More

    ಕೋವಿಡ್‌ನಿಂದ 79 ಜನ ಗುಣಮುಖ

    ಬಾಗಲಕೋಟೆ: ಜಿಲ್ಲೆಯಲ್ಲಿ ಮತ್ತೆ 79 ಜನರು ಕೋವಿಡ್ ಚಿಕಿತ್ಸೆಯಿಂದ ಸೋಂಕು ಮುಕ್ತರಾಗಿದ್ದು, ಭಾನುವಾರ ಸಂಜೆ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ರಾಜೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಬಾಗಲಕೋಟೆಯಲ್ಲಿ ಕೋವಿಡ್‌ನಿಂದ ದಿನದಿಂದ ದಿನಕ್ಕೆ ಗುಣಮುಖರಾಗುತ್ತಿರುವ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಲ್ಲಿಯವರೆಗೆ 689 ಕೋವಿಡ್ ಪಾಸಿಟಿವ್ ಪ್ರಕರಣಗಳ ಪೈಕಿ 343 ಜನ ಗುಣಮುಖರಾಗಿರುತ್ತಾರೆ. 30 ಜನ ಮೃತಪಟ್ಟಿರುತ್ತಾರೆ.

    ಬಾಗಲಕೋಟೆ, ಕಲಾದಗಿ ಗ್ರಾಮ, ತುಳಸಿಗೇರಿ ಗ್ರಾಮ, ಬೀಳಗಿ, ಬೀಳಗಿ ತಾಲೂಕಿನ ಗಲಗಲಿ, ಮುಧೋಳ ತಾಲೂಕಿನ ಮಳಲಿ ಗ್ರಾಮ, ಜಮಖಂಡಿ ನಗರ, ಮುಧೋಳನಗರ, ಬಾಗಲಕೋಟೆ ತಾಲೂಕಿನ ಚಿಕ್ಕ ಮ್ಯಾಗೇರಿ, ಇಳಕಲ್ಲ ನಗರ, ಗುಳೇದಗುಡ್ಡ ಕೋಟೆಕಲ್ಲ ಗ್ರಾಮ, ಬಾದಾಮಿ, ಹುನಗುಂದ ತಾಲೂಕಿನ ಸುಳೇಬಾವಿ ಗ್ರಾಮ, ಬಾಗಲಕೋಟೆ ತಾಲೂಕಿನ ಶಿರೂರ, ಹುನಗುಂದ ತಾಲೂಕಿನ ಬಲಕುಂದಿ ಗ್ರಾಮ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕರೊನಾ ಸೋಂಕು ಅಂಟಿಕೊಂಡು ಕೋವಿಡ್ ಆಸ್ಪತ್ರೆಗೆ ದಾಖಲಿದ್ದ 79 ಜನ ಸೋಂಕಿತರು ಗುಣಮುಖರಾಗಿದ್ದಾರೆ.

    ಗುಣಮುಖರಾದವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿಲ್ಲಾ ಆಸ್ಪತ್ರೆಯ ಶಸ ಚಿಕಿತ್ಸಕ ಡಾ. ಪ್ರಕಾಶ ಬಿರಾದಾರ ಪ್ರಮಾಣ ಪತ್ರವನ್ನು ವಿತರಿಸಿದರು. ಆಸ್ಪತ್ರೆಯ ಸಿಬ್ಬಂದಿ ಗುಣಮುಖರಾದವರ ಕೈಗಳಿಗೆ ಸೀಲ್ ಹಾಕಿ 14 ದಿನಗಳ ಹೋಮ್ ಕ್ವಾರಂಟೈನ್‌ನಲ್ಲಿ ಇರುವಂತೆ ತಿಳಿಸಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts