More

    11 ಭಾಷೆಗಳಿರುವ ‘ಬನ್ನಿರಿ ಬೆಂಗಳೂರಿಗೆ …’ ಹಾಡು ಬಿಡುಗಡೆ

    ಬೆಂಗಳೂರು: ಬೆಂಗಳೂರಿನ ಕುರಿತು ಇದುವರೆಗೂ ಹಲವು ಹಾಡುಗಳು ಬಂದಿವೆ. ಈಗ ಅನಂತ್​ ನಾಗ್​, ಸಾಯಿಕುಮಾರ್​ ಮುಂತಾದವರು ಅಭಿನಯಿಸಿರುವ ‘ಮೇಡ್​ ಇನ್​ ಬೆಂಗಳೂರು’ ಚಿತ್ರದ ‘ಬನ್ನಿರಿ ಬೆಂಗಳೂರಿಗೆ …’ ಎಂಬ ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.

    ಇದನ್ನೂ ಓದಿ: ಡೆಂಘೆಯಿಂದ ಬೆಳಲಿ ಬೆಂಡಾದರೂ ಕ್ಯಾರೇ ಎನ್ನದ ‘ಇಂದಿರಾ ಗಾಂಧಿ’! ದೇಹಕ್ಕಷ್ಟೇ ಅನಾರೋಗ್ಯ ಎಂದ ನಟಿ

    ‘ಮೇಡ್​ ಇನ್​ ಬೆಂಗಳೂರು’ ಚಿತ್ರತಂಡವು ಇತ್ತೀಚೆಗೆ ಕಲಾವಿದರ ಸಂಘದಲ್ಲಿ ಅವಳಿ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ‘ಬನ್ನಿರೆ ಬೆಂಗಳೂರಿಗೆ …’ ಹಾಡನ್ನು ಹಿರಿಯ ನಿರ್ದೇಶಕ ಭಗವಾನ್​ ಬಿಡುಗಡೆ ಮಾಡಿದರೆ, ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್​ ಅವರು ಚಿತ್ರದ ಪೋಸ್ಟರ್​ ಬಿಡುಗಡೆ ಮಾಡಿದರು.

    ‘ಬನ್ನಿರಿ ಬೆಂಗಳೂರಿಗೆ …’ ಹಾಡಿನ ವಿಶೇಷತೆಯೆಂದರೆ, ಈ ಹಾಡನ್ನು ಹನ್ನೊಂದು ಭಾಷೆಗಳನ್ನು ಬಳಸಿ ರಚಿಸಲಾಗಿದೆ. ಜನಪ್ರಿಯ ಗಾಯಕರಾದ ಶ್ರೀಹರ್ಷ ಎಂ.ಆರ್, ಕಂಬದ ರಂಗಯ್ಯ, ರೋಹಿತ್ ಭಟ್, ಮದ್ವೇಶ್ ಭಾರದ್ವಾಜ್, ಮೇಘ ಕುಲಕರ್ಣಿ, ಪೂಜಾ ರಾವ್, ನಾರಾಯಣ ಶರ್ಮ, ಅದಮ್ಯ ರಮಾನಂದ್, ನಿಹಾಲ್ ವಿಜೇತ್, ಆದರ್ಶ ಶೆಣೈ, ಪ್ರವೀಣ್ ಶಣ್ಮುಗ, ಅಥರ್ವ ರಾವ್, ಅಪ್ಪಣ್ಣ, ಅಶ್ವಿನ್ ಪ್ರಭಾತ್, ರಾಕೇಶ್ ಪೂಜಾರಿ ಮುಂತಾದವರು ಈ ಹಾಡನ್ನು ಹಾಡಿದ್ದು, ಅಶ್ವಿನ್ ಪಿ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ.

    ಹಾಡು ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ನಿರ್ದೇಶಕ ಭಗವಾನ್​, ‘ನಾವು ಚಿತ್ರ ನಿರ್ಮಾಣ ಮಾಡಬೇಕಾದರೆ ಇಷ್ಟು ಸುಲಭವಿರಲಿಲ್ಲ. ಈಗ ತಂತ್ರಜ್ಞಾನ ತುಂಬಾ ಮುಂದುವರೆದಿದೆ. ಹೊಸಬರ ತಂಡದಿಂದ ಹೊಸಚಿತ್ರವೊಂದು ನಿರ್ಮಾಣವಾಗಿದೆ. ರಾಯರ ಭಕ್ತರು ನಿರ್ಮಾಣ ಮಾಡಿದ್ದಾರೆ. ಇಡೀ ತಂಡಕ್ಕೆ ರಾಯರ ಕೃಪೆಯಿರಲಿ’ ಎಂದು ಹಾರೈಸಿದರು.

    ಮಧ್ಯಮವರ್ಗದ ಹುಡುಗನೊಬ್ಬ ಐಟಿ ಕಂಪನಿ ಕೆಲಸ ಬಿಟ್ಟು, ಹೊಸ ಕಂಪನಿ ಆರಂಭಿಸುತ್ತಾನೆ. ಅದಕ್ಕಾಗಿ ಹೂಡಿಕೆದಾರರನ್ನು ಹುಡುಕುತ್ತಾನೆ. ಸಿಗದಿದ್ದಾಗ ಗ್ಯಾಂಗ್​ಸ್ಟರ್ ಬಳಿ ಹಣ ಪಡೆಯುತ್ತಾನೆ. ಮುಂದೇನಾಗುತ್ತದೆ ಎಂಬುದೆ ಚಿತ್ರದ ಕಥೆ’ ಎನ್ನುತ್ತಾರೆ ನಿರ್ದೇಶಕ ಪ್ರದೀಪ್ ಶಾಸ್ತ್ರಿ.

    ಇದನ್ನೂ ಓದಿ: ವಿಶ್ವರೂಪಿಣಿ ಹುಲಿಗೆಮ್ಮನಾದ ಪ್ರಿಯಾಂಕಾ; ದೇವಿ ಮಹಾತ್ಮೆ ಸಾರುವ ಚಿತ್ರಕ್ಕೆ ಸಾಯಿಪ್ರಕಾಶ್ ನಿರ್ದೇಶನ

    ‘ಮೇಡ್​ ಇನ್​ ಬೆಂಗಳೂರು’ ಚಿತ್ರದಲ್ಲಿ ಮಧುಸೂದನ್ ಗೋವಿಂದ್, ಪುನೀತ್ ಮಾಂಜ ಹಾಗೂ ವಂಶಿಧರ್ ಮುಂತಾದವರು ಅಭಿನಯಿಸಿದ್ದಾರೆ.

    ರವಿ ಬೋಪಣ್ಣ ಟ್ರೇಲರ್ ಬಿಡುಗಡೆ; ಹೊಸ ದಾಖಲೆ ಬರೆದ 7 ನಿಮಿಷದ ಟ್ರೇಲರ್..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts