More

    ಜೆಇಇ ಮೇನ್ಸ್ : ಸದ್ಯದಲ್ಲೇ ಹೊರಬೀಳಲಿದೆ, ಫೆಬ್ರವರಿ ಪರೀಕ್ಷೆ ಫಲಿತಾಂಶ

    ನವದೆಹಲಿ: ಜಾಯಿಂಟ್ ಎಂಟ್ರೆನ್ಸ್ ಮೇನ್ ಎಕ್ಸಾಂ 2021 (ಜೆಇಇ ಮೇನ್) ರ ಫೆಬ್ರವರಿ ಪರೀಕ್ಷೆಗಳ ಫಲಿತಾಂಶ ಸದ್ಯದಲ್ಲೇ ಪ್ರಕಟವಾಗಲಿದೆ. ಪ್ರತಿಷ್ಠಿತ ಐಐಟಿಗಳಿಗೆ ಪ್ರವೇಶಕ್ಕಾಗಿ ನಡೆಸುವ ಜೆಇಇ ಪರೀಕ್ಷೆಗಳ ಮೊದಲ ಹಂತದಲ್ಲಿ ಭಾಗವಹಿಸಿದ ಸುಮಾರು 6 ಲಕ್ಷ ವಿದ್ಯಾರ್ಥಿಗಳ ಪರ್ಸೆಂಟೈಲ್ ರಾಂಕ್ ವಿವರಗಳು ಇಂದು ಅಥವಾ ನಾಳೆ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

    ಜೆಇಇ 2021ಕ್ಕೆ ದೇಶದಾದ್ಯಂತ ಸುಮಾರು 22 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಫೆಬ್ರವರಿಯಲ್ಲಿ 6.05 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇವರ ಪರ್ಸೆಂಟೈಲ್ ವಿವರಗಳು ಸದ್ಯದಲ್ಲೇ ಹೊರಬೀಳಲಿವೆ. ಉಳಿದ ವಿದ್ಯಾರ್ಥಿಗಳು ಮಾರ್ಚ್​, ಏಪ್ರಿಲ್ ಮತ್ತು ಮೇನಲ್ಲಿ ನಡೆಯುವ ಮುಂದಿನ ಮೂರು ಹಂತಗಳ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅರ್ಹತೆ ಹೊಂದಿರುತ್ತಾರೆ.

    ಇದನ್ನೂ ಓದಿ: ಬ್ರೇಕ್​ ಫೇಲ್​ ಆಗಿ ಹಿಂದಕ್ಕೆ ಚಲಿಸಿದ ಕೆಎಸ್​ಆರ್​ಟಿಸಿ ಬಸ್ಸು! ವಿದ್ಯಾರ್ಥಿಗಳಿಂದ ಉಳಿಯಿತು ಪ್ರಯಾಣಿಕರ ಪ್ರಾಣ

    ಜೆಇಇ ಪರೀಕ್ಷೆ ನಡೆಸುವ ಸರ್ಕಾರಿ ಸಂಸ್ಥೆ ನಾಷನಲ್ ಟೆಸ್ಟಿಂಗ್ ಏಜೆನ್ಸಿ(ಎನ್​ಟಿಎ)ಯು ಮಾರ್ಚ್​ 7 ರ ಭಾನುವಾರ ಮೊದಲ ಹಂತದ ಪರೀಕ್ಷೆಗಳ ಫಲಿತಾಂಶವನ್ನು ನೀಡುವುದಾಗಿ ಘೋಷಿಸಿತ್ತು. ಆದರೆ ಈ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಫಲಿತಾಂಶದ ಎದುರುನೋಡುತ್ತಿದ್ದಾರೆ.

    ಫಲಿತಾಂಶವು ಘೋಷಣೆಯಾದ ಬಳಿಕ, ಫೆಬ್ರವರಿಯಲ್ಲಿ ಮೊದಲ ಹಂತದ ಪರೀಕ್ಷೆ ಬರೆದ ಪ್ರವೇಶಾರ್ಥಿಗಳು ತಮ್ಮ ಪರ್ಸೆಂಟೈಲ್ ವಿವರಗಳನ್ನು ಎನ್​ಟಿಎನ ಅಧಿಕೃತ ವೆಬ್​ಸೈಟ್ jeemain.nta.nic.in ನಲ್ಲಿ ಪಡೆಯಬಹುದಾಗಿದೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ನಟಿ ಪ್ರಿಯಾಂಕಾರ ಇತ್ತೀಚಿನ ಸಾಹಸ ಏನು ಗೊತ್ತೆ?!

    ಹದಿನೇಳರ ಹುಡುಗಿಯ ಮೇಲೆ ಗ್ಯಾಂಗ್ ರೇಪ್… ಸ್ನೇಹಿತೆ ಮನೆಗೆ ಹೋಗಿದ್ದೇ ತಪ್ಪಾಯಿತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts