More

    ಅಸ್ತಮಾ ನಿಯಂತ್ರಣಕ್ಕೆ ‘ಬದ್ಧ ಪದ್ಮಾಸನ’ ಮಾಡಿ! ಗೂನು ಬೆನ್ನಿಗೂ ಇದು ಪರಿಹಾರ!

    ಅಸ್ತಮಾ ನಿಯಂತ್ರಣಕ್ಕೆ ಮತ್ತು ಗೂನು ಬೆನ್ನು ನಿವಾರಣೆಗೆ ಉಪಯುಕ್ತವಾದ ಆಸನವೆಂದರೆ ‘ಬದ್ಧ ಪದ್ಮಾಸನ’. ಬದ್ಧ ಎಂದರೆ ಬಿಗಿಯಾಗುವುದು ಅಥವಾ ಕಟ್ಟುವುದು ಎಂದರ್ಥ. ಈ ಆಸನದಲ್ಲಿ ಪದ್ಮಾಸನ ಭಂಗಿಯಲ್ಲಿ ಕೂತು, ಕೈಗಳನ್ನು ಬೆನ್ನಿನ ಹಿಂದಕ್ಕೆ ಕಟ್ಟಲಾಗುತ್ತದೆ.

    ಪ್ರಯೋಜನಗಳು: ಶ್ವಾಸಕೋಶಕ್ಕೆ ಸಮರ್ಪಕವಾಗಿ ವಾಯು ಸಂಚಾರ ಜರುಗಿ ಅಸ್ತಮಾ ನಿಯಂತ್ರಣವಾಗುತ್ತದೆ. ಎದೆ ವಿಶಾಲಗೊಳ್ಳುತ್ತದೆ. ಸೊಂಟ ಮತ್ತು ಹೊಟ್ಟೆಯ ಬೊಜ್ಜು ಕರಗುತ್ತದೆ. ತೋಳುಗಳು ಬಲಗೊಳ್ಳುತ್ತವೆ. ಈ ಆಸನ ಮಾಡಿದಾಗ ಭುಜ, ಕೈಗಳು, ಎದೆ, ಶ್ವಾಸಕೋಶ – ಹೀಗೆ ದೇಹದ ವಿವಿಧ ಅಂಗಾಂಗಗಳು ಎಳೆತಕ್ಕೆ ಒಳಗಾಗಿ, ದೇಹದ ರಕ್ತ ಸಂಚಾರ ಉತ್ತಮಗೊಳ್ಳತ್ತದೆ. ಮುಖ್ಯವಾಗಿ ಗೂನು ಬೆನ್ನು ಪರಿಹಾರವಾಗುತ್ತದೆ.

    ಇದನ್ನೂ ಓದಿ: ಶ್ರದ್ಧಾ ಕೇಂದ್ರಗಳ ರಕ್ಷಣೆ ಜವಾಬ್ದಾರಿ, ಉಡುಪಿಯಲ್ಲಿ ಸಚಿವೆ ಶೋಭಾ ಹೇಳಿಕೆ

    ಅಭ್ಯಾಸ ಕ್ರಮ: ಪ್ರಥಮವಾಗಿ ಕಾರ್ಪೆಟ್​ ಮೇಲೆ ಕುಳಿತು ಪದ್ಮಾಸನ ಮಾಡಬೇಕು. ಆಮೇಲೆ ಎಡಗೈಯನ್ನು ಎತ್ತಿ ನೇರವಾಗಿಸಿ, ಬೆನ್ನಿನ ಹಿಂದಕ್ಕೆ ತೆಗೆದುಕೊಂಡು ಹೋಗಿ ಎಡಗಾಲಿನ ಹೆಬ್ಬೆರಳನ್ನು ಹಿಡಿದುಕೊಳ್ಳಬೇಕು. ಅದೇ ರೀತಿ ಉಸಿರನ್ನು ಬಿಡುತ್ತಾ, ಬಲಗೈನಿಂದ ಬಲಗಾಲಿನ ಹೆಬ್ಬೆರಳನ್ನು ಹಿಡಿದುಕೊಳ್ಳಬೇಕು. ಇಲ್ಲಿ ಸಹಜವಾಗಿ ಬೆನ್ನು, ಕುತ್ತಿಗೆ ನೇರವಾಗಿರುತ್ತವೆ. ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸಬೇಕು. ನಂತರ ಉಸಿರನ್ನು ಬಿಡುತ್ತಾ ಕೈಗಳನ್ನು ನಿಧಾನವಾಗಿ ಬಿಡಿಸಿಕೊಳ್ಳಬೇಕು. ನಂತರ ಕಾಲುಗಳನ್ನು ಚಾಚಿ ವಿಶ್ರಾಂತಿ ಪಡೆಯಬೇಕು.

    ಆರಂಭದಲ್ಲಿ ಕಷ್ಟವೆನಿಸಿದರೂ, ಅಭ್ಯಾಸ ಮಾಡುತ್ತಾ ಹೋದಂತೆ ಈ ಯೋಗಾಸನ ಸುಲಭವೆನಿಸುತ್ತದೆ. ತೀವ್ರ ಭುಜ ನೋವು ಇರುವವರು ಈ ಆಸನ ಮಾಡಬಾರದು.

    ಓಲಾ ಎಲೆಕ್ಟ್ರಿಕ್​ ಸ್ಕೂಟರ್​​ನ ಹೊಸ ದಾಖಲೆ: 2 ದಿನಗಳಲ್ಲಿ 1100 ಕೋಟಿ ರೂ. ಮೊತ್ತದ ಮಾರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts