More

    ದೇಶ ವಿರೋಧಿ ಕೃತ್ಯ- 40 ವೆಬ್‌ಸೈಟ್‌ ನಿಷೇಧಿಸಿದ ಕೇಂದ್ರ ಸರ್ಕಾರ

    ನವದೆಹಲಿ: ಸುಮಾರು 40 ವೆಬ್‌ಸೈಟ್‌ಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕೆ ಕಾರಣ, ಈ ವೆಬ್‌ಸೈಟ್‌ಗಳು ದೇಶ ವಿರೋಧಿ ಅಭಿಯಾನ ನಡೆಸುತ್ತಿವೆ. ಆದ್ದರಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ಇವುಗಳ ನಿಷೇಧಕ್ಕೆ ಸರ್ಕಾರ ಮುಂದಾಗಿದೆ.

    ನಿಷೇಧಿತ ಸಂಘಟನೆಯಾಗಿರುವ ಸಿಖ್ಸ್ ಫಾರ್ ಜಸ್ಟಿಸ್‌ಗೆ (SFJ) ಸಂಬಧಿಸಿದ ವೆಬ್‌ಸೈಟ್‌ಗಳು ಇವಾಗಿರುವುದಾಗಿ ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಸೈಬರ್ ಸ್ಪೇಸ್ ಮೇಲೆ ನಿಗಾ ವಹಿಸುವ ನೋಡಲ್ ಏಜೆನ್ಸಿಯಾಗಿರುವ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನೀಡಿರುವ ವರದಿಯ ಆಧಾರದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ.

    ಇದನ್ನೂ ಓದಿ: ‘ಕರೊನಾ ನೆಗೆಟಿವ್‌ ಪ್ರಮಾಣಪತ್ರ ಬೇಕೇ ಇಲ್ಲಿ ಬನ್ನಿ’ ಎಂದಿದ್ದ ಆಸ್ಪತ್ರೆ!

    ಅಮೆರಿಕ ಮೂಲದ ಎಸ್‌ಎಫ್‌ಜೆ ಖಾಲಿಸ್ಥಾನ್ ಸಮೂಹಕ್ಕೆ ಸೇರಿರುವ ಗುಂಪು. ಇದು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ- 1967ರ ಅಡಿಯಲ್ಲಿ ಕಾನೂನುಬಾಹಿರ ಸಂಘಟನೆಯಾಗಿದೆ. ಈ ಸಂಘಟನೆ ತನ್ನ ಉದ್ದೇಶಪೂರ್ತಿಗಾಗಿ, ಬೆಂಬಲಿಗರ ಹೆಸರು ಸೊಂದಾವಣೆಗೆ ಒಂದು ಅಭಿಯಾನ ಆರಂಭಿಸಿತ್ತು. ಈ ಕುರಿತು ವಿಚಾರಣೆ ನಡೆಸಿದಾಗ ದೇಶವಿರೋಧಿ ಚಟುವಟಿಕೆಗಳ ಕುರಿತು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿ ಇವುಗಳನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

    ಪ್ರತ್ಯೇಕತಾವಾದಿ ಎಜೆಂಡಾ ಅಡಿ ಸಿಖ್ ಸಮುದಾಯ ಜನಾಭಿಪ್ರಾಯವನ್ನು ಸಂಗ್ರಹಣೆಗೆ ಒತ್ತು ನೀಡಿತ್ತು. ಖಲಿಸ್ತಾನದ ಉದ್ದೇಶವನ್ನು ಈ ಸಂಸ್ಥೆ ಬಹಿರಂಗವಾಗಿ ಬೆಂಬಲಿಸುವ ಮೂಲಕ ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಸವಾಲು ಎಸಗುವ ಕೃತ್ಯಕ್ಕೆ ಕೈಹಾಕಿತ್ತು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. (ಏಜೆನ್ಸೀಸ್‌)

    ಇಲ್ಲಿ ಪ್ಲೇಟು ಚಿನ್ನ, ಖುರ್ಚಿ ಚಿನ್ನ, ಇಡೀ ಹೋಟೆಲ್ಲೇ 24 ಕ್ಯಾರೆಟ್‌ ‌ ಚಿನ್ನ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts