More

    100 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಮುಚ್ಚಿದ ಗಡಿ!

    ಸಿಡ್ನಿ: ಕರೊನಾ ವೈರಸ್‌ ಕ್ಷಣ ಕ್ಷಣಕ್ಕೂ ಆತಂಕ ಸೃಷ್ಟಿಸುತ್ತಿರುವ ಬೆನ್ನಲ್ಲೇ ಹಲವಾರು ದೇಶಗಳು ತನ್ನ ದೇಶದ ಗಡಿಯನ್ನು ಮುಚ್ಚಲು ಮುಂದಾಗಿವೆ.
    ಇಂಥದ್ದೇ ಪರಿಸ್ಥಿತಿ ಆಸ್ಟ್ರೇಲಿಯಾದಲ್ಲಿಯೂ ನಿರ್ಮಾಣವಾಗಿದೆ. 100 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯ ಸರ್ಕಾರ ತನ್ನ ದೇಶದ ಹಲವು ಗಡಿಗಳನ್ನು ಮುಚ್ಚಲು ಮುಂದಾಗಿದೆ.

    ಈ ಕುರಿತು ವಿಕ್ಟೋರಿಯ ಪ್ರೀಮಿಯರ್‌ ಡೇನಿಯಲ್‌ ಆಂಡ್ರೂಸ್‌ ತಿಳಿಸಿದ್ದಾರೆ. ಕರೊನಾ ವೈರಸ್‌ ಪ್ರಕರಣ ದಿನದಿಂದ ದಿನಕ್ಕೆ ಏರುತ್ತಿರುವ ನಿಟ್ಟಿನಲ್ಲಿ ಇಂಥದ್ದೊಂದು ಕ್ರಮಕ್ಕೆ ಮುಂದಾಗಿರುವುದಾಗಿ ಅವರು ಹೇಳಿದ್ದಾರೆ.

    ಇದನ್ನೂ ಓದಿ: ದೇಶ ವಿರೋಧಿ ಕೃತ್ಯ- 40 ವೆಬ್‌ಸೈಟ್‌ ನಿಷೇಧಿಸಿದ ಕೇಂದ್ರ ಸರ್ಕಾರ

    1919ರಲ್ಲಿ ಸ್ಪಾನಿಷ್‌ ಫ್ಲ್ಯೂ ಸಾಂಕ್ರಾಮಿಕ ರೋಗ ಹರಡಿದ್ದ ಸಂದರ್ಭದಲ್ಲಿ ಬೇರೆ ದೇಶಗಳಿಂದ ಜನರು ಇಲ್ಲಿಗೆ ಬರದಂತೆ ಗಡಿಗಳನ್ನು ಮುಚ್ಚಲಾಗಿತ್ತು. ಈಗ ಕರೊನಾ ಮಾರಿಯಿಂದಾಗಿ ಗಡಿ ಮುಚ್ಚುವ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಈಗಾಗಲೇ ದೇಶದ 30 ಉಪನಗರಗಳಲ್ಲಿ ಕಟ್ಟುನಿಟ್ಟಿನ ಸುರಕ್ಷಿತ ಅಂಶಗಳ ನಿಯಮಗಳನ್ನು ಜಾರಿಗೆ ತರಲಾಗಿದೆ. 9 ಪಬ್ಲಿಕ್ ಹೌಸಿಂಗ್‌ ಟವರ್ಸ್‌ ಲಾಕ್‌ಡೌನ್‌ ಮಾಡಲಾಗಿದೆ.

    ಆಸ್ಟ್ರೇಲಿಯಾದಲ್ಲಿ ಇಲ್ಲಿಯವರೆಗೆ 8,449 ಕರೊನಾ ಸೋಂಕು ಪ್ರಕರಣ ದಾಖಲಾಗಿದ್ದು, 7,399 ಮಂದಿ ಗುಣಮುಖರಾಗಿದ್ದಾರೆ. ಕರೊನಾ ಮಾರಿಗೆ ಇದಾಗಲೇ 104 ಮಂದಿ ಬಲಿಯಾಗಿದ್ದಾರೆ. (ಏಜೆನ್ಸೀಸ್‌)

    ಸಾವಯವ ಕೃಷಿಗೆ ಒತ್ತು- ರೈತರಿಂದ ಸೆಗಣಿ ಖರೀದಿಗೆ ಛತ್ತೀಸಗಢದ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts