More

    ಕ್ರಿಕೆಟ್ ಆಡಲು ಮರಕ್ಕಿಂತ ಬಿದಿರಿನ ಬ್ಯಾಟ್ ಉತ್ತಮವಂತೆ!

    ಲಂಡನ್: ಮರದ ಕ್ರಿಕೆಟ್ ಬ್ಯಾಟ್‌ಗಳ ತಯಾರಿಕೆ ಶೀಘ್ರದಲ್ಲಿಯೇ ಸ್ಥಗಿತಗೊಳ್ಳಲಿದೆಯೇ? ಇಂಗ್ಲೆಂಡ್‌ನ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದ ಅಧ್ಯಯನವನ್ನು ಒಪ್ಪಿಕೊಳ್ಳುವುದಾದರೆ ಇದಕ್ಕೆ ಹೌದು ಎಂಬ ಉತ್ತರವನ್ನೇ ನೀಡಬೇಕಾಗುತ್ತದೆ. ಯಾಕೆಂದರೆ ಕೆಂಬ್ರಿಡ್ಜ್ ವಿವಿಯ ಅಧ್ಯಯನದ ಪ್ರಕಾರ, ಕ್ರಿಕೆಟ್ ಆಡಲು ಮರದ ಬ್ಯಾಟ್‌ಗಿಂತ ಬಿದಿರಿನ ಬ್ಯಾಟ್ ಉತ್ತಮವಂತೆ!

    ಹಣಕಾಸು ಮತ್ತು ಇತರ ಎಲ್ಲ ಅಂಶಗಳಿಂದಲೂ ಕ್ರಿಕೆಟ್ ಆಡಲು ಮರಕ್ಕಿಂತ ಬಿದಿರಿನ ಬ್ಯಾಟ್ ಸೂಕ್ತವಾದುದು ಎಂದು ಕೆಂಬ್ರಿಡ್ಜ್ ವಿವಿ ಅಧ್ಯಯನ ತಿಳಿಸಿದೆ. ಸಾಮಾನ್ಯವಾಗಿ ಕ್ರಿಕೆಟ್ ಬ್ಯಾಟ್ ಅನ್ನು ಇಂಗ್ಲಿಷ್ ಅಥವಾ ಕಾಶ್ಮೀರಿ ಮರದಿಂದ ಕ್ರಿಕೆಟ್ ಬ್ಯಾಟ್ ಸಿದ್ಧಪಡಿಸಲಾಗುತ್ತದೆ. ಆದರೆ ಬಿದಿರಿನ ಬ್ಯಾಟ್‌ಗಳು ಇದಕ್ಕಿಂತಲೂ ಕಡಿಮೆ ದರದಲ್ಲಿ ಸಿದ್ಧಗೊಳ್ಳುತ್ತವೆ ಎಂದು ಕೆಂಬ್ರಿಡ್ಜ್ ವಿವಿಯ ದಾರ್ಶಿಲ್ ಷಾ ಮತ್ತು ಬೆನ್ ಟಿಂಕ್ಲರ್-ಡಾರ್ವಿಸ್ ಸಿದ್ಧಪಡಿಸಿರುವ ವರದಿಯಲ್ಲಿ ತಿಳಿಸಲಾಗಿದೆ. ‘ಬಿದಿರಿನ ಬ್ಯಾಟ್‌ನಿಂದ ಯಾರ್ಕರ್‌ಗಳಿಗೆ ಬೌಂಡರಿ ಬಾರಿಸುವುದು ಹೆಚ್ಚು ಸುಲಭವಾದುದು. ಮಕ್ಕಳಿಗೂ ಬಿದಿರಿನ ಬ್ಯಾಟ್‌ನಲ್ಲಿ ಆಡುವುದು ಸರಳವಾಗಿರುತ್ತದೆ’ ಎಂದು ದಾರ್ಶಿಲ್ ಷಾ ‘ದಿ ಟೈಮ್ಸ್’ ವರದಿಯಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಸ್ಪಿನ್ನರ್ ಪೀಯುಷ್ ಚಾವ್ಲಾ ತಂದೆ ಕೋವಿಡ್‌ಗೆ ಬಲಿ

    ಇತ್ತೀಚೆಗೆ ಇಂಗ್ಲಿಷ್ ಮರದ ಪೂರೈಕೆಯಲ್ಲಿ ಸಾಕಷ್ಟು ಕೊರತೆ ಉಂಟಾಗಿದೆ. ಈ ಮರಗಳನ್ನು ಕಡಿಯುವುದಕ್ಕೆ ಮುನ್ನ ಸುಮಾರು 15 ವರ್ಷಗಳ ಕಾಲ ಅವನ್ನು ಬೆಳೆಸಬೇಕಾಗುತ್ತದೆ. ಅಲ್ಲದೆ ಬ್ಯಾಟ್ ಸಿದ್ಧಪಡಿಸುವ ವೇಳೆ ಮರದ ಶೇ. 15-30 ಭಾಗ ವ್ಯರ್ಥವಾಗುತ್ತವೆ. ಇದಕ್ಕೆ ಬದಲಾಗಿ ಬಿದಿರಿನ ಬ್ಯಾಟ್‌ಗಳನ್ನು ಬಳಸಿದರೆ ಅಗ್ಗವಾಗಿರುವುದು ಮಾತ್ರವಲ್ಲದೆ, ಬಿದಿರು ಬೇಗನೆ ಬೆಳೆಯುವಂಥದ್ದಾಗಿರುತ್ತವೆ. ಕ್ರಿಕೆಟ್ ಆಟವನ್ನು ಚೀನಾ, ಜಪಾನ್ ಮತ್ತು ದಕ್ಷಿಣ ಅಮೆರಿಕ ದೇಶಗಳಿಗೆ ವಿಸ್ತರಿಸಲು ಕೂಡ ಇದು ಪೂರಕವಾಗಿರುತ್ತದೆ ಎಂದು ಅಧ್ಯಯನದಲ್ಲಿ ವಿವರಿಸಲಾಗಿದೆ.

    ಬಿದಿರಿನ ಬ್ಯಾಟ್‌ಗಳು ಒಡೆದು ಹೋಗುವ ಅಪಾಯಗಳಿದ್ದರೂ, ಮರದ ಬ್ಯಾಟ್‌ಗಳಿಗಿಂತ ಹೆಚ್ಚು ಸದೃಢವಾಗಿಯೇ ಇರುತ್ತವೆ. ಚೆಂಡನ್ನು ಬಾರಿಸುವ ವೇಳೆ ಮರದ ಬ್ಯಾಟ್‌ನಿಂದ ಬರುವಂಥದ್ದೇ ಶಬ್ದ ಬಿದಿರಿನ ಬ್ಯಾಟ್‌ನಿಂದಲೂ ಬರುತ್ತದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಆದರೆ ಐಸಿಸಿ ನಿಯಮದ ಪ್ರಕಾರ ಸದ್ಯ, ಅಂತಾರಾಷ್ಟ್ರೀಯ ಕ್ರಿಕೆಟ್‌ಗಳಲ್ಲಿ ಮರದ ಬ್ಯಾಟ್ ಮಾತ್ರ ಬಳಸಲು ಅವಕಾಶವಿದೆ.

    ಅಗಲಿದ ಅಮ್ಮ, ಅಕ್ಕನಿಗೆ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಭಾವುಕ ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts