More

    ಮತದಾನಕ್ಕೆ ಎನ್.ಆರ್.ಐ ಗಳ ನಿರುಸ್ಸಾಹ, ಪ್ರಾಕ್ಸಿ ವೋಟಿಂಗ್ ಅಥವಾ ಇಟಿಪಿಬಿಎಸ್(ಇ-ಪೋಸ್ಟಲ್ ಬ್ಯಾಲೆಡ್) ವ್ಯವಸ್ಥೆಗೆ ಆಗ್ರಹ

    ವಿಶೇಷ ವರದಿ

    ಪ್ರತೀ ಚುನಾವಣೆಯಲ್ಲೂ ವಿದೇಶದಲ್ಲಿರುವ ಅನಿವಾಸಿ ಭಾರತೀಯರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗುತ್ತಿದ್ದು, ಈಬಾರಿ ಮತದಾನ ಪ್ರಕ್ರೀಯೆಯಲ್ಲಿ ನಿರುತ್ಸಾಹ ಮೂಡಿದೆ.

    ಭಾರತೀಯ ಪ್ರಜಾತಿನಿಧಿ ಕಾಯಿದೆಗೆ 2010ರಲ್ಲಿ ತಿದ್ದುಪಡಿ ಮೂಲಕ ಎನ್‌ಆರ್‌ಐಗಳಿಗೆ ಮತದಾರರ ಪಟ್ಟಿ ಸೇರಿ ಮತ ಚಲಾಯಿಸುವ ಹಕ್ಕು ನೀಡಲಾಗಿದೆ. ಲಭ್ಯ ಮಾಹಿತಿ ಪ್ರಕಾರ ಉದ್ಯೋಗ ಹಾಗೂ ಶಿಕ್ಷಣದ ಸಲುವಾಗಿ ಪ್ರಪಂಚದ ಸುಮಾರು 185 ದೇಶಗಳಲ್ಲಿ 3.21 ಕೋಟಿ ಅನಿವಾಸಿ ಭಾರತೀಯರು ನೆಲೆಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಅಂದಾಜಿಸಿದೆ. ಗಲ್ಫ್ ರಾಷ್ಟ್ರಗಳಲ್ಲೇ ದ.ಕ, ಉಡುಪಿ ಸೇರಿದಂತೆ ಕರಾವಳಿಯ ಸುಮಾರು 5.71 ಲಕ್ಷ ಮಂದಿ ಇದ್ದಾರೆ. ಒಟ್ಟಾರೆ ಕರ್ನಾಟಕದ 13.5 ಲಕ್ಷಕ್ಕೂ ಅಧಿಕ ಮಂದಿ ಬೇರೆ ಬೇರೆ ದೇಶಗಳಲ್ಲಿದ್ದಾರೆ. 2014 ಲೋಕಸಭೆ ಚುನಾವಣೆಯಲ್ಲಿ ಕೇವಲ 8 ಮಂದಿ ಎನ್‌ಆರ್‌ಐಗಳು ಮತ ಚಲಾಯಿಸಿದ್ದರೆ, 2019ರಲ್ಲಿ 99,807 ಮತದಾರರ ಪೈಕಿ 24,458 ಪುರುಷರು, 1,148 ಮಹಿಳೆಯರು ಚಲಾಯಿಸಿದ್ದರು. ಈಗಾಗಲೇ ದ.ಕ ಜಿಲ್ಲೆಯ ಸೀಪ್ ಸಮಿತಿಯಿಂದ 317 ಎನ್‌ಆರ್‌ಐ, ಉಡುಪಿಯಿಂದ 411 ಎನ್‌ಆರ್‌ಐಗಳನ್ನು ಸಂಪರ್ಕಿಸಿ ಮತದಾನ ಮಾಡುವಂತೆ ಮನವೋಲಿಸಲಾಗಿದ್ದರೂ ಸಕಾರಾತ್ಮಕ ಪ್ರತಿಕ್ರೀಯೆ ವ್ಯಕ್ತವಾಗಿದೆ.

    *ಮತದಾನದ ಬಗ್ಗೆ ಜಾಗೃತವಾಗದ ಎನ್‌ಆರ್‌ಐ ಘಟಕ

    ಲಭ್ಯ ಮಾಹಿತಿಯಂತೆ ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ದ.ಕ ಹಾಗೂ ಉಡುಪಿಯ 2317 ಎನ್‌ಆರ್‌ಐಗಳು ಮತದಾನ ಮಾಡಿದ್ದರು. ಒಂದು ವರ್ಷದೊಳಗೆ ಮತ್ತೊಂದು ಚುನಾವಣೆ ಎದುರಾಗಿದ್ದರಿಂದ ಮತ್ತೊಮ್ಮೆ ಪುನರಾಗಮನ ಕಷ್ಟ. ವಿದೇಶಗಳಲ್ಲಿರುವ ಎನ್‌ಆರ್‌ಐಗಳು ಬೆಂಗಳೂರು, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ತನ್ನ ತವರೂರಿಗೆ ಆಗಮಿಸಲು ಕನಿಷ್ಠಪಕ್ಷ 50 ಸಾವಿರ ರೂ. ಅಗತ್ಯ. ಎನ್‌ಆರ್‌ಐಗಳ ಹಿತಾಸಕ್ತಿ ಕಾಪಾಡಲಿರುವ ಎನ್‌ಆರ್‌ಐ ಘಟಕವೂ ಎನ್‌ಆರ್‌ಐ ಮತ ಹಾಗೂ ಮತದಾನಗಳ ಬಗ್ಗೆ ಯಾವುದೇ ಯೋಜನೆ ರೂಪಿಸಿಲ್ಲ ಎಂಬ ಆಕ್ರೋಷ ವ್ಯಕ್ತವಾಗಿದೆ.

    —————–

    ಯಾರಿವರು ಎನ್‌ಆರ್‌ಐಗಳು

    ವರ್ಷದ 182 ದಿನಗಳಿಗಿಂತ ಕಡಿಮೆ ಅವಧಿ ಭಾರತದಲ್ಲಿ ವಾಸವಿರಬೇಕು. ವಿದೇಶಿ ರಾಷ್ಟ್ರದಲ್ಲಿ ಉದ್ಯೋಗ, ಶಿಕ್ಷಣ, ವ್ಯವಹಾರನಿರತರಾಗಿ ಆ ದೇಶದ ಪೌರತ್ವ ಪಡೆದಿರಬಾರದು. ಈ ಅರ್ಹತೆಯಿದ್ದವರನ್ನು ಎನ್‌ಆರ್‌ಐಗಳು ಎನ್ನಬಹುದು. ಎನ್‌ಆರ್‌ಐ ಮತದಾರರ ಪಟ್ಟಿ ಸೇರಲು 6ಎ ಅರ್ಜಿ ನಮೂನೆ ಆನ್‌ಲೈನ್ ಅಥವಾ ಖುದ್ದು ಬಿಎಲ್‌ಒಗಳ ಮೂಲಕ ಸಲ್ಲಿಸಬೇಕು. ಆದರೆ ಎನ್‌ಆರ್‌ಐ ಮತದಾರರಿಗೆ ಚುನಾವಣಾ ಗುರುತಿನ ಚೀಟಿ ಸಿಗದು, ಮತಗಟ್ಟೆಯಲ್ಲಿ ಪಾಸ್‌ಪೋರ್ಟ್ ಹಾಜರುಪಡಿಸಿ ಮತದಾನ ಮಾಡಬೇಕು.

    ——————-

    ಇ-ಪೋಸ್ಟಲ್ ಬ್ಯಾಲೆಡ್‌ಗೆ ಆಗ್ರಹ

    ಪ್ರತೀ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಇ ಪೋಸ್ಟಲ್ ಬ್ಯಾಲೆಟ್/ಪ್ರಾಕ್ಸಿ ವೋಟಿಂಗ್ ಆಗ್ರಹಗಳು ಹೆಚ್ಚಾಗಿ ಕೇಳಿಬರುತ್ತಿದೆ. ಭಾರತೀಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ನೇಮಿಸಿದ್ದ ಸಮಿತಿಯು ಪ್ರಾಕ್ಸಿ ವೋಟಿಂಗ್ (ಬದಲಿ ಪ್ರತಿನಿಧಿ) ಅಥವಾ ತಾವಿದ್ದ ದೇಶದಲ್ಲೇ ಆನ್‌ಲೈನ್‌ನಲ್ಲಿ ಮತ ಚಲಾಯಿಸುವ ಇ ಪೋಸ್ಟಲ್ ಬ್ಯಾಲೆಟ್ (ಇಟಿಪಿಬಿಎಸ್) ವ್ಯವಸ್ಥೆಗೆ ಶಿಫಾರಸು ಮಾಡಿತ್ತು. ಲೋಕಸಭೆಯಲ್ಲಿ ಪ್ರಜಾಪ್ರತಿನಿಧಿ ಕಾಯಿದೆ ತಿದ್ದುಪಡಿ ವಿಧೇಯಕವನ್ನು 2017ರಲ್ಲಿ ಮಂಡಿಸಿದ್ದು, ಪ್ರಾಕ್ಸಿವೋಟಿಂಗ್ ಸಹಮತ ಕಡಿಮೆಯಿದ್ದರೂ 2018ರ ಆ.9ರಂದು ಅಂಗೀಕಾರವಾಗಿತ್ತು. ಆದರೆ ರಾಜ್ಯಸಭೆಗೆ ಬರಲಿಲ್ಲ, 17ನೇ ಲೋಕಸಭೆ ಅವಧಿಯಲ್ಲೂ ಮಂಡನೆಯಾಗಲಿಲ್ಲ.

    ——————-

    ಮತದಾನ ಪ್ರಕ್ರೀಯೆಯಲ್ಲಿ ಭಾಗವಹಿಸುವಂತೆ ಕರ್ನಾಟಕ ಅನಿವಾಸಿ ಭಾರತೀಯ ಕೋಶದ ಮೂಲಕ ಹಲವರನ್ನು ಸಂಪರ್ಕಿಸಲಾಗಿದೆ. ವಿದೇಶಗಳಲ್ಲಿರುವ ಎನ್.ಆರ್.ಐಗಳನ್ನು ಮತದಾನದತ್ತ ಆಕರ್ಷಿಸಲು ಆಯಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯೋಜನೆ ಹಮ್ಮಿಕೊಳ್ಳಲಾಗಿದೆ.

    ಡಾ.ಆರತಿ ಕೃಷ್ಣ, ಉಪಾಧ್ಯಕ್ಷರು, ಅನಿವಾಸಿ ಭಾರತೀಯ ಕೋಶ ಕರ್ನಾಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts