More

    ಉಗ್ರರಿಗೆ ಕರ್ನಾಟಕವೇ ಟಾರ್ಗೆಟ್​, ಆರಂಭಿಕ ಹಂತದಲ್ಲೇ ಚಿವುಟಿ ಹಾಕಲು ಕ್ರಮ ಕೈಗೊಳ್ತೀವಿ: ಸಿಎಂ ಬೊಮ್ಮಾಯಿ

    ಹಿರಿಯೂರು: ಕುಕ್ಕರ್​ ಬಾಂಬ್​ ಸ್ಫೋಟ ಪ್ರಕರಣವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಉಗ್ರರಿಗೆ ಕರ್ನಾಟಕವೇ ಟಾರ್ಗೆಟ್​ ಆಗಿರುವುದು ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ರಾಜ್ಯದಲ್ಲಿ ಉಗ್ರವಾದ ಬೆಳೆಯಲು ಅವಕಾಶ ನೀಡುವುದಿಲ್ಲ. ಆರಂಭಿಕ ಹಂತದಲ್ಲೇ ಚಿವುಟಿ ಹಾಕಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹಿರಿಯೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

    ಕರ್ನಾಟಕ ಪೊಲೀಸರು ಈಗಾಗಲೇ 18 ಸ್ಲೀಪರ್​ ಸೆಲ್​ಗಳನ್ನು ಪತ್ತೆಹಚ್ಚಿ ಅವರನ್ನು ತಿಹಾರ್​ ಜೈಲಿಗೆ ಕಳುಹಿಸಿದ್ದಾರೆ. ಆದಾಗ್ಯೂ ಕೆಲವರು ಹೊರ ರಾಜ್ಯಗಳ ಜತೆ ಸಂಪರ್ಕವಿರಿಸಿಕೊಂಡು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.

    ಕುಕ್ಕರ್​ ಬಾಂಬ್​ ಸ್ಫೋಟ ನಡೆದ 24 ಗಂಟೆಯೊಳಗೆ ನಮ್ಮ ಪೊಲೀಸರು ಇದಕ್ಕೆ ಸಂಬಂಧಿಸಿದ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಭಯೋತ್ಪಾದನೆ ನಿರತರಾದ ಕೆಲವರನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಉಗ್ರವಾದ ಹತ್ತಿಕ್ಕುವ ನಮ್ಮ ಕಾರ್ಯಾಚರಣೆ ಮುಂದುವರಿಯಲಿದೆ ಎಂದರು.

    ದೇಶದ ಸುರಕ್ಷತೆ ದೃಷ್ಟಿಯಿಂದ ಭಯೋತ್ಪಾದನೆ ಸಂಘಟನೆಗಳನ್ನು ಮಟ್ಟ ಹಾಕಲು ರಾಷ್ಟ್ರೀಯ ತನಿಖಾ ದಳ ಕೂಡ ಕ್ರಮ ಕೈಗೊಂಡಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

    ಶಂಕಿತ ಉಗ್ರನ ಟಾರ್ಗೆಟ್​ನಿಂದ ಸಿಎಂ ಜಸ್ಟ್​ ಮಿಸ್​! ಶಾರೀಕ್​ನ ಮೊಬೈಲ್ ಡಿಪಿಯಲ್ಲಿ ಇಶಾ ಫೌಂಡೇಶನ್ ಫೋಟೋ!

    ಗೆಳೆಯನನ್ನು ಕೊಂದು ಕಾರಿನಲ್ಲಿ ಮೃತದೇಹದೊಂದಿಗೆ ಪೊಲೀಸ್ ಠಾಣೆಗೇ ಬಂದ ಭೂಪ! ಬೆಂಗಳೂರಲ್ಲಿ ಬೆಚ್ಚಿಬೀಳಿಸೋ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts