More

    ಸಕ್ರಿಯ ರಾಜಕೀಯಕ್ಕೆ ಕುಸ್ತಿತಾರೆ ಬಬಿತಾ ಪೋಗಟ್​, ಸರ್ಕಾರಿ ಕೆಲಸಕ್ಕೆ ಗುಡ್‌ಬೈ

    ನವದೆಹಲಿ: ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತೆ ಕುಸ್ತಿಪಟು ಬಬಿತಾ ಪೋಗಟ್ ಸಕ್ರಿಯ ರಾಜಕಾರಣಿಯಾಗುವ ಸಲುವಾಗಿ ಹರಿಯಾಣದ ಸರ್ಕಾರಿ ಕೆಲಸವನ್ನು ತ್ಯಜಿಸಿದ್ದಾರೆ. ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಇಲಾಖೆಯ ಉಪ-ನಿರ್ದೇಶಕಿ ಹುದ್ದೆಗೆ ಬಬಿತಾ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ.

    ಕಳೆದ ವರ್ಷ ಬಿಜೆಪಿ ಸೇರಿದ್ದ ಅವರು, ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಸರ್ಕಾರಿ ಹುದ್ದೆ ಅಲಂಕರಿಸಿದ್ದ 30 ವರ್ಷದ ಬಬಿತಾ, ಪಕ್ಷದ ಕೆಲಸಗಳಿಗೆ ಹೆಚ್ಚಿನ ಸಮಯ ನೀಡುವ ಸಲುವಾಗಿ ಈಗ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಮುಂಬರುವ ಹರಿಯಾಣದ ಉಪಚುನಾವಣೆ ಮತ್ತು ಬಿಹಾರ ರಾಜ್ಯ ಚುನಾವಣೆಯಲ್ಲೂ ಸಕ್ರಿಯವಾಗಿ ತೊಡಗಿಕೊಳ್ಳುವ ಹಂಬಲ ಅವರದಾಗಿದೆ.

    ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ನಾಯಕ ಶ್ರೀಕೃಷ್ಣನ್ ಹೂಡ ಕಳೆದ ಏಪ್ರಿಲ್‌ನಲ್ಲಿ ನಿಧನ ಹೊಂದಿದ ಕಾರಣ, ಹರಿಯಾಣದ ಬರೋಡ ಕ್ಷೇತ್ರಕ್ಕೆ ನವೆಂಬರ್ 7ರಂದು ಚುನಾವಣೆ ನಡೆಯಲಿದೆ. ಈ ಕ್ಷೇತ್ರವನ್ನು ಗೆಲ್ಲುವುದು ಈಗ ಆಡಳಿತರೂಢ ಜೆಜೆಪಿ-ಬಿಜೆಪಿ ಮೈತ್ರಿಗೆ ದೊಡ್ಡ ಸವಾಲಾಗಿದೆ. ರಾಜ್ಯ ಸರ್ಕಾರದ ನಿರ್ವಹಣೆಗೆ ಈ ಉಪಚುನಾವಣೆಯ ಫಲಿತಾಂಶ ಕನ್ನಡಿಯಾಗಿರಲಿದೆ ಎಂದು ಕಾಂಗ್ರೆಸ್ ಈಗಾಗಲೆ ಬಣ್ಣಿಸಿದೆ.

    ಇದನ್ನೂ ಓದಿ: ಫ್ರೆಂಚ್ ಓಪನ್‌ನಲ್ಲಿ ಡೇನಿಯಲ್ ಕಾಲಿನ್ಸ್ ಸೋಲಿಗೆ ಬಾಯ್​ಫ್ರೆಂಡ್ ಕಾರಣ!

    2014ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಸ್ವರ್ಣ ಮತ್ತು 2018ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ರಜತ ಪದಕ ಜಯಿಸಿದ್ದ ಬಬಿತಾ ಪೋಗಟ್, ಮುಂಬರುವ ಉಪಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡಲು ಬಯಸಿದ್ದಾರೆ. ಆದರೆ ಸರ್ಕಾರದ ನಿಯಮದನ್ವಯ ಇದಕ್ಕೆ ಅವಕಾಶ ಇಲ್ಲದ ಕಾರಣ ಸರ್ಕಾರಿ ಕೆಲಸವನ್ನು ತ್ಯಜಿಸಿದ್ದಾರೆ.

    ಕಳೆದ ವರ್ಷ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಅವರು ಹರಿಯಾಣ ಪೊಲೀಸ್ ಇಲಾಖೆಯ ಸಬ್-ಇನ್‌ಸ್ಪೆಕ್ಟರ್ ಹುದ್ದೆಯನ್ನು ತ್ಯಜಿಸಿದ್ದರು. 2018ರಲ್ಲಿ ಕ್ರೀಡಾ ಕೋಟಾದಡಿ ಅವರ ನೇಮಕವಾಗಿತ್ತು.

    ಡೆನ್ಮಾರ್ಕ್ ಓಪನ್‌ನಿಂದ ಹಿಂದೆ ಸರಿದ ಗಂಡ-ಹೆಂಡತಿ! ಜನವರಿವರೆಗೆ ಕಣಕ್ಕಿಳಿಯಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts