ಅಸ್ಸಾಂನಲ್ಲಿ ಮೊಳಗಿತು ಗುಂಡಿನ ಸದ್ದು; 48ಗಂಟೆಗಳ ಕಾಲ ಇಂಟರ್​ನೆಟ್​ ಬಂದ್​..!

ನವದೆಹಲಿ: ಮಂಗಳವಾರ ಅಸ್ಸಾಂ-ಮೇಘಾಲಯದ ಗಡಿಯಲ್ಲಿರುವ ಮುಕ್ರೋಹ್ ಪ್ರದೇಶದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಮೇಘಾಲಯದ ಐವರು ಮತ್ತು ಅಸ್ಸಾಂ ಫಾರೆಸ್ಟ್ ಗಾರ್ಡ್‌ನ ಒಬ್ಬರು ಸೇರಿದ್ದಾರೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೇಘಾಲಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಮಾತನಾಡಿದ್ದು ‘ ಮುಕೋದಲ್ಲಿ ಗುಂಡಿನ ದಾಳಿಯ ಘಟನೆಯ ನಂತರ ನವೆಂಬರ್ 22 ರಿಂದ ಏಳು ಜಿಲ್ಲೆಗಳಲ್ಲಿ 48 ಗಂಟೆಗಳ ಕಾಲ ಮೊಬೈಲ್ ಇಂಟರ್​ನೆಟ್​ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಹೇಳಿದ್ದಾರೆ. … Continue reading ಅಸ್ಸಾಂನಲ್ಲಿ ಮೊಳಗಿತು ಗುಂಡಿನ ಸದ್ದು; 48ಗಂಟೆಗಳ ಕಾಲ ಇಂಟರ್​ನೆಟ್​ ಬಂದ್​..!