More

    ದೀಪಾವಳಿಗೆ ಗಿನ್ನೆಸ್​ ರೆಕಾರ್ಡ್​ ಬರೆಯಲಿದೆ ಅಯೋಧ್ಯೆ; ಹೇಗಿರಲಿದೆ ಗೊತ್ತಾ ಅಯೋಧ್ಯೆಯ ದೀಪಾವಳಿ?

    ಅಯೋಧ್ಯೆ: ಈ ವರ್ಷದ ದೀಪಾವಳಿ ಹಬ್ಬಕ್ಕೆ ಹೊಸದೊಂದು ಗಿನ್ನಿಸ್​ ರೆಕಾರ್ಡ್​ ಬರೆಯಲು ಅಯೋಧ್ಯೆ ಸಿದ್ಧವಾಗಿದೆ. ಕಳೆದ ವರ್ಷ 4.10 ಲಕ್ಷ ಮಣ್ಣಿನ ದೀಪಗಳನ್ನು ಹಚ್ಚಿ ಗಿನ್ನೆಸ್​ ರೆಕಾರ್ಡ್​ ಬರೆಯಲಾಗಿದ್ದ ಸ್ಥಳದಲ್ಲಿ ಈ ವರ್ಷ 5.51 ಲಕ್ಷ ಮಣ್ಣಿನ ಹಣತೆ ಹಚ್ಚಿ ಗಿನ್ನೆಸ್​ ರೆಕಾರ್ಡ್​ ಬರೆಯಲಾಗುವುದು.

    ಇದನ್ನೂ ಓದಿ: ಮಹಾಮಾರಿ ಕರೊನಾ ಕಣ್ಮರೆಯಾಗುತ್ತಿರುವ ಸಮಯದಲ್ಲಿ ದಂಪತಿ ಮಾಡಿದ್ದು ಸರಿನಾ?

    ಅಯೋಧ್ಯೆಯಲ್ಲಿನ ದೀಪ ಹಚ್ಚುವ ಕಾರ್ಯಕ್ರಮವನ್ನು ಶುಕ್ರವಾರ ಆರಂಭಿಸಲಾಗುವುದು. ಶುಕ್ರವಾರ ಒಟ್ಟು 5.51 ಲಕ್ಷ ಹಣೆತೆ ಬೆಳಗಲಿವೆ. ಇಲ್ಲಿ ದೀಪ ಹಚ್ಚುವುದಕ್ಕೆಂದೆ ರಾಮ್​ ಮನೋಹರ ಆವಾಧ್​ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ.

    ದೇವಸ್ಥಾನದ ಮಂಡಳಿ ಮತ್ತು ರಾಜ್ಯ ಸರ್ಕಾರ ನಿಗದಿ ಪಡಿಸಿರುವ ಸ್ವಯಂ ಸೇವಕರ ಹೊರೆತುಪಡಿಸಿ ಬೇರೆಯವರಿಗೆ ಸ್ಥಳಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗಿಲ್ಲ. 300 ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ದೀಪ ಬೆಳಗುವ ಯೋಜನೆ ಹಾಕಿಕೊಳ್ಳಲಾಗಿದೆ. ರಾಮ್​ ಕಿ ಪೈದಿ ಘಾಟ್​ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೀಪ ಬೆಳಗಿಸಲಾಗುವುದು. ಈ ಸ್ಥಳದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಮತ್ತು ರಾಜ್ಯಪಾಲರಾದ ಆನಂದಿಬೆನ್​ ಪಾಟೇಲ್​ ಹಾಜರಿರಲಿದ್ದಾರೆ.

    ಇದನ್ನೂ ಓದಿ: ಸೈಕಲ್​ ಕವಿ ಎಂದೇ ಪ್ರಸಿದ್ಧರಾದ ಆಶುಕವಿ ಐರಸಂಗ ಇನ್ನಿಲ್ಲ

    ಸದ್ಯ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದಲ್ಲಿ 21 ಸಾವಿರ ದೀಪಗಳನ್ನು ಶನಿವಾರ ಬೆಳಗಿಸಲಾಗುವುದು. ವಾಯು ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಈ ವರ್ಷ ಲೇಸರ್​ ಎಫೆಕ್ಟ್​ ಮೂಲದ ಪಟಾಕಿ ಸಿಡಿಸಲಾಗುವುದು. ಅದರ ಜತೆಯಲ್ಲಿ ಭರತನಾಟ್ಯ, ಒಡಿಸ್ಸಿ, ಕುಚಿಪುಡಿ, ಕತಕ್​ ಸೇರಿ ವಿವಿಧ ನಾಟ್ಯವನ್ನು ಲೇಸರ್​ನಲ್ಲಿ ಪ್ರಸ್ತುತಪಡಿಸಲಾಗುವುದು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ಡೇರಿಯ ಹಾಲು ಕೊಳ್ಳುವ ಮುನ್ನ ಎಚ್ಚರ! ಡೇರಿಯ ಹಾಲಿನಲ್ಲೇ ಸ್ನಾನ ಮಾಡಿದ್ದಾನೆ ಈ ಭೂಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts