎ ತಂಡ ದ್ವಿತೀಯ ಹಾಗೂ ಪುತತುಮಾಡ್ ಬಿ ತಂಡ ತೃತೀಯ ಸ್ಥಾನ ಪಡೆಯಿತು. ಪಂದ್ಯ ಶ್ರೇಷ್ಠ ಪ್ರಶಸ್ತಿ ಪ್ರಮೋದ್ ಜೋಡುಬೀಟಿ, ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ದಿಲನ್ ಅರಮೆರಿ ಭಾಜನರಾದರು.
    ಮಹಿಳೆಯರ ಹಗ್ಗ ಜಗ್ಗಾಟ್ಟ ಸ್ಪರ್ಧೆಯಲ್ಲಿ ಕೋತೂರು ತಂಡ ಗೆಲುವು ಸಾಧಿಸಿದರೆ, ಪೆರ್ನಾಡ್ ತಂಡ ರನ್ನರ್ ಅಪ್ ಸ್ಥಾನ ಪಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts