More

    ಶರೀರದಲ್ಲಿ ಕೊಬ್ಬು ಹೆಚ್ಚಾಗಿದೆಯಾ? ಬಾದಾಮಿ ತಿನ್ನಿ, ತೂಕ ಕಳೆದುಕೊಳ್ಳಿ…

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿಯಿಂದ ಜನರಲ್ಲಿ ಹೆಚ್ಚು ಬೊಜ್ಜು ಬೆಳೆಯುತ್ತಿದ್ದು ಅನೇಕರು ಆರೋಗ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಹೆಚ್ಚಿನ ತೂಕ ಆರೋಗ್ಯಕ್ಕೆ ಅನೇಕ ರಿತಿಯಲ್ಲಿ ಹಾನಿ ಮಾಡಬಹುದು. ಇದರಿಂದ ಬಚಾವಾಗುವ ಒಂದು ವಿಧಾನ ಏನೆಂದರೆ ಕೊಬ್ಬು ಕರಗಿಸುವುದು. ಕೆಲವರಲ್ಲಿ ಎಷ್ಟೇ ವ್ಯಾಯಾಮ ಮಾಡಿದರೂ ಕೊಬ್ಬು ಕರಗುವುದಿಲ್ಲ. ಅಂತಹವರು ವ್ಯಾಯಾಮದ ಜೊತೆಜೊತೆಗೆ ಆಹಾರದಲ್ಲಿ ಕೂಡ ಬದಲಾವಣೆ ಮಾಡಿಕೊಳ್ಳಬೇಕು. ನೀವು ಬಾದಾಮಿಯನ್ನು ನಿಯಮಿತವಾಗಿ ಸೇವಿಸಿದರೆ ಅದು ತೂಕ ಕಳೆದುಕೊಳ್ಳಲು ಸಹಕಾರಿ ಆಗಲಿದೆ.

    ದಕ್ಷಿಣ ಆಸ್ಟ್ರೇಲಿಯಾದ ವಿಶ್ವವಿದ್ಯಾನಿಲಯ ಹೊಸ ಸಂಶೋಧನೆ ಮಾಡಿದೆ. ಅದರ ಪ್ರಕಾರ ನಿತ್ಯವೂ ಕೆಲವು ಬಾದಾಮಿಗಳನ್ನು ಸೇವಿಸಿದರೆ ತೂಕವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ಬಾದಾಮಿ ಮಾನವನ ಹಸಿವನ್ನು ಹೇಗೆ ಬದಲಾಯಿಸಬಲ್ಲದು ಎಂಬುದನ್ನು ಅಧ್ಯಯನ ಮಾಡಿದ ಸಂಶೋಧಕರು 30 ರಿಂದ 50 ಗ್ರಾಂ ಬಾದಾಮಿ ತಿಂದ ಜನರು ಇಡೀ ದಿನದಲ್ಲಿ ಕಡಿಮೆ ಆಹಾರವನ್ನು ತೆಗೆದುಕೊಂಡರು ಎಂದು ಕಂಡುಕೊಂಡಿದ್ದಾರೆ.

    ಸಿ-ಪೆಪ್ಟೈಡ್ ಪ್ರತಿಕ್ರಿಯೆಗಳು ಇನ್ಸುಲಿನ್​ನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಬಾದಾಮಿ ಸೇವನೆ ಮಧುಮೇಹ ಹೃದಯ ಮತ್ತು ರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಬಾದಾಮಿ ಪ್ಯಾಂಕ್ರಿಯಾಟಿಕ್ ಪಾಲಿಪೆಪ್ಟೈಡ್ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರಿಂದ ಜನರು ಕಡಿಮೆ ಆಹಾರ ಸೇವನೆ ಮಾಡುತ್ತಾರೆ. ಅದಲ್ಲದೇ ಬಾದಾಮಿ ಮೆದುಳಿಗೆ ಹಸಿವು ನೀಗಿದ ಸಂಕೇತಗಳನ್ನು ಕಳುಹಿಸುತ್ತದೆ. ಇವೆರಡೂ ವಿಷಯಗಳು ತೂಕ ನಿಯಂತ್ರಣಕ್ಕೆ ಸಹಕಾರಿ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts