More

    ವಿದ್ಯುತ್​ಬೇಲಿ ಹಾಕಿದ್ದು ಕಾಡು ಹಂದಿಗಾಗಿ; ಪ್ರಾಣ ಬಿಟ್ಟಿದ್ದು ಮಾತ್ರ ಆನೆಮರಿ…

    ಹೊಸೂರು: ಜಮೀನು ಬೇಲಿಗೆ ಹರಿಸಿದ್ದ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಆನೆಮರಿಯನ್ನು ಅದೇ ಜಮೀನಿನಲ್ಲಿ ಹೂತುಹಾಕಿದ್ದ ಪ್ರಕರಣ ಕೃಷ್ಣಗಿರಿ ಜಿಲ್ಲೆ ರಾಯಕೋಟೆ ಸಮೀಪದ ಕಡೂರು ಗ್ರಾಮದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರೈತ ಎಲ್ಲಪ್ಪ(63) ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಪರಾರಿಯಾಗಿರುವ ಮತ್ತಿಬ್ಬರು ಆರೋಪಿಗಳ ಬಂಧನಕ್ಕೆ ಹುಡುಕಾಟ ನಡೆದಿದೆ.

    ಏನಿದು ಪ್ರಕರಣ:
    ಕಾಡುಹಂದಿಗಳಿಂದ ಬೆಳೆ ರಕ್ಷಣೆಗಾಗಿ ಎಲ್ಲಪ್ಪ ಜಮೀನಿನ ಸುತ್ತ ತಂತಿ ಬೇಲಿ ಹಾಕಿ ರಾತ್ರಿ ವೇಳೆ ಅದಕ್ಕೆ ವಿದ್ಯುತ್ ಸಂಪರ್ಕ ನೀಡುತ್ತಿದ್ದ. ಕೆಲ ದಿನದ ಹಿಂದೆ ಆಹಾರ ಅರಸಿ ಬಂದ ಆನೆಮರಿ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಮೃತಪಟ್ಟಿತ್ತು. ಇದನ್ನು ಗಮನಿಸಿದ ಎಲ್ಲಪ್ಪ ಹಾಗೂ ಆತನ ಮಕ್ಕಳು ಹೆದರಿ ಅದೇ ಜಮೀನಿನಲ್ಲಿ ಆನೆಮರಿಯನ್ನು ಹೂತುಹಾಕಿದ್ದರು ಎನ್ನಲಾಗಿದೆ.

    ದುರ್ವಾಸನೆಯಿಂದ ಪತ್ತೆ:
    ಸೋಮವಾರ ಸಂಜೆಯಿಂದಲೇ ಜಮೀನಿನ ಕಡೆಯಿಂದ ದುರ್ವಾಸನೆ ಬರುತ್ತಿದ್ದದನ್ನು ಗಮನಿಸಿದ ನೆರೆಹೊರೆ ಜಮೀನಿನ ರೈತರು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಪೊಲೀಸರೊಂದಿಗೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಶವಪರೀಕ್ಷೆ ಬಳಿಕ ಸತ್ಯಾಂಶ:
    ಪ್ರಕರಣ ಸಂಬಂಧ ಆರೋಪಿ ಎಲ್ಲಪ್ಪನನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಸಹಕರಿಸಿದ ಮತ್ತಿಬ್ಬರು ಪರಾರಿಯಾಗಿದ್ದಾರೆ. ಆನೆ ಕಳೆಬರವನ್ನು ಶವಪರೀಕ್ಷೆಗೆ ಕಳುಹಿಸಲಾಗಿದ್ದು, ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದೆಯೇ ಅಥವಾ ಮತ್ಯಾವ ಕಾರಣಕ್ಕೆ ಆನೆಮರಿ ಸಾವನ್ನಪ್ಪಿದೆ ಎಂಬುದು ಶವಪರೀಕ್ಷೆ ವರದಿ ಬಳಿಕ ತಿಳಿದುಬರಲಿದೆ ಎಂದು ಅರಣ್ಯಾಧಿಕಾರಿ ಕಾರ್ತಿಕೇಯನ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts