More

    ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಆಗ್ರಹ

    ವಿಜಯಪುರ: ನಗರದ ಮನಗೂಳಿ ಅಗಸಿ ಬಳಿಯ ಡಾ. ಬಿ.ಆರ್. ಅಂಬೇಡ್ಕರ ಸಮುದಾಯ ಭವನ ನಿರ್ಮಾಣ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಹತ್ತಿರ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಭಾನುವಾರ 6ನೇ ದಿನ ಪೂರೈಸಿತು.

    ಧರಣಿ ಸತ್ಯಾಗ್ರಹಕ್ಕೆ ದ್ರಾವಿಡ ದಲಿತ ಸೇನಾ ಸಂಘಟನೆ ಪದಾಧಿಕಾರಿಗಳು ಬೆಂಬಲ ಸೂಚಿಸಿ ನಂತರ ಮಾತನಾಡಿದ ರಾಜ್ಯ ಕಾರ್ಯದರ್ಶಿ ಸಂತೋಷ ಟಕ್ಕೆ, ನಗರದಲ್ಲಿ ದಲಿತರ ಸಮುದಾಯ ಭವನ ನಿರ್ಮಾಣ ಸಮಸ್ಯೆ ತ್ವರಿತವಾಗಿ ಬಗೆಹರಿಸದಿದ್ದರೆ ಜಿಲ್ಲಾಡಳಿತ ಹಾಗೂ ಸರಕಾರ ವಿರುದ್ಧ ರಾಜ್ಯಾದ್ಯಂತ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಸೇನೆಯ ಜಿಲ್ಲಾಧ್ಯಕ್ಷ ಸೋಮು ಹಟ್ಟಿ ಮಾತನಾಡಿ, ಕಳೆದ ಆರು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತರು ಸಮುದಾಯ ಭವನದ ಜಾಗಕ್ಕಾಗಿ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸೇರಿ ಯಾರೊಬ್ಬರು ಕೂಡಾ ಸಮಸ್ಯೆಗೆ ಕೇಳಲು ಮುಂದಾಗದಿರುವುದು ದುರಂತದ ಸಂಗತಿ. ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.

    ಭಾರತೀಯ ದ್ರಾವಿಡ ಸೇನಾ ರಾಜಾಧ್ಯಕ್ಷ ರಮೇಶ ಕವಲಗಿ, ಅಂಬೇಡ್ಕರ ಯುವಕ ಸೇನೆ ಅಧ್ಯಕ್ಷ ಶ್ರೀಶೈಲ ಕಾಖಂಡಕಿ, ಆಕಾಶ ಕಲ್ಲವಗೋಳ, ಅಜಯ ಬೋರಗಿ, ನಾಮದೇವ ಹೊಸಮನಿ, ವಿರುಪಾಕ್ಷಿ ಪಡಶೆಟ್ಟಿ, ಪ್ರಶಾಂತ ಹಟ್ಟಿ, ಸುಭಾಸ ವಾಲೀಕಾರ, ಸನ್ನಿ ಕಾಖಂಡಕಿ, ಬಸವಕುಮಾರ ಕಾಂಬಳೆ, ರಾಜ ರತನ ಕಾಂಬಳೆ, ಪ್ರಕಾಶ ಚಲವಾದಿ, ಆಕಾಶ ಚಲವಾದಿ, ಚಿಕ್ಕಯ್ಯ ಚಲವಾದಿ, ಮಧು ಕಾಖಂಡಕಿ, ಮರಿಯಪ್ಪ ಖಜಾಪೂರ, ಚೇತನ ಜವಳಗಿ, ಮಂಜುನಾಥ ಶಿವಶರಣ, ಉಮೇಶ ಕಾಂಬಳೆ, ಬಸವರಾಜ ಕುಬಕಡ್ಡಿ, ರಾಜು ವಾಲಿಕಾರ, ಕೃಷ್ಣಾ ಚಲವಾದಿ, ಪ್ರತಾಪ ಚಿಕ್ಕಲಕಿ, ಆಕಾಶ ಕಾಂಬಳೆ, ಸಚಿನ ಕಾಖಂಡಕಿ, ವಿಶಾಲ ಮಲಕಣ್ಣವರ, ರವಿ ಕಾಖಂಡಕಿ, ಜಗದೀಶ ಕೂಡಗಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts