More

    ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿ

    ಹಟ್ಟಿಚಿನ್ನದಗಣಿ: ಆರೂಢ ಸಂಪ್ರದಾಯವನ್ನು ಮೈಗೂಡಿಸಿಕೊಂಡು, ಧರ್ಮ, ಶಿಕ್ಷಣ ಸಮಾಜ ಸೇವೆಯಲ್ಲಿ ಮುನ್ನೆಲೆಯಲ್ಲಿರುವ ಪಟ್ಟಣದ ಸಿದ್ಧಾರೂಢ ಮಠ ಅರಸಿ ಬಂದ ಭಕ್ತರಿಗೆ ಆಶ್ರಯ ತಾಣವಾಗಿದೆ ಎಂದು ಜಮಖಂಡಿ ಸಿದ್ಧಾರೂಢ ಪೀಠದ ಅಧ್ಯಕ್ಷ, ಸ್ಥಳೀಯ ಸಿದ್ಧಾರೂಢ ಮಠದ ಗೌರವಾಧ್ಯಕ್ಷ ಸಹಜಾನಂದ ಅವಧೂತರು ಹೇಳಿದರು.
    ಮಠದಲ್ಲಿ ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮಗಳ ಮಂಗಲೋತ್ಸವದಲ್ಲಿ ಭಾನುವಾರ ಸಂಜೆ ಆಶೀರ್ವಚನ ನೀಡಿದರು. ಸಂಸ್ಕೃತಿ, ಸಂಪ್ರದಾಯ ಉಳಿಸಿ ಬೆಳೆಸುವುದಕ್ಕಾಗಿ ಭಕ್ತರು ಉತ್ತಮ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು, ಮಕ್ಕಳಿಗೆ ಸಂಸ್ಕಾರ ನೀಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕೆಂದರು.
    ಸಿದ್ಧಾರೂಢರ ಮಠದ ಕಾರ್ಯದರ್ಶಿ ಮಲ್ಲಿಕಾರ್ಜುನ ಚಿತ್ರನಾಳ ಸಿದ್ಧಾರೂಢರ ಜೀವನ, ಆಧ್ಯಾತ್ಮ ಸಾಧನೆ ಕುರಿತು ಪ್ರವಚನ ನೀಡಿದರು. ಗುರುರಾಜ ಶಾಸ್ತ್ರಿ ನೇತೃತ್ವದಲ್ಲಿ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಬಾಜಾ-ಭಜಂತ್ರಿಯೊಂದಿಗೆ ಕುಂಭ-ಕಳಸ ಮೆರವಣಿಗೆ ನಡೆಯಿತು. ಮೆರವಣಿಗೆ ನಂತರ ಪೂರ್ಣಕುಂಭ ಜಲವನ್ನು ಸಿದ್ಧಾರೂಢರ ಮೂರ್ತಿಗೆ ಅಭಿಷೇಕ ಮಾಡಲಾಯಿತು.
    ಸಿದ್ಧಾರೂಢ ಮಠದ ಅಧ್ಯಕ್ಷ ಬಿ.ಎಸ್.ಹಾಜಿ, ಬಿಜೆಪಿ ಮುಖಂಡ ಕರಿಯಪ್ಪ ವಜ್ಜಲ್, ಎಪಿಎಂಸಿ ಮಾಜಿ ನಿರ್ದೇಶಕ ಅಮ್ಜದ್ ಹುಸೇನ್, ಶಂಕರಪ್ಪ ಹೆಮ್ಮಡಗಿ, ನಾಗಪ್ಪ ಕೋಠಾ, ಶಂಕರಪ್ಪ ಮಲ್ಲಟ, ಗುರುಲಿಂಗಪ್ಪ, ಲಿಂಗಪ್ಪ, ನಿಂಗಪ್ಪ ಬಿ.ಆರ್‌ಗುಂಡ, ಗುಂಡಪ್ಪ ಯರಡೋಣಾ, ನಿರುಪಾದಿ ಕವಿತಾಳ, ಗುಡದಪ್ಪ ಭಂಡಾರಿ, ಮರಿಲಿಂಗಪ್ಪ, ಶಿವಪುತ್ರ, ಶಿವು ಬೂದೂರ್, ಬಸವರಾಜ್ ಮಾಚನೂರು, ಬಾಲಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts