More

    ರಕ್ತದಾನ ಮಾಡುವವರು ಸೂಪರ್ ಹೀರೋಗಳು

    ಹಟ್ಟಿಚಿನ್ನದಗಣಿ: ಇನ್ನೊಬ್ಬರಿಗೆ ನೀಡಬಹುದಾದ ಅಮೂಲ್ಯ ಕೊಡುಗೆಗಳಲ್ಲಿ ರಕ್ತವೂ ಒಂದು ಎಂದು ಹಟ್ಟಿಚಿನ್ನದಗಣಿ ಕಂಪನಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ವಸಂತಕುಮಾರ್ ವೈ.ಹುಡೇದಮನಿ ಹೇಳಿದರು.

    ಪಟ್ಟಣದ ತಮಿಳು ಸಂಘದಲ್ಲಿ ನರಸಮ್ಮ ಸಿದ್ರಾಮಪ್ಪ ಸಂಗೇಪಾಗ್ ಪುಣ್ಯಸ್ಮರಣೆ ಅಂಗವಾಗಿ ನೆರಳು ಸೇವಾ ಟ್ರಸ್ಟ್, ಶ್ರೀರಾಮಕೃಷ್ಣ ಚಾರಿಟಬಲ್ ಟ್ರಸ್ಟ್‌ನಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಬುಧವಾರ ಮಾತನಾಡಿದರು. ಅಪಘಾತಗಳು ಅಥವಾ ಗಂಭೀರ ಕಾಯಿಲೆಗಳಿಂದ ಬಳಲುವವರಿಗೆ ರಕ್ತದ ಅಗತ್ಯ ಇರುತ್ತದೆ. ಇಂತಹ ಸಮಯದಲ್ಲಿ ರಕ್ತವನ್ನು ದಾನ ಮಾಡಲು ಮುಂದಾಗುವ ಜನರು ನಿಜ ಜೀವನದ ಸೂಪರ್ ಹೀರೋಗಳು ಎಂದರು.

    ರಕ್ತದಾನದ ಬಗ್ಗೆ ಇರುವ ಮೂಢ ನಂಬಿಕೆಗಳನ್ನು ಹೋಗಲಾಡಿಸುವ ಕುರಿತು ಸಂಘ-ಸಂಸ್ಥೆಗಳು ಜಾಗೃತಿ ಮೂಡಿಸಬೇಕು. ರಕ್ತದಾನದಿಂದ ನಮ್ಮ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಆರೋಗ್ಯ ಭಾಗ್ಯ ಸಿಗುತ್ತದೆ. ಆರೋಗ್ಯವಂತ ವ್ಯಕ್ತಿ ರಕ್ತದಾನಕ್ಕೆ ಮುಂದಾಗಬೇಕೆಂದು ಡಾ.ವಸಂತಕುಮಾರ್ ಸಲಹೆ ನೀಡಿದರು.
    ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಹಾಗೂ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಖುಷಿ ಆಸ್ಪತ್ರೆ ಮಾಲೀಕ ಭೀಮಾಶಂಕರ್ ಸಂಗೇಪಾಗ್, ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಗುರಮ್ಮ, ಅಂಬೇಡ್ಕರ್ ಯುವಕ ಮಂಡಳಿ ಅಧ್ಯಕ್ಷ ವಿನೋದ್ ಕಮಲದಿನ್ನಿ, ಪ್ರಮುಖರಾದ ಗಣೇಶ್ ಸಂಗೇಪಾಗ್, ಗುರುರಾಜ್ ಬಿರಾದಾರ್, ಸುಹಾಸ್, ರಾಜು ನಾಯಕ್ ಗಲಗ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts