More

    ಎನ್​ಆರ್​ಐ ಮನೆ ಕಬ್ಜಾಗೆ ಮುಂದಾದ ನಟಿ.. ಮನೆ ಮೌಲ್ಯ ಕೇಳಿದ್ರೆ ಹೌಹಾರ್ತೀರಿ!

    ಹೈದರಾಬಾದ್: ವಾರಸುದಾರರು ಇಲ್ಲದಿರುವ ಮನೆ, ಆಸ್ತಿ, ಸರ್ಕಾರಿ ಜಾಗಗಳಿಗೆ ಬಲಾಢ್ಯರು, ರಿಯಲ್​ ಎಸ್ಟೇಟ್​ ಉದ್ದಿಮೆದಾರರು ತಂತಿ ಬೇಲಿ ಹಾಕಿಕೊಳ್ಳುವುದು ಎಲ್ಲೆಲ್ಲೂ ಕಾಣಬಹುದು. ಇಂತಹುದೇ ಒಂದು ಪ್ರಕರಣ ನೆರೆಯ ತೆಲಂಗಾಣಾದ ರಾಜಧಾನಿ ಹೈದರಾಬಾದ್​ನಲ್ಲಿ ನಡೆದಿದೆ. ಜುಬ್ಲಿ ಹಿಲ್ಸ್‌ನಲ್ಲಿನ ಸುಮಾರು 30 ಕೋಟಿ ರೂ.ಮೌಲ್ಯದ ಅನಿವಾಸಿ ಭಾರತೀಯರ ದುಬಾರಿ ಮನೆ ವಶಪಡಿಸಿಕೊಳ್ಳಲು ಯತ್ನಿಸಿದ ಆರೋಪಿಗಳ ವಿರುದ್ಧ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಇದರಲ್ಲಿ ನಟಿ ಪ್ರಮುಖ ಪಾತ್ರ ವಹಿಸಿರುವುದು ಕಂಡುಬಂದಿದೆ.

    ಇದನ್ನೂ ಓದಿ: ತ್ರಿಶಾ ಮೇಲೆ ಅಸಭ್ಯ ಕಾಮೆಂಟ್.. ಮನ್ಸೂರ್ ಅಲಿ ವಿರುದ್ಧ ಕೇಸ್ ದಾಖಲು
    ಜುಬ್ಲಿ ಹಿಲ್ಸ್​ನ ರಸ್ತೆ ನಂ. 58ರಲ್ಲಿ ಅಮೆರಿಕದಲ್ಲಿ ನೆಲೆಸಿರುವ ಎನ್‌ಆರ್‌ಐ ಅಂತರಾಮ್ ಮಾಧುರಿ 1100 ಗಜಗಳಲ್ಲಿ ಕಟ್ಟಡ ಹೊಂದಿದ್ದಾರೆ. ಕಟ್ಟಡದ ಮೊದಲ ಮಹಡಿಯನ್ನು ಸಂಬಂಧಿಕರು ಆಕ್ರಮಿಸಿಕೊಂಡಿದ್ದು, ನೆಲ ಅಂತಸ್ತು ಖಾಲಿ ಇದೆ. ಒಂದು ವರ್ಷದ ಹಿಂದೆ ಈ ಕಟ್ಟಡದಲ್ಲಿ ಚಿತ್ರನಟಿ ಸ್ವಾತಿದೀಕ್ಷಿತ್ ಕಾಫಿ ಶಾಪ್ ಸ್ಥಾಪಿಸುವ ಬಗ್ಗೆ ಮಾಧುರಿ ಅವರನ್ನು ಸಂಪರ್ಕಿಸಿದ್ದರು.

    ಈ ನಿಟ್ಟಿನಲ್ಲಿ ಒಪ್ಪಂದ ಸಹ ಮಾಡಿಕೊಳ್ಳಲಾಗಿದೆ. ಆದಾಗ್ಯೂ, ಅವರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಅಗ್ರಿಮೆಂಟ್​ ಕೊನೆಗೊಳಿಸಲಾಯಿತು. ಈ ಬಗ್ಗೆ ನ್ಯಾಯಾಲಯದಲ್ಲಿ ವಿವಾದವಿದೆ. ಪರಿಸ್ಥಿತಿ ಹೀಗಿರುವಾಗ ಸೋಮವಾರ ಸಂಜೆ ಸುಮಾರು 20 ಮಂದಿ ಪುಂಡರು ಗೇಟ್ ಮುರಿದು ಮನೆಗೆ ನುಗ್ಗಿದ್ದಾರೆ. ಅಡ್ಡಗಟ್ಟಿದ ವಾಚ್‌ಮೆನ್ ಅಶೋಕ್ ಪತ್ನಿ ಶೋಭಾರಾಣಿ ಮೇಲೆ ಹಲ್ಲೆ ನಡೆಸಿ ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ಈ ಬಗ್ಗೆ ಮಾಲೀಕ ಮಾಧುರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿದಾಗ ಕೆಲ ದುಷ್ಕರ್ಮಿಗಳು ಪರಾರಿಯಾಗಿದ್ದು, ರಣವೀರ್ ಸಿಂಗ್, ಕಂಡೆ ರಾಮ್‌ಕುಮಾರ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

    ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅಕ್ರಮವಾಗಿ ಮನೆಗೆ ನುಗ್ಗಿ ಮನೆ ಒತ್ತುವರಿ ಮಾಡಿಕೊಳ್ಳಲು ಯತ್ನಿಸಿದ ಸ್ವಾತಿ ದೀಕ್ಷಿತ್, ಚಿಂತಲಾ ಪ್ರಶಾಂತ್ ಹಾಗೂ ಇತರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಾಚ್‌ಮನ್ ಶೋಭಾರಾಣಿ ನೀಡಿದ ದೂರಿನನ್ವಯ ಪೊಲೀಸರು ನಟಿ ಸ್ವಾತಿ ದೀಕ್ಷಿತ್ ಮತ್ತು ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ‘ನಂಗೆ ಕನ್ನಡ ತುಂಬಾ ಇಷ್ಟ..’ ಎಂದು ಕ್ರಿಕೆಟಿಗ ಕಪಿಲ್​ದೇವ್ ಅವರಿಂದ ಹೇಳಿಸಿದ್ರು ಕನ್ನಡದ ನಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts