More

    ದಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕಿನ ಸರ್ವ ಸದಸ್ಯರ ಸಭೆ ಏಕಾಏಕಿ ರದ್ದು!; ನೂರಾರು ಜನರ ಆಕ್ರೋಶ

    ಬೆಂಗಳೂರು: ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯ ದಿ ಬೆಂಗಳೂರು ಸಿಟಿ ಕೋ ಆಪರೇಟಿವ್ ಬ್ಯಾಂಕಿನ ಆವರಣದಲ್ಲಿ ಭಾನುವಾರ (ಸೆ.11) ನಡೆಯಬೇಕಿದ್ದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಏಕಾಏಕಿ ರದ್ದುಗೊಂಡ ಹಿನ್ನೆಲೆಯಲ್ಲಿ ನೂರಾರು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು.

    ಮೂರು ದಿನ ಮುಂಚಿತವೇ ಬ್ಯಾಂಕ್ ಎಲ್ಲ ಸದಸ್ಯರಿಗೆ ಮಹಾಸಭೆಯ ನೋಟಿಸ್ ಕಳುಹಿಸಿತ್ತು. ಸಭೆಯಲ್ಲಿ ಆಡಳಿತ ಮಂಡಳಿ ವರದಿ ಅನುಮೋದನೆ ಮತ್ತು ಬೈಲಾ ಬದಲಾವಣೆ ಸೇರಿ ಇತರ ವಿಷಯಗಳ ಬಗ್ಗೆ ಕಾರ್ಯಕಲಾಪಗಳು ನಡೆಯುವುದರಿಂದ ಭಾಗವಹಿಸಬೇಕೆಂದು ಸದಸ್ಯರಿಗೆ ಕಳುಹಿಸಿದ್ದ ಪತ್ರದಲ್ಲಿ ಬ್ಯಾಂಕ್ ಕೋರಿತ್ತು. ಹಾಗಾಗಿ, ನಗರದ ಮೂಲೆ ಮೂಲೆಯಿಂದ ತಮ್ಮ ಕೆಲಸ ಬಿಟ್ಟು ಬೆಳಗ್ಗೆ 10 ಗಂಟೆಗೆ ನೂರಾರು ಸದಸ್ಯರು ಬ್ಯಾಂಕ್ ಬಳಿ ಆಗಮಿಸಿದ್ದರು. ಆದರೆ, ಭೌತಿಕ ಸಭೆಯ ಬದಲಾಗಿ ವರ್ಚುವಲ್ ಮೀಟಿಂಗ್‌ನಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಬ್ಯಾಂಕಿನ ಗೇಟ್ ಮುಂಭಾಗ ಫಲಕ ಅಳವಡಿಸಲಾಗಿತ್ತು. ಇದನ್ನು ನೋಡಿದ ಸದಸ್ಯರು ಕಕ್ಕಾಬಿಕ್ಕಿಯಾಗಿ ಬ್ಯಾಂಕಿನ ಅಧ್ಯಕ್ಷ ಅವಲಹಳ್ಳಿ ಚಂದ್ರಪ್ಪ ಮತ್ತು ಆಡಳಿತ ಮಂಡಳಿ ನಿರ್ದೇಶಕರ ನಡೆಯನ್ನು ತೀವ್ರವಾಗಿ ಖಂಡಿಸಿ ಘೋಷಣೆ ಕೂಗಿದರು.

    ವಾರ್ಷಿಕ ಸಭೆ ನಡೆಯುವ ಬಗ್ಗೆ ಬ್ಯಾಂಕಿನವರು ನಮಗೆ ನೋಟಿಸ್ ಪತ್ರ ಕಳುಹಿಸಿದ್ದರು. ಹಾಗಾಗಿ, ಸಭೆಗೆ ಭಾಗವಹಿಸಲು ಬಂದಿದ್ದೇವೆ. ಸಭೆ ರದ್ದಾಗಿದೆ ಎಂದು ಬ್ಯಾಂಕಿನವರು ಫಲಕ ಅಳವಡಿಸಿದ್ದಾರೆ. ಆದರೆ, ಸಭೆ ರದ್ದಾದ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಬೇಕಿತ್ತು. ಇದರ ಬಗ್ಗೆ ನಮಗೆ ಬ್ಯಾಂಕಿನವರು ಮಾಹಿತಿ ಕೊಟ್ಟಿಲ್ಲ. ಸಾಕಷ್ಟು ಸದಸ್ಯರು ಹಿರಿಯ ನಾಗರಿಕರು ಇದ್ದಾರೆ. ದೂರದಿಂದ ಕೆಲವರು ಬಂದಿದ್ದಾರೆ. ಇಂಥ ಘಟನೆಗಳಿಂದ ಬ್ಯಾಂಕಿನ ಮೇಲೆ ನಮಗೆ ವಿಶ್ವಾಸ ಇಲ್ಲದಂತಾಗಲಿದೆ ಎಂದು ಬ್ಯಾಂಕಿನ ಸದಸ್ಯ ಗಂಗನರಸಿಂಹಯ್ಯ ಬೇಸರ ವ್ಯಕ್ತಪಡಿಸಿದರು.

    ನನ್ನಂಥ ಸುಂದರಿಯನ್ನು ಅವರು ನೋಡೇ ಇಲ್ಲ, ಅದಕ್ಕೆ ಬಂಧಿಸಿದ್ದಾರೆ!; ಪೊಲೀಸರ ವಿರುದ್ಧವೇ ಆರೋಪ..

    ಕೆರೆ ಬಳಿ ರೀಲ್ಸ್​ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts