More

    ICC World Cup 2023: ಎಚ್ಚರಿಕೆಯಿಂದ ಆಡಬೇಕಾದ್ದೇ…24ವರ್ಷದಲ್ಲಿ ಒಂದೂ ಫೈನಲ್ ಸೋತಿಲ್ಲ ಆಸ್ಟ್ರೇಲಿಯಾ!​

    Australia have not lost a single final in 24 years

    ನವದೆಹಲಿ: 2023 ರ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯವು ನವೆಂಬರ್ 19, 2023 ರಂದು ಅಹಮದಾಬಾದ್‌ನ ಐಕಾನಿಕ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಬಹುನಿರೀಕ್ಷಿತ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಸೆಣಸಲಿದೆ. ಈ ವಿಶ್ವಕಪ್​ ಪಂದ್ಯಾವಳಿಯಲ್ಲಿ ಆಡಿದ ಎಲ್ಲ 10 ಪಂದ್ಯಗಳಲ್ಲೂ ಭಾರತ ದಿಗ್ವಿಜಯ ಸಾಧಿಸಿದೆ. ಆದರೆ 24 ವರ್ಷಗಳಲ್ಲಿ ಆಸ್ಟ್ರೇಲಿಯಾ ಒಂದೇ ಒಂದು ಫೈನಲ್‌ನಲ್ಲಿ ಸೋತಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದ್ದು, ಅದೊಂದು ಅಪಾಯಕಾರಿ ತಂಡ ಎಂದು ಹೇಳಬೇಕಾಗಿಲ್ಲ.

    ಇದನ್ನೂ ಓದಿ: ವಿಶ್ವಕಪ್​ ಫೈನಲ್​: ಭಾರತ-ಆಸ್ಟ್ರೇಲಿಯಾ ಜಾತಕದಲ್ಲಿ ಯಾರಿಗೆ ಗೆಲುವು? ಖ್ಯಾತ ಜ್ಯೋತಿಷಿಯ ಭವಿಷ್ಯ ವೈರಲ್​
    ಒಂದಲ್ಲ, ಎರಡಲ್ಲ, 5 ಬಾರಿ ವಿಶ್ವಚಾಂಪಿಯನ್ ಆಗಿ, ಯಾರಿಗೂ ಸರಿಸಾಟಿಯಿಲ್ಲದ ಎತ್ತರಕ್ಕೆ ಕಾಂಗರೂ ಪಡೆ ಬೆಳೆದು ನಿಂತಿದೆ. ಹೀಗಾಗಿ ಸರಿಸಾಟಿಯಿಲ್ಲದ ತಂಡವಾಗಿ ಭಾರತ ತ್ರಿವಿಕ್ರಮನಂತೆ ಬೆಳೆದು ನಿಂತಿದ್ದರೂ ಸ್ವಲ್ಪ ಜಾಗರೂಕತೆ ತಪ್ಪಿದರೂ ಕೋಟಿ ಕೋಟಿ ಅಭಿಮಾನಿಗಳನ್ನಿ ನಿರಾಶೆಗಡಲಲ್ಲಿ ಮುಳುಗಿಸಿ ಮನೆಯ ಹಾದಿ ಹಿಡಿಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತಕ್ಕೆ ಕಾಂಗರೂ ಪಡೆ ಸುಲಭದ ಭೇಟೆಯೇನಲ್ಲ.
    ಆಸ್ಟ್ರೇಲಿಯಾದ ನಂತರ ಭಾರತ ಮತ್ತು ವೆಸ್ಟ್ ಇಂಡೀಸ್ ಅತಿ ಹೆಚ್ಚು ಬಾರಿ(2 ಬಾರಿ) ವಿಶ್ವಕಪ್ ಗೆದ್ದಿವೆ ಎಂದರೆ ವಿಶ್ವ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪ್ರಾಬಲ್ಯ ಹೇಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಆ ತಂಡ ವಿಶ್ವಕಪ್ ನಲ್ಲಿ ಫೈನಲ್ ತಲುಪಿದರೆ ಸೋಲುವುದು ವಿರಳ. ನಾವು ಆಸ್ಟ್ರೇಲಿಯದ ವಿಶ್ವಕಪ್‌ನ ಇತಿಹಾಸವನ್ನು ಒಮ್ಮೆ ನೋಡೋಣ….

    ಮೊದಲ ಮೂರು ವಿಶ್ವಕಪ್‌ಗಳಲ್ಲಿ ಆಸ್ಟ್ರೇಲಿಯಾ ತಂಡ ಹೆಚ್ಚು ಪ್ರಭಾವ ಬೀರಲಿಲ್ಲ. 1975 ರಲ್ಲಿ ಸೆಮಿಸ್ ತಲುಪಿದ ನಂತರ, 1979 ಮತ್ತು 1983 ರಲ್ಲಿ ಫೈನಲ್ ತಲುಪಲು ವಿಫಲವಾಯಿತು. 1987 ರ ವಿಶ್ವಕಪ್ ನಂತರ, ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ತನ್ನ ಛಾಪು ಮೂಡಿಸಿತು.
    ಭಾರತ ಮತ್ತು ಪಾಕಿಸ್ತಾನ ಜಂಟಿಯಾಗಿ ಆಯೋಜಿಸಿದ್ದ ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಮೊದಲ ಬಾರಿಗೆ ಚಾಂಪಿಯನ್ ಆಯಿತು. 1992 ರ ವಿಶ್ವಕಪ್ ಫೈನಲ್‌ನಲ್ಲಿ ಕಾಂಗರೂಗಳು ಗ್ರೂಪ್​ ಹಂತದಲ್ಲಿಯೇ ಸೋತು ವಾಪಸ್ಸಾದರು. ಆದರೆ 1996 ರಲ್ಲಿ ವಿಶ್ವಕಪ್‌ನ ರನ್ನರ್ ಅಪ್ ಆದರು. ಶ್ರೀಲಂಕಾ ವಿರುದ್ಧದ ಈ ಫೈನಲ್‌ನಲ್ಲಿ 8 ವಿಕೆಟ್‌ಗಳಿಂದ ಆಸ್ಟ್ರೇಲಿಯಾ ಸೋತಿತ್ತು.

    24 ವರ್ಷಗಳಲ್ಲಿ ಸೋಲು ಕಂಡಿಲ್ಲ:  ಕ್ರಿಕೆಟ್‌ನಲ್ಲಿ 1999 ರಿಂದ ಆಸ್ಟ್ರೇಲಿಯಾ ಪ್ರಾಬಲ್ಯ ಮೆರೆದಿದೆ. ವಿಶ್ವದ ಕ್ರಿಕೆಟ್ ರಾಷ್ಟ್ರಗಳು ಆಸ್ಟ್ರೇಲಿಯಾ ವಿರುದ್ಧ ಆಡಲು ಭಯಪಡುತ್ತಿದ್ದವು. ಎದುರಾಳಿಗಳಿಗೆ ಯಾವುದೇ ಅವಕಾಶ ನೀಡದೆ ಸೋಲಿಸುತ್ತದೆ. 1999 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಪಾಕಿಸ್ತಾನವನ್ನು ಸೋಲಿಸಿತು. 2003 ರ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ವಿರುದ್ಧ ಬೃಹತ್ ಜಯದೊಂದಿಗೆ ಆಸ್ಟ್ರೇಲಿಯಾ ಸತತ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಆಯಿತು. ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆದ 2007 ರ ವಿಶ್ವಕಪ್ ಅನ್ನು ಗೆದ್ದು ಹ್ಯಾಟ್ರಿಕ್ ವಿಶ್ವಕಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

    5 ಬಾರಿ ವಿಶ್ವಕಪ್ ಫೈನಲ್: ಇನ್ನು 2011ರಲ್ಲಿ ಆಸ್ಟ್ರೇಲಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಎದುರು ಸೋತು 2015ರಲ್ಲಿ ತವರು ನೆಲದಲ್ಲಿ ವಿಶ್ವ ಚಾಂಪಿಯನ್‌ ಆಯಿತು.
    ಆಸ್ಟ್ರೇಲಿಯಾ ತಂಡ ಈ 24 ವರ್ಷಗಳಲ್ಲಿ 7 ವಿಶ್ವಕಪ್‌ಗಳನ್ನು ಆಡಿದೆ. ಪ್ರಸ್ತುತ ವಿಶ್ವಕಪ್‌ನೊಂದಿಗೆ 5 ಬಾರಿ ವಿಶ್ವಕಪ್ ಫೈನಲ್ ತಲುಪಿದೆ. ಆಡಿದ 4 ವಿಶ್ವಕಪ್ ಫೈನಲ್‌ಗಳಲ್ಲಿ ಆಸೀಸ್ ಸುಲಭವಾಗಿ ಗೆದ್ದಿದೆ. ಈ ಹಿನ್ನಲೆಯಲ್ಲಿ ಭಾರತ ತಂಡ ತನ್ನ ತವರು ನೆಲದಲ್ಲಿ ಪಂದ್ಯ ಆಡುತ್ತಿದ್ದರೂ ಕಾಂಗರೂಗಳನ್ನು ಸೋಲಿಸಬೇಕಾದರೆ ಶಕ್ತಿ ಮೀರಿ ಹೋರಾಡಲೇಬೇಕು. 1996ರ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಆಸೀಸ್ ಕೊನೆಯ ಬಾರಿಗೆ ಸೋತಿತ್ತು.

    ವಿರಾಟ್​ ಕೊಹ್ಲಿಯನ್ನು ಸ್ವಾರ್ಥಿ ಎಂದವರು ಇಂದು ಪಾಕ್​ ಕ್ರಿಕೆಟ್​ ತಂಡದ ಮುಖ್ಯ ಕೋಚ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts