More

    ಡ್ಯಾನ್ಸ್ ವೇಳೆಯೇ ವಿದ್ಯಾರ್ಥಿ ಕುಸಿದು ಬಿದ್ದು ಸಾವು; ಪ್ರತಿಭಟನೆಗೂ ಸಾವಿಗೂ ಸಂಬಂಧವಿಲ್ಲ: ಅಜೀಮ್​ ಪ್ರೇಮ್​ಜಿ ವಿವಿ ಸ್ಪಷ್ಟನೆ

    ಬೆಂಗಳೂರು: ರಾಜಧಾನಿ ಬೆಂಗಳೂರಿನ ಅಜೀಮ್​ ಪ್ರೇಮ್​ಜಿ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಯೊಬ್ಬ ಕುಸಿದು ಬಿದ್ದು ಸಾವಿಗೀಡಾದ ಕುರಿತು ವಿವಿಯವರು ಸ್ಪಷ್ಟನೆ ನೀಡಿದ್ದಾರೆ. ಮಾತ್ರವಲ್ಲ, ಆ ವಿದ್ಯಾರ್ಥಿ ನೃತ್ಯವೊಂದರಲ್ಲಿ ಭಾಗಿಯಾಗಿದ್ದಾಗ ಕುಸಿದು ಬಿದ್ದು ಸಾವಿಗೀಡಾಗಿದ್ದೇ ಹೊರತು ಯಾವುದೇ ಪ್ರತಿಭಟನೆ ಇಲ್ಲವೇ ಉಪವಾಸ ಸತ್ಯಾಗ್ರಹಕ್ಕೂ ಸಾವಿಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಒಂದೇ ಮನೆಯ ನಾಲ್ವರ ಹತ್ಯೆ; ನಾಲ್ಕು ಕೊಲೆಗಳ ಆರೋಪಿಯ ತಾಯಿ ಹೇಳಿದ್ದೇನು?

    ನಮ್ಮ ಕ್ಯಾಂಪಸ್​ನಲ್ಲಿ ವಿದ್ಯಾರ್ಥಿಯೊಬ್ಬ ದುರದೃಷ್ಟವಶಾತ್ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದೇವೆ. ಸಾವಿಗೀಡಾದ ವಿದ್ಯಾರ್ಥಿ ಕಾಲೇಜಿನ ವಿದ್ಯಾರ್ಥಿಗಳ ವಾರ್ಷಿಕೋತ್ಸವದಲ್ಲಿ ಭಾಗಿಯಾಗಿದ್ದಾಗ ಈ ಘಟನೆ ಸಂಭವಿಸಿದೆ. ಆತನ ಕುಟುಂಬಸ್ಥರಿಗೆ ನಾವು ಸ್ಪಂದಿಸುತ್ತಿದ್ದು, ನಮ್ಮ ಕಡೆಯಿಂದ ಸಾಧ್ಯವಿರುವ ಸಹಾಯ ಮಾಡುತ್ತಿದ್ದೇವೆ ಎಂದೂ ಕಾಲೇಜಿನ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಪ್ರತಿಭಟನೆನಿರತ ವಿದ್ಯಾರ್ಥಿ ಕುಸಿದು ಬಿದ್ದು ಸಾವು; ವಿವಿ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

    – ವಿದ್ಯಾರ್ಥಿಗಳ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿರುವಾಗ ಕುಸಿದು ಬಿದ್ದು ಆ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ.
    – ಆತ ಫೆ. 22ರ ಸಂಜೆಯೇ ಪ್ರತಿಭಟನೆಯಿಂದ ತೆರಳಿದ್ದು, ಫೆ. 23 ಮತ್ತು ಫೆ. 24ರ ವಿದ್ಯಾರ್ಥಿಗಳ ಸಣ್ಣ ಗುಂಪು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಆತ ಇದ್ದಿರಲಿಲ್ಲ.
    – ಆತ ಕುಸಿದು ಬಿದ್ದ ತಕ್ಷಣ ಕ್ಯಾಂಪಸ್​ನ ವೈದ್ಯರು ಸ್ಪಂದಿಸಿದ್ದು, ನಾಡಿ ಮಿಡಿತ ಇರದ್ದರಿಂದ ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ಆ್ಯಂಬುಲೆನ್ಸ್​​ನಲ್ಲಿ ಕರೆದೊಯ್ದಿದ್ದರು. ಆ್ಯಂಬುಲೆನ್ಸ್​ನಲ್ಲೇ ಸಿಪಿಆರ್​ ಹಾಗೂ ಆಕ್ಸಿಜನ್ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಿದ್ದು, ಆಸ್ಪತ್ರೆಯಲ್ಲಿನ ವೈದ್ಯರೂ ತಮ್ಮಿಂದಾದ ಪ್ರಯತ್ನ ಮಾಡಿದ್ದು, ಅಲ್ಲಿಗೆ ಬರುವಷ್ಟರಲ್ಲಿ ಸಾವು ಸಂಭವಿಸಿತ್ತು ಎಂದು ಸ್ಪಷ್ಟಪಡಿಸಿದ್ದರು.
    – ಸದ್ಯದ ಪ್ರತಿಭಟನೆಗೂ ವಿದ್ಯಾರ್ಥಿಯ ಸಾವಿಗೂ ಯಾವುದೇ ಸಂಬಂಧವಿಲ್ಲ. ಈ ಪ್ರತಿಭಟನೆ ಸೂಕ್ತವಲ್ಲದ ಬೇಡಿಕೆಗೆ ಆಗ್ರಹಿಸಿ ನಡೆಸಲಾಗುತ್ತಿದೆ. ವಿವಿಗೆ ಸೇರುವಾಗಲೇ ಎಲ್ಲ ವಿದ್ಯಾರ್ಥಿಗಳಿಗೂ ಇಲ್ಲಿನ ನಿಯಮ ಮತ್ತು ಶುಲ್ಕಗಳ ಕುರಿತು ಮುಂಚಿತವಾಗಿ ತಿಳಿಸಲಾಗಿದೆ. ಅದಾಗ್ಯೂ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.

    ಆಸ್ತಿ ಆಸೆಗೆ ಒಂದೇ ಮನೆಯ ನಾಲ್ವರ ಕೊಲೆ; ಮಕ್ಕಳಿಬ್ಬರ ಪ್ರಾಣ ಉಳಿಸಿತೇ ನಿದ್ರೆ-ಆಟ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts