More

    ಮಳೆಗಾಲದ ಜಾಡ್ಯಗಳ ವಿರುದ್ಧ ರಕ್ಷಣೆಗೆ ಆಯುಷ್ ಸಚಿವಾಲಯ ಸೂಚಿಸಿದ ‘ಮನೆಮದ್ದು’ಗಳಿವು

    ನವದೆಹಲಿ: ಮಳೆಗಾಲವು ಸೋಂಕುಗಳು ಮತ್ತು ರೋಗಗಳ ಹರಡುವಿಕೆಗೆ ಹೇಳಿ ಮಾಡಿಸಿದ ಋತುಮಾನವಾಗಿದೆ. ಏಕೆಂದರೆ ಇದು ರೋಗಕಾರಕಗಳನ್ನು ಅಭಿವೃದ್ಧಿಪಡಿಸಲು ಉಷ್ಣ ಮತ್ತು ಆರ್ದ್ರ ವಾತಾವರಣವನ್ನು ನಿರ್ಮಿಸುತ್ತದೆ. ಕೋವಿಡ್ ಮಧ್ಯೆ ಭಾರತದಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ, ಮಾರಣಾಂತಿಕ ಸೋಂಕುಗಳ ಅಪಾಯ ಮತ್ತು ಭೀತಿ ಇನ್ನೂ ಹೆಚ್ಚಾಗಿದೆ. ಮಂಗಳವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮಳೆಗಾಲದಲ್ಲಿ ರೋಗಗಳ ಹರಡುವಿಕೆ ಹೇಗೆ ಹೆಚ್ಚಾಗುತ್ತದೆ ಮತ್ತು ಈ ಸಮಯದಲ್ಲಿ ಜನರು ಹೇಗೆ ಹೆಚ್ಚು ಜಾಗರೂಕರಾಗಿರಬೇಕು ಎಂಬುದರ ಕುರಿತು ಮಾತನಾಡಿದ್ದಾರೆ.

    ಇದನ್ನೂ ಓದಿ: ಪುನರ್ಜನ್ಮ ನೀಡುವ ವೈದ್ಯರಿಗೊಂದು ಸಲಾಂ ಎಂದ ಪ್ರಧಾನಿ ಮೋದಿ

    ಆಯುಷ್ ಸಚಿವಾಲಯವು ದೇಶದ ಆರೋಗ್ಯ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಜ್ವರ, ಇತ್ಯಾದಿ ಸೋಂಕು ರೋಗಗಳನ್ನು ತಡೆಗಟ್ಟಲು ಜನರು ಬಳಸಬಹುದಾದ ಮನೆಮದ್ದುಗಳ ಕೆಲವು ಮಾರ್ಗಸೂಚಿಗಳನ್ನು ಹಂಚಿಕೊಂಡಿದೆ.
    ವರದಿಗಳ ಪ್ರಕಾರ, ಆಯುಷ್ ಸಚಿವಾಲಯವು ವಿಶೇಷವಾಗಿ ಮಳೆಗಾಲದಲ್ಲಿ. ಸೋಂಕನ್ನು ತಡೆಗಟ್ಟಲು ಈ ಕೆಳಗಿನ ಪರಿಹಾರಗಳನ್ನು ಶಿಫಾರಸು ಮಾಡಿದೆ,
    ಅರಿಶಿನ ಹಾಲು: ಇದನ್ನು ಗೋಲ್ಡನ್ ಮಿಲ್ಕ್ ಎಂದೂ ಕರೆಯುತ್ತಾರೆ, ಇದನ್ನು ಸಾಮಾನ್ಯವಾಗಿ ಬೇಸಿಗೆಯಲ್ಲಿ ಶಿಫಾರಸ್ಸು ಮಾಡುವುದಿಲ್ಲ. ಆದರೆ ಇದು ಚಳಿಗಾಲದ ವಿಶೇಷತೆಯಾಗಿದೆ. ಆದರೆ ಆರೋಗ್ಯದ ಬಿಕ್ಕಟ್ಟಿನ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಅರಿಶಿನ ಹಾಲು ಸೇವನೆಯನ್ನು ರೋಗ ಬಾರದಂತೆ ತಡೆಗಟ್ಟಲು ಮತ್ತು ಚಿಕಿತ್ಸೆಗಾಗಿ ಸೇವಿಸಲು ಶಿಫಾರಸು ಮಾಡಲಾಗಿದೆ. ಅರಿಶಿನವು ಪ್ರತಿಜೀವಕ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿದೆ. ಇದು ದೇಹವನ್ನು ಆಂತರಿಕವಾಗಿ ಮತ್ತು ಬಾಹ್ಯವಾಗಿ ಉಪಚರಿಸಲು ಸಹಾಯ ಮಾಡುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.

    ಇದನ್ನೂ ಓದಿ: 188 ವರ್ಷದ ‘ಅಜ್ಜ’ನ ಸ್ನಾನ ನೋಡಿ… ದಾಖಲೆ ಪುಟದಲ್ಲಿ ದೀರ್ಘಾಯಸ್ಸು

    ಹಬೆ ಮೂಗಿನ ಹೊಳ್ಳೆಗಳನ್ನು ಸ್ವಚ್ಛಗೊಳಿಸಲು, ವಿಶೇಷವಾಗಿ ಶೀತ ಭಾದೆಯಿರುವವರಿಗೆ ತುಂಬ ಪರಿಣಾಮಕಾರಿಯಾಗಿದೆ. ಚಹಾ ಮರದ ಎಣ್ಣೆ ಮುಂತಾದ ಸಾರಭೂತ ತೈಲಗಳ ಕೆಲವು ಹನಿಗಳನ್ನು ಬಿಸಿ ನೀರಿನಲ್ಲಿ ಸೇರಿಸಿ ಅದನ್ನು ಹಬೆ ತೆಗೆದುಕೊಳ್ಳಲು ಬಳಸಬಹುದು. ಡಾ. ಕುನಾಲ್ ಅವರ ಹೇಳುವಂತೆ ಮತ್ತು ಜನಸತ್ತಾ ವರದಿ ಮಾಡಿದಂತೆ, ಅಜಿವಾನ ಅಥವಾ ಪುದಿನಾದಂತಹ ಕೆಲವು ನೈಸರ್ಗಿಕ ಗಿಡಮೂಲಿಕೆಗಳನ್ನು ಬಿಸಿ ನೀರಿಗೆ ಸೇರಿಸುವ ಮೂಲಕ ಜ್ವರ ಮತ್ತು ನೆಗಡಿಯ ರೋಗಲಕ್ಷಣಗಳಿಗೆ ನೀವು ಪರಿಣಾಮಕಾರಿ ಚಿಕಿತ್ಸೆಯನ್ನು ಸಹ ಮಾಡಿಕೊಳ್ಳಬಹುದು.
    ಪುದೀನ, ಅಜಿವಾನ ಸಸ್ಯ ಎಲೆಗಳು ಮತ್ತು ನೀಲಗಿರಿಯಿಂದ ಪೇಸ್ಟ್ ತಯಾರಿಸಬಹುದು. ಗಂಟಲು ನೋವು ನಿವಾರಿಸಲು ಈ ಪೇಸ್ಟ್ ಅನ್ನು ಕುತ್ತಿಗೆಗೆ ಹಚ್ಚಬಹುದು. ಈ ಪೇಸ್ಟ್ ಮತ್ತು ಮಿಶ್ರಣವು ಬಹುತೇಕ ಎಲ್ಲಾ ಆಯುರ್ವೇದ ಮಳಿಗೆಗಳಲ್ಲಿ ಲಭ್ಯವಿದೆ.

    ಇದನ್ನು ಓದಿ:  ಆನ್‌ಲೈನ್‌ ಕ್ಲಾಸ್‌ಗೆ ಸೆಡ್ಡು ಹೊಡೆದ ಗ್ರಾಮ: ದೇಶಾದ್ಯಂತ ಶ್ಲಾಘನೆ

    ಮಳೆಗಾದ ಜ್ವರದ ಲಕ್ಷಣಗಳಾವುವು? :
    COVID-19 ರೋಗವು ವ್ಯಾಪಕವಾಗಿ ಹರಡಿರುವ ಈ ಪರಿಸ್ಥಿತಿಯಲ್ಲಿ ಮಳೆಗಾಲದ ಜ್ವರ ರೋಗಲಕ್ಷಣಗಳನ್ನು ಗುರುತಿಸುವುದು ಬಹಳ ಮುಖ್ಯ. ಈಗಾಗಲೇ ಅ ಅನಾರೋಗ್ಯದಿಂದ ಬಳಲುತ್ತಿರುವವರಲ್ಲಿ ಕರೊನವೈರಸ್‌ ತಗುಲುವ ಅಪಾಯವ ಹೆಚ್ಚಿರುತ್ತದೆ, ನೀವು ಈಗಾಗಲೇ – ಉಸಿರಾಟದಲ್ಲಿ ತೊಂದರೆ, ಕಟ್ಟಿದ ಮೂಗು, ಕೆಮ್ಮು, ಮೈ ಕೈ ನೋವಿನಂತಹ ಯಾವುದೇ ರೋಗಲಕ್ಷಣಗಳನ್ನು ಹೊಂದಿದ್ದರೆ ಹೆಚ್ಚು ಜಾಗರೂಕರಾಗಿರಬೇಕು ಎಂದು ಆಯುಷ್ ಸಚಿವಾಲಯ ಮುನ್ನೆಚ್ಚರಿಕೆ ನೋಡಿದೆ.

    ಕರೊನಾ ಕೂಪವಾಗಿದ್ದ ಬೃಹತ್ ಕೊಳೆಗೇರಿಗೆ ಯಶಸ್ಸು ತಂದ ನಾಲ್ಕು ‘ಟಿ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts