More

    ಮಂಗಳೂರಿನಲ್ಲಿ ಎನ್​ಐಎ ಕಚೇರಿ ಪ್ರಾರಂಭಿಸಲು ಮತ್ತೊಮ್ಮೆ ಮನವಿ ಮಾಡುವೆ: ತೇಜಸ್ವಿ ಸೂರ್ಯ

    ಉಡುಪಿ: ಮಂಗಳೂರಿನಲ್ಲಿ ಕುಕ್ಕರ್​ ಬಾಂಬ್​ ಸ್ಫೋಟ ಮೂಲಕ ರಾಜ್ಯದ ಆರ್ಥಿಕ ಶಕ್ತಿಕೇಂದ್ರದಲ್ಲಿ ಕೋಮುಗಲಭೆ ಸೃಷ್ಟಿಸುವ ಷಡ್ಯಂತ್ರ ನಡೆದಿದೆ. ಕರಾವಳಿ ವಿಚ್ಛಿದ್ರಕಾರಿ ಶಕ್ತಿಗಳ ಕೇಂದ್ರವಾಗುತ್ತಿದೆ. ಹೀಗಾಗಿ ಕರಾವಳಿಯಲ್ಲೇ ಎನ್​ಐಎ ಕಚೇರಿ ಪ್ರಾರಂಭಿಸುವ ಅಗತ್ಯವಿದೆ. ಈ ಹಿಂದೆಯೇ ಗೃಹ ಸಚಿವ ಅಮಿತ್​ ಷಾ ಜತೆ ಮಾತನಾಡಿದ್ದೇನೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

    ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ನಾವು ವೋಟ್​ಬ್ಯಾಂಕ್​ ಮುಲಾಜಿನಲ್ಲಿ ರಾಜಕೀಯ ಮಾಡಲ್ಲ. ದೇಶದ ಸುರಕ್ಷತೆ ವಿಚಾರದಲ್ಲಿ ಯಾವುದೇ ಹೊಂದಾಣಿಕೆಯಿಲ್ಲ. ಸ್ಫೋಟದ ಹಿಂದಿರುವವರನ್ನು ಕಾನೂನಾತ್ಮಕವಾಗಿ ನಿಮೂರ್ಲನೆ ಮಾಡುತ್ತೇವೆ. ಪೊಲೀಸ್​, ಇಂಟೆಲಿಜನ್ಸ್​, ಎನ್​ಐಎ ಜತೆಯಾಗಿ ಕೆಲಸ ಮಾಡಿದರೆ ಇಂತಹ ಘಟನೆಯನ್ನು ತಡೆಗಟ್ಟಬಹುದು. ಕರಾವಳಿಯಲ್ಲೇ ಎನ್​ಐಎ ಕಚೇರಿ ಪ್ರಾರಂಭಿಸುವ ಅಗತ್ಯವಿದೆ. ಈ ಹಿಂದೆಯೇ ಗೃಹ ಸಚಿವ ಅಮಿತ್​ ಷಾ ಜತೆ ಮಾತನಾಡಿದ್ದೇನೆ. ಮತ್ತೊಮ್ಮೆ ಮನವಿ ನೀಡಲಾಗುವುದು. ಅಗತ್ಯ ಬಿದ್ದರೆ ಸಂಸತ್​ನಲ್ಲೂ ವಿಷಯ ಪ್ರಸ್ತಾಪಿಸಲಾಗುವುದು ಎಂದರು.

    ಕರ್ನಾಟಕದಲ್ಲಿ ಸರಣಿ ಕೊಲೆಗಳು ನಡೆದಿದ್ದವು. ಈಗ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕೆಡಿಸುವ ಕೆಲಸ ನಡೆಯುತ್ತಿದೆ. ಪಿಎಫ್​ಐ ಬ್ಯಾನ್​ ಮಾಡಿದಂತೆ ಭಯೋತ್ಪಾದಕರನ್ನು ಬೇರು ಸಮೇತ ಕಿತ್ತು ಹಾಕುತ್ತೇವೆ. ಅಲ್ಲಿಯ ತನಕ ನಮ್ಮ ಸರ್ಕಾರ ವಿಶ್ರಮಿಸುವುದಿಲ್ಲ. ಮಂಗಳೂರು ಘಟನೆ ಎಚ್ಚರಿಕೆಯಾಗಿದೆ. ರಾಜ್ಯದ ಜನರ ಜೀವ ಮತ್ತು ವಸ್ತುಗಳ ಸಂರಕ್ಷಣೆ ನಮ್ಮ ಕರ್ತವ್ಯ ಎಂದು ಹೇಳಿದರು.

    ಶಂಕಿತ ಉಗ್ರನ ಟಾರ್ಗೆಟ್​ನಿಂದ ಸಿಎಂ ಜಸ್ಟ್​ ಮಿಸ್​! ಶಾರೀಕ್​ನ ಮೊಬೈಲ್ ಡಿಪಿಯಲ್ಲಿ ಇಶಾ ಫೌಂಡೇಶನ್ ಫೋಟೋ!

    ಗೆಳೆಯನನ್ನು ಕೊಂದು ಕಾರಿನಲ್ಲಿ ಮೃತದೇಹದೊಂದಿಗೆ ಪೊಲೀಸ್ ಠಾಣೆಗೇ ಬಂದ ಭೂಪ! ಬೆಂಗಳೂರಲ್ಲಿ ಬೆಚ್ಚಿಬೀಳಿಸೋ ಘಟನೆ

    ಶಾಲೆಗೆ ಹೋಗುವಾಗ ಬಿಎಂಟಿಸಿ ಬಸ್​ಗೆ ಮಗಳು ಬಲಿ, ಅಮ್ಮ-ಮಗನ ಸ್ಥಿತಿ ಗಂಭೀರ

    te

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts