More

    ಅಸ್ಸಾಂನಲ್ಲಿ ಮೊಳಗಿತು ಗುಂಡಿನ ಸದ್ದು; 48ಗಂಟೆಗಳ ಕಾಲ ಇಂಟರ್​ನೆಟ್​ ಬಂದ್​..!

    ನವದೆಹಲಿ: ಮಂಗಳವಾರ ಅಸ್ಸಾಂ-ಮೇಘಾಲಯದ ಗಡಿಯಲ್ಲಿರುವ ಮುಕ್ರೋಹ್ ಪ್ರದೇಶದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಮೇಘಾಲಯದ ಐವರು ಮತ್ತು ಅಸ್ಸಾಂ ಫಾರೆಸ್ಟ್ ಗಾರ್ಡ್‌ನ ಒಬ್ಬರು ಸೇರಿದ್ದಾರೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೇಘಾಲಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

    ಈ ಬಗ್ಗೆ ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಮಾತನಾಡಿದ್ದು ‘ ಮುಕೋದಲ್ಲಿ ಗುಂಡಿನ ದಾಳಿಯ ಘಟನೆಯ ನಂತರ ನವೆಂಬರ್ 22 ರಿಂದ ಏಳು ಜಿಲ್ಲೆಗಳಲ್ಲಿ 48 ಗಂಟೆಗಳ ಕಾಲ ಮೊಬೈಲ್ ಇಂಟರ್​ನೆಟ್​ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಹೇಳಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಅಸ್ಸಾಂ ಮುಖ್ಯಮಂತ್ರಿ ‘ಪಶ್ಚಿಮ ಜೈಂತಿಯಾ ಹಿಲ್ಸ್ ಜಿಲ್ಲೆಯ ಮುಕ್ರೋಹ್ ಗ್ರಾಮದಲ್ಲಿ ಸಂಭವಿಸಿದ ಅಹಿತಕರ ಘಟನೆಯಲ್ಲಿ, ಅಸ್ಸಾಂ ಪೊಲೀಸರು ಮತ್ತು ಅಸ್ಸಾಂ ಅರಣ್ಯ ರಕ್ಷಕರ ಗುಂಡಿನ ದಾಳಿಯಿಂದ 6 ಜನರು ಸಾವನ್ನಪ್ಪಿದ್ದಾರೆ. 6 ಜನರಲ್ಲಿ ಐವರು ಮೇಘಾಲಯದ ನಿವಾಸಿಗಳು ಮತ್ತು ಒಬ್ಬರು ಅಸ್ಸಾಂ ಫಾರೆಸ್ಟ್ ಗಾರ್ಡ್‌ನವರಾಗಿದ್ದರೆ’ ಎಂದು ತಮ್ಮ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

    ವರದಿಗಳ ಪ್ರಕಾರ ಅಸ್ಸಾಂ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಸ್ಸಾಂ ಪೊಲೀಸರು ಅಕ್ರಮವಾಗಿ ಮರ ಸಾಗಿಸುತ್ತಿದ್ದ ವಾಹನವನ್ನು ಹಿಂಬಾಲಿಸಿ ಬಂಧಿಸಿದೆ. ಈ ಸುದ್ದಿ ತಿಳಿಯುತ್ತಿದ್ದಂತೆಯೆ ಮುಕ್ರೋಹ್ ಹಳ್ಳಿಯ ಜನರು ಅಸ್ಸಾಂನ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಸುತ್ತುವರೆದಿದ್ದಾರೆ. ಈ ಸಂದರ್ಭ ಅಸ್ಸಾಂ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಗುಂಡು ಹಾರಿಸಿದ್ದು ಐದು ಜನರು ಮೃತಪಟ್ಟಿದ್ದಾರೆ. ನಂತರ ನಡೆದ ಸಂಘರ್ಷದಲ್ಲಿ ಓರ್ವ ಅಸ್ಸಾಂ ಫಾರೆಸ್ಟ್ ಗಾರ್ಡ್‌ ಕೂಡ ನಿಧನರಾಗಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts