More

    ಪ್ರವಾಹಕ್ಕೆ ನಲುಗಿದ ಅಸ್ಸಾಂ: 37 ಬಲಿ- 11 ಲಕ್ಷ ಜನ ಅತಂತ್ರ

    ನವದೆಹಲಿ: ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚಿಸಿರುವ ಕರೊನಾ ಸೋಂಕಿನ ನಡುವೆಯೇ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕರ ಮಳೆಗೆ ಅಸ್ಸಾಂ ಅಕ್ಷರಶಃ ನಲುಗಿ ಹೋಗಿದೆ
    .
    ಕಳೆದ 24 ಗಂಟೆಯಲ್ಲಿ ತಿನ್ಸುಕಿಯಾ ಮತ್ತು ಮೊರಿಂಗಾವ್​ ಜಿಲ್ಲೆಗಳಲ್ಲಿ ತಲಾ ಒಂದು ಸಂಭವಿಸಿದ ಪರಿಣಾಮ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. 11 ಲಕ್ಷಕ್ಕೂ ಅಧಿಕ ಮಂದಿ ಅತಂತ್ರರಾಗಿದ್ದಾರೆ ಎಂದು ಅಸ್ಸಾಂ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

    ಇದನ್ನೂ ಓದಿ: ಅಂತೂ ಬಂತು ಬಿಹಾರ ಮುಖ್ಯಮಂತ್ರಿ ಕರೊನಾ ರಿಸಲ್ಟ್‌

    ಅಸ್ಸಾಂನ 18 ಜಿಲ್ಲೆಗಳಲ್ಲಿ ಪ್ರವಾಹದ ಆರ್ಭಟ ಜೋರಾಗಿದೆ. ಈ ಪೈಕಿ ಏಳರಲ್ಲಿ ಭಾರೀ ಪ್ರಮಾಣದಲ್ಲಿ ಜನರಿಗೆ ತೊಂದರೆಯಾಗಿದೆ. ದೇಮಾಜಿ, ಲಾಕೀಂಪುರ್, ಬಿಸ್ವನಾಥ್, ಡರ್ರಾಂಗ್, ನಾಲ್ಬಾರಿ, ಬಾರ್ಪೆಟಾ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಹೆಚ್ಚಾಗಿದ್ದು, 1,412 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ.

    53,348 ಹೆಕ್ಟೇರ್​ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದೆ. ಮನೆ ಕಳೆದುಕೊಂಡ 6,531 ಜನರಿಗೆ 171 ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ.

    ಈ ನಡುವೆ ತಮ್ಮ ಸಹಾಯಕ್ಕೆ ಯಾರೂ ಬಂದಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಜತೆಗೆ ಪ್ರವಾಹ ಸಂಬಂಧ ಮಾತಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಬೇಕಾದ ಎಲ್ಲಾ ನೆರವು ನೀಡುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್‌)

    ಕಾಸ್ಟ್‌ ಕಟ್ಟಿಂಗ್‌ ನೆಪವೊಡ್ಡಿ ಇನ್ನೊಂದು ವಿದೇಶಿ ಕಚೇರಿ ಕ್ಲೋಸ್‌- ಉದ್ಯೋಗಿಗಳು ಅತಂತ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts