More

    ರಮ್ಯಾ ಹುಟ್ಟುಹಬ್ಬಕ್ಕೆ ವಿಶಿಷ್ಟ ಉಡುಗೊರೆ; ಗೋಡೆ ಮೇಲೆ 35 ಅಡಿ ಚಿತ್ರ

    ಬೆಂಗಳೂರು: ರಮ್ಯಾ ಇತ್ತೀಚೆಗಷ್ಟೇ ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹುಟ್ಟುಹಬ್ಬಕ್ಕೆ ಅವರಿಗೆ ಸ್ಯಾಂಡಲ್​​ವುಡ್​ನ ಹಲವು ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ. ಈ ಸಂದರ್ಭದಲ್ಲಿ ಕಲಾವಿದ ಬಾದಲ್ ನಂಜುಂಡಸ್ವಾಮಿ, ರಮ್ಯಾಗೆ ವಿಶೇಷ ಉಡುಗೊರೆ ನೀಡಿದ್ದಾರೆ.

    ಇದನ್ನೂ ಓದಿ ವಿಜಯ್​ ದೇವರಕೊಂಡಗೆ ಇಡಿ ಗ್ರಿಲ್​; ಸತತ 12 ತಾಸುಗಳ ಕಾಲ ವಿಚಾರಣೆ!

    ತಮ್ಮ ವಿಶಿಷ್ಟ ಶೈಲಿಯ ಕಲಾಕೃತಿಗಳಿಂದ ಗಮನ ಸೆಳೆಯುವ ಬಾದಲ್, ಈ ಬಾರಿ ರಮ್ಯಾ ಹುಟ್ಟುಹಬ್ಬಕ್ಕೆ ಒಂದು ದೊಡ್ಡ ಪೇಂಟಿಂಗ್​ನ್ನು ಉಡುಗೊರೆಯಾಗಿ ನೀಡಿದ್ದಾರೆ. ಯಲಹಂಕ ಸಮೀಪದ ಒಂದು ಕಟ್ಟಡದ ಗೋಡೆಯ ಮೇಲೆ ಬಾದಲ್​, ರಮ್ಯಾ ಅವರ 35 ಅಡಿ ಉದ್ದದ ಚಿತ್ರ ಬಿಡಿಸಿದ್ದಾರೆ. ರಮ್ಯಾ ಅವರಿಗೆ ‘ಸ್ಯಾಂಡಲ್​ವುಡ್​ ಕ್ವೀನ್​’ ಎಂಬ ಬಿರುದಿರುವುದು ಎಲ್ಲರಿಗೂ ಗೊತ್ತೇ ಇದೆ. ಇದನ್ನೇ ಥೀಮ್​ ಆಗಿಟ್ಟುಕೊಂಡಿರುವ ಅವರು, ಇಸ್ಟಪೀಟ್​ ಎಲೆ ಮೇಲೆ ರಮ್ಯಾ ಅವರ ತಲೆ ಮೇಲೆ ಕಿರೀಟ ಇಟ್ಟು ಅವರನ್ನು ರಾಣಿಯನ್ನಾಗಿ ಚಿತ್ರಿಸಿದ್ದಾರೆ. ಈ ಪೇಂಟಿಂಗ್ ರೂಪುಗೊಂಡಿದ್ದು ಹೇಗೆ ಎಂದು ಬಾದಲ್​, ಸೋಷಿಯಲ್​ ಮೀಡಿಯಾದಲ್ಲಿ ಒಂದು ಮೇಕಿಂಗ್​ ವಿಡಿಯೋ ಸಹ ಹಂಚಿಕೊಂಡಿದ್ದಾರೆ.

    ಸ್ಯಾಂಡಲ್​ವುಡ್ ನಟಿಯೊಬ್ಬರ ಚಿತ್ರ ಇಷ್ಟು ಬೃಹತ್ ಆಗಿ ಮೂಡಿ ಬಂದಿರುವುದು ಇದೇ ಮೊದಲು ಎನ್ನುವುದು ವಿಶೇಷ. ಈ ಪೇಂಟಿಂಗ್​ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ರಮ್ಯಾ ಸಹ ಬಾದಲ್​ಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಇನ್ನು, ಸೋಷಿಯಲ್​ ಮೀಡಿಯಾದಲ್ಲಿ ಈ ಫೋಟೋ ಸಾಕಷ್ಟು ವಥರಲ್​ ಆಗುತ್ತಿದೆ.

    ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಲ್ಲಿ ಹೇಳಿದ್ದೆಲ್ಲ ಸುಳ್ಳು ಎಂದು ಸಾಬೀತು ಮಾಡಿದರೆ ಚಿತ್ರರಂಗ ಬಿಟ್ಟುಬಿಡುತ್ತೇನೆ; ನಡಾವ್​ಗೆ ವಿವೇಕ್​ ಚಾಲೆಂಜ್​

    ಇನ್ನು, ರಮ್ಯಾ ಈ ಬಾರಿಯ ಹುಟ್ಟುಹಬ್ಬವನ್ನು ಜಪಾನ್​ನಲ್ಲಿ ಆಚರಿಸಿಕೊಂಡಿದ್ದಾರೆ. ಜಪಾನ್​ನ ಫ್ಲೋಟಿಂಗ್​ ಫ್ಲವರ್​ ಗಾರ್ಡ್​ನ್​ನಲ್ಲಿ ಕುಳಿತಿರುವ ತಮ್ಮ ಒಂದಿಷ್ಟು ಫೋಟೋಗಳನ್ನು ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿರುವ ರಮ್ಯಾ, ತಾವು 40ರ ಕ್ಲಬ್​ ಸೇರಿದ್ದು, ಈ ಸಂದರ್ಭದಲ್ಲಿ ತಮಗೆ ಶುಭ ಕೋರಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದ್ದಾರೆ.

    ಯಶ್ ಮುಂದಿನ ಚಿತ್ರಕ್ಕೆ ಮಗಳೇ ನಿರ್ಮಾಪಕಿ? ಐರಾ ಹೆಸರಲ್ಲಿ ನಿರ್ಮಾಣ ಸಂಸ್ಥೆ ಪ್ರಾರಂಭ ಸಾಧ್ಯತೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts