ನನ್ನಂಥ ಸುಂದರಿಯನ್ನು ಅವರು ನೋಡೇ ಇಲ್ಲ, ಅದಕ್ಕೆ ಬಂಧಿಸಿದ್ದಾರೆ!; ಪೊಲೀಸರ ವಿರುದ್ಧವೇ ಆರೋಪ..

ನವದೆಹಲಿ: ನನ್ನಂಥ ಸುಂದರಿಯನ್ನು ಅವರು ನೋಡೇ ಇಲ್ಲ, ಅದಕ್ಕೆ ನನ್ನನ್ನು ಬಂಧಿಸಿದ್ದಾರೆ ಎಂಬುದಾಗಿ ಯುವತಿಯೊಬ್ಬಳು ಪೊಲೀಸರ ವಿರುದ್ಧವೇ ಆರೋಪ ಹೊರಿಸಿದ್ದಾಳೆ. ಮತ್ತೊಂದೆಡೆ ಆಕೆ ಮಾಡಿರುವ ಕಿತಾಪತಿಯೇ ಬೇರೆ ಎಂಬುದು ಪೊಲೀಸರಿಂದ ತಿಳಿದು ಬಂದಿದೆ. ಯುಎಸ್​ನ ನೆವಡದಲ್ಲಿನ ಹೆಂಡ್ ಬುಸ್ತಾಮಿ ಎಂಬ 28 ವರ್ಷದ ಯುವತಿ ಈ ಆರೋಪ ಮಾಡಿದ್ದಾಳೆ. ಈಕೆಯನ್ನು ಲಾಸ್ ವೇಗಸ್​ನ ಹ್ಯಾರಿ ರೀಡ್ ಇಂಟರ್​ನ್ಯಾಷನಲ್ ಏರ್​ಪೋರ್ಟ್​​ನಲ್ಲಿ ಆ. 31ರಂದು ಬಂಧಿಸಲಾಗಿದೆ. ಇಲ್ಲಿನ ಚಿಲ್ಲಿಸ್ ರೆಸ್ಟೋರೆಂಟ್​​ನಲ್ಲಿ ಬಿಲ್​ ಕೊಡದೆ ಹೋಗಲೆತ್ನಿಸಿದ ಈಕೆ ಏರ್​ಪೋರ್ಟ್​ ನಿಯಮಗಳನ್ನು ಉಲ್ಲಂಘಿಸಿದ್ದಳು. … Continue reading ನನ್ನಂಥ ಸುಂದರಿಯನ್ನು ಅವರು ನೋಡೇ ಇಲ್ಲ, ಅದಕ್ಕೆ ಬಂಧಿಸಿದ್ದಾರೆ!; ಪೊಲೀಸರ ವಿರುದ್ಧವೇ ಆರೋಪ..