More

  ಅಮೃತ ಸರೋವರ ರೈತರಿಗೆ ವರದಾನ

  ವಿಜಯಪುರ: ತಿಕೋಟಾ ತಾಲೂಕಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಪಂಗಳ ಮೂಲಕ ಒಟ್ಟು 7 ಅಮೃತ ಸರೋವರಗಳನ್ನು ನಿರ್ಮಾಣ ಮಾಡಿದ್ದು, ಪ್ರಸ್ತುತ ಸಿದ್ದಾಪುರ (ಕೆ) ಗ್ರಾಪಂ ವ್ಯಾಪ್ತಿಯ ಧನ್ನರ್ಗಿ ಗ್ರಾಮದಲ್ಲಿ ನಿರ್ಮಿಸಿದ ಅಮೃತ ಸರೋವರ ಗುರುವಾರ ಸುರಿದ ಭಾರಿ ಮಳೆಗೆ ತುಂಬಿದೆ. ಅದರಿಂದ ಈ ಭಾಗದ ಸಾವಿರಾರು ರೈತರಿಗೆ ಅನುಕೂಲವಾಗಲಿದೆ ಎಂದು ತಿಕೋಟಾ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಸಾಲಿ ಹೇಳಿದರು.

  ತಿಕೋಟಾ ತಾಲೂಕಿನ ಧನ್ನರ್ಗಿ ಗ್ರಾಮದ ಅಮೃತ ಸರೋವರ ಕೆರೆಗೆ ಶುಕ್ರವಾರ ವಿವಿಧ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅವರು ಮಾತನಾಡಿ, 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆದೇಶದಂತೆ ಕೆರೆಗಳ ಸುಧಾರಣೆಗೆ ನಮ್ಮ ತಾಲೂಕಿನಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು ಎಂದರು.

  ಗ್ರಾಪಂ ಸದಸ್ಯ ಸುರೇಶ ಅವಟಿ ಮಾತನಾಡಿ, ಅಮೃತ ಸರೋವರ ನಿರ್ಮಾಣದಲ್ಲಿ ನಮಗೆ ಜಿಪಂ, ತಾಪಂ ಮತ್ತು ಗ್ರಾಪಂ ಅಧಿಕಾರಿಗಳು ತುಂಬ ಸಹಕಾರ ನೀಡಿದ್ದಾರೆ. ಕೆರೆಗಳಿಗೆ ಕಾಲಕಾಲಕ್ಕೆ ಭೇಟಿ ನೀಡಿ, ಸೂಕ್ತ ಸೂಚನೆ ನೀಡಿದ ಫಲವಾಗಿ ಇಂದು ನಮ್ಮ ಊರಿನಲ್ಲಿ ಸುಂದರ ಅಮೃತ ಸರೋವರ ನಿರ್ಮಾಣವಾಗಿದೆ ಎಂದರು.

  ಗ್ರಾಮದ ಮುಖಂಡ ಮಚ್ಚೇಂದ್ರ ಹೊಸಮನಿ, ತಾಂತ್ರಿಕ ಸಂಯೋಜಕ ಸಂಜೀವಕುಮಾರ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
  ಗ್ರಾಪಂ ಸದಸ್ಯರಾದ ಬಾಲಕೃಷ್ಣ ಕದಂ, ಸುರೇಶ ಅವಟಿ, ತಾಪಂ ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಸಿಬ್ಬಂದಿ ಸುರೇಶ ಸಪ್ತಾಳಕರ ಮತ್ತಿತರರಿದ್ದರು.


  See also  ಶುಶ್ರೂಷಕ ಸೇವೆ ಅಗ್ರಣೀಯ: ಡಾ. ವಿಜಯಮಹಾಂತೇಶ ದಾನಮ್ಮನವರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts