ನವದೆಹಲಿ: ಕೋವಿಡ್-19 ಲಾಕ್ಡೌನ್ ಹಿನ್ನೆಲೆಯಲ್ಲಿ ಬಹುತೇಕ ಮನೆಗಳಲ್ಲಿ ಸಂಕಷ್ಟದ ಸರಮಾಲೆಯೇ ಸೃಷ್ಟಿಯಾಗಿದೆ. ಪರಸ್ಪರ ಸಮಾಧಾನ ಹೇಳಿಕೊಳ್ಳಲಾಗದ ಅಸಹಾಯಕತೆ ಬಹುತೇಕ ಜನರದ್ದಾಗಿದೆ. ಬಡತನದ ಹಿನ್ನೆಲೆಯಿಂದ ಬಂದ ಅಥ್ಲೀಟ್ಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.
ಬೇರೊಬ್ಬರ ಮುಂದೆ ಕೈಚಾಚಲು ಸ್ವಾಭಿಮಾನ ಅಡ್ಡಿಯಾಗುತ್ತದೆ. ಆದ್ದರಿಂದಲೇ ಅವರು ತರಕಾರಿ ಮಾರಾಟ ಮಾಡುವ ಮೂಲಕ ಕುಟುಂಬದ ಹೊಟ್ಟೆ ತುಂಬಿಸಲು ಯತ್ನಿಸುತ್ತಿದ್ದಾರೆ. ಜಾರ್ಖಂಡ್ನ ರಾಮಗಢದ ಉದಯೋನ್ಮುಖ ಅಥ್ಲೀಟ್ ಗೀತಾ ಕುಮಾರಿ ಅವರ ಪರಿಸ್ಥಿತಿಯೂ ಇದೇ ಆಗಿತ್ತು. ಆದರೆ ಇವರ ಸಂಕಷ್ಟದ ಸುದ್ದಿ ತಿಳಿದ ಜಾರ್ಖಂಡ್ ಸಿಎಂ ಹೇಮಂತ್ ಸೋರೇನ್ ತಕ್ಷಣವೇ 50 ಸಾವಿರ ರೂಪಾಯಿ ನಗದನ್ನು ಗೀತಾಕುಮಾರಿ ಕೈಯಲ್ಲಿ ಇಟ್ಟಿದ್ದಲ್ಲದೆ, ತಿಂಗಳಿಗೆ 3 ಸಾವಿರ ರೂ. ಮಾಸಾಶನ ಕೊಡುವುದಾಗಿ ಹೇಳಿ, ಅಥ್ಲೆಟಿಕ್ಸ್ ತರಬೇತಿಯನ್ನು ಮುಂದುವರಿಸುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ 55 ವರ್ಷ ವಯಸ್ಸಿನ ಮಹಿಳೆ…!
ರಾಮಗಢದ ಜಿಲ್ಲಾಧಿಕಾರಿ ಸಂದೀಪ್ ಸಿಂಗ್ ಅವರು 50 ಸಾವಿರ ರೂ.ಗಳ ಚೆಕ್ ಅನ್ನು ಗೀತಾಕುಮಾರಿಗೆ ಸೋಮವಾರ ಹಸ್ತಾಂತರಿಸಿದರು. ಜತೆಗೆ ಕ್ರೀಡಾ ಕೇಂದ್ರದಲ್ಲಿ ಅವರ ತರಬೇತಿ ಮುಂದುವರಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಿದರು.
ಗೀತಾ ಕುಮಾರಿ ರಾಜ್ಯ ಮಟ್ಟದ ನಡಿಗೆ ಸ್ಪರ್ಧೆಗಳಲ್ಲಿ ಒಟ್ಟು 8 ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಕೋಲ್ಕತದಲ್ಲಿ ನಡೆದ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೂ ಕೊರಳೊಡ್ಡಿದ್ದಾರೆ. ಇಂಥ ಉದಯೋನ್ಮುಖ ಅಥ್ಲೀಟ್ಗೆ ಸಹಾಯ ಮಾಡಿದ್ದಕ್ಕೆ ಹೆಮ್ಮೆಯಾಗುತ್ತಿರುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ.
ಪೆಸಿಫಿಕ್ ಮಹಾಸಾಗರದಿಂದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಬೋಟ್ ತಂದ ಕಸ ಎಷ್ಟು ಗೊತ್ತಾ?