More

    VIDEO | ಆಸೀಸ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್​ ತಿರುಗೇಟು

    ಮ್ಯಾಂಚೆಸ್ಟರ್: ಆತಿಥೇಯ ಇಂಗ್ಲೆಂಡ್ ವೇಗಿಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡ 2ನೇ ಏಕದಿನ ಪಂದ್ಯದಲ್ಲಿ 24 ರನ್‌ಗಳಿಂದ ಶರಣಾಗಿದೆ. ಇದರಿಂದಾಗಿ ಸರಣಿ 1-1ರಿಂದ ಸಮಬಲಗೊಂಡಿದೆ. ನಿರ್ಣಾಯಕ ಏಕದಿನ ಪಂದ್ಯ ಬುಧವಾರ ನಡೆಯಲಿದೆ.

    ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಭಾನುವಾರ ನಡೆದ ಕಾದಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ತಂಡ ಒಂದು ಹಂತದಲ್ಲಿ 149 ರನ್‌ಗೆ 8 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಕೊನೆಗೆ ಬಾಲಂಗೋಚಿಗಳ ಸಹಾಯದಿಂದ 9 ವಿಕೆಟ್‌ಗೆ 231 ರನ್ ಪೇರಿಸಿತು. ಪ್ರತಿಯಾಗಿ ಆಸ್ಟ್ರೇಲಿಯಾ ತಂಡ ನಾಯಕ ಆರನ್ ಫಿಂಚ್ (73 ರನ್, 105 ಎಸೆತ, 8 ಬೌಂಡರಿ, 1 ಸಿಕ್ಸರ್) ತಾಳ್ಮೆಯ ಬ್ಯಾಟಿಂಗ್‌ನಿಂದ ಗೆಲುವಿನತ್ತ ಮುನ್ನಡೆದರೂ, 32 ರನ್ ಅಂತರದಲ್ಲಿ 7 ವಿಕೆಟ್ ಕಳೆದುಕೊಂಡು ತತ್ತರಿಸಿತು. ಕೊನೆಗೆ 48.4 ಓವರ್‌ಗಳಲ್ಲಿ 207 ರನ್‌ಗೆ ಆಸ್ಟ್ರೇಲಿಯಾ ಸರ್ವಪತನ ಕಂಡಿತು.

    ವೇಗಿ ಜೋಫ್ರಾ ಆರ್ಚರ್ (34ಕ್ಕೆ 2) ಆರಂಭಿಕ ಆಘಾತ ನೀಡಿದ್ದರೂ, ಆರನ್ ಫಿಂಚ್ ಮತ್ತು ಮಾರ್ನಸ್ ಲಬುಶೇನ್ (48) ಜೋಡಿ 3ನೇ ವಿಕೆಟ್‌ಗೆ ಸೇರಿಸಿದ 107 ರನ್ ನೆರವಿನಿಂದ ಆಸೀಸ್ ಒಂದು ಹಂತದಲ್ಲಿ 2 ವಿಕೆಟ್‌ಗೆ 144 ರನ್ ಗಳಿಸಿ ಸುಲಭ ಗೆಲುವಿನ ಹಾದಿಯಲ್ಲಿತ್ತು. ಆಗ ಕ್ರಿಸ್ ವೋಕ್ಸ್ (32ಕ್ಕೆ 3) ಈ ಜೋಡಿಯನ್ನು ಬೇರ್ಪಡಿಸಿ ಆಸೀಸ್‌ಗೆ ಆಘಾತ ನೀಡಿದರು. ಕೊನೆಯಲ್ಲಿ ಸ್ಯಾಮ್ ಕರ‌್ರನ್ (35ಕ್ಕೆ 3) ಆಸ್ಟ್ರೇಲಿಯಾಕ್ಕೆ ಗೆಲುವು ಕೈಗೆಟುಕದಂತೆ ನೋಡಿಕೊಂಡರು.

    ಇದನ್ನೂ ಓದಿ: 7 ವರ್ಷಗಳ ನಿಷೇಧದಿಂದ ಮುಕ್ತ, ಶ್ರೀಶಾಂತ್ ಸೆಕೆಂಡ್ ಸ್ಪೆಲ್‌ಗೆ ಸಿದ್ಧ

    ಇಂಗ್ಲೆಂಡ್: 9 ವಿಕೆಟ್‌ಗೆ 231 (ಜೇಸನ್ ರಾಯ್ 21, ಬೇರ್‌ಸ್ಟೋ 0, ರೂಟ್ 39, ಮಾರ್ಗನ್ 42, ಬಟ್ಲರ್ 3, ಬಿಲ್ಲಿಂಗ್ಸ್ 8, ವೋಕ್ಸ್ 26, ಟಾಮ್ ಕರ‌್ರನ್ 37, ರಶೀದ್ 35*, ಸ್ಟಾರ್ಕ್ 38ಕ್ಕೆ 2, ಜಂಪಾ 36ಕ್ಕೆ 3, ಕಮ್ಮಿನ್ಸ್ 56ಕ್ಕೆ 1), ಆಸ್ಟ್ರೇಲಿಯಾ: 48.5 ಓವರ್‌ಗಳಲ್ಲಿ 207 (ವಾರ್ನರ್ 6, ಫಿಂಚ್ 73, ಸ್ಟೋಯಿನಿಸ್ 9, ಲಬುಶೇನ್ 48, ಕ್ಯಾರಿ 36, ವೋಕ್ಸ್ 32ಕ್ಕೆ 3, ಆರ್ಚರ್ 34ಕ್ಕೆ 3, ಸ್ಯಾಮ್ ಕರ‌್ರನ್ 35ಕ್ಕೆ 3). ಪಂದ್ಯಶ್ರೇಷ್ಠ: ಜೋಫ್ರಾ ಆರ್ಚರ್.

    ಐಪಿಎಲ್‌ಗೆ ಬರಲಿದ್ದಾರೆ ಆಸ್ಟ್ರೇಲಿಯಾದ ಹಾಟ್ ನಿರೂಪಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts