More

    ಗರ್ಭಸ್ಥ ಕರಡಿ ಕೊಲೆಯಾದ ಫೋಟೊ ವೈರಲ್ ಆಗುತ್ತಿದ್ದಂತೆ ಒಬ್ಬ ಅರೆಸ್ಟ್

    ಶಿಲ್ಲಾಂಗ್: ಗರ್ಭ ಧರಿಸಿದ ಕರಡಿಯನ್ನು ಕೊಲ್ಲುತ್ತಿರುವ ಫೋಟೋ ವೈರಲ್ ಆಗುತ್ತಿದ್ದಂತೆ ಮೇಘಾಲಯದಲ್ಲಿ ಬೇಟೆಗಾರರನ್ನು ಬಂಧಿಸಲಾಗಿದೆ.
    ಹಿಮಾಲಯನ್ ಕಪ್ಪು ಕರಡಿ ಅಥವಾ ಟಿಬೇಟನ್ ಕಪ್ಪು ಕರಡಿ ಎಂದೂ ಕರೆಯಲ್ಪಡುವ ಏಷ್ಯಾಟಿಕ್ ಕರಡಿ ಅಳಿವಿನಂಚಿನಲ್ಲಿರುವ ಪ್ರಾಣಿ ಜಾತಿಯದ್ದಾಗಿದೆ.
    ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಕೆಲವು ಬೇಟೆಗಾರರು ಗರ್ಭ ಧರಿಸಿದ ಏಷ್ಯಾಟಿಕ್ ಕಪ್ಪು ಕರಡಿಯನ್ನು ಕೊಂದು ಚರ್ಮ ತೆಗೆಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಬುಧವಾರ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

    ಇದನ್ನೂ ಓದಿ : ಲಾಕ್​ಡೌನ್​ ಸಮಯದಲ್ಲಿ ಕದ್ದುಮುಚ್ಚಿ ಮಾಡೋದೇನು? ಇಲ್ಲಿದೆ ಬೆಚ್ಚಿಬೀಳಿಸೋ ವರದಿ

    ವೈರಲ್ ಆದ ಫೋಟೋಗಳಲ್ಲಿ ನಾಲ್ವರು ಆ ಕರಡಿ ಜೀವಂತವಿದ್ದಾಗಲೇ ಅದರ ಚರ್ಮ ತೆಗೆಯುತ್ತಿರುವುದು, ಅದು ನೋವಿನಿಂದ ನರಳುತ್ತಿರುವುದು ಕಂಡು ಬಂದಿದೆ. ಈ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ಹುಟ್ಟುಹಾಕಿದೆ. ಈ ಘಟನೆ ಮೇ 4 ರಂದು ಪೈನುರ್ಸಲಾ ಉಪ ವಿಭಾಗದ ಮಾವ್​​ಪೈರ್ಥು ಗ್ರಾಮದಲ್ಲಿ ನಡೆದಿದೆ.
    ಬೇಟೆಗಾರರ ಪೈಕಿ ಒಬ್ಬನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. 1972ರ ವನ್ಯಜೀವಿ (ಸಂರಕ್ಷಣೆ) ಕಾಯ್ದೆಯ ಸಂಬಂಧಿಸಿದ ವಿಭಾಗಗಳ ಅಡಿ ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಗೃಹ ಸಚಿವರೂ ಆಗಿರುವ ಅರಣ್ಯ ಸಚಿವ ಲಖ್ಮೆನ್ ರಿಂಬುಯಿ ತಿಳಿಸಿದ್ದಾರೆ.
    ಘಟನ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ವನ್ಯಜೀವಿ ಅಧಿಕಾರಿಗಳ ತಂಡ ಆ ಪ್ರದೇಶಕ್ಕೆ ತೆರಳಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
    ಲಾಕ್​ಡೌನ್ ಅವಧಿಯಲ್ಲಿ ರಾಜ್ಯದ ವಿವಿಧ ಗ್ರಾಮಗಳಲ್ಲಿ ಇಂತಹ ಹಲವು ಬೇಟೆ ಪ್ರಕರಣಗಳು ನಡೆದಿವೆ ಆದರೆ ವರದಿಯಾಗಿಲ್ಲ, ರಾಜ್ಯದಲ್ಲಿ ಹಲವು ಜಲಮೂಲಗಳಿಗೆ ವಿಷಕಾರಿ ಅಂಶಗಳು ಸೇರಿ ಮೀನುಗಳ ಮಾರಣಹೋಮವಾಗುತ್ತಿರುವ ಬಗ್ಗೆ ಇಲಾಖೆಗೆ ಮಾಹಿತಿ ಬಂದಿದೆ. ಉಮಂಗೋಟಿ ನದಿ, ಉಂಗಿ ನದಿ ಮತ್ತು ರಾಜ್ಯಾದ್ಯಂತ ಇತರ ಸಣ್ಣ ನದಿಗಳ ಬಗ್ಗೆ ಇಂಥ ವರದಿಗಳು ಬರುತ್ತಿವೆ ಆದರೆ ತನಿಖೆ ಇನ್ನೂ ನಡೆಯಬೇಕಿದೆ ಎಂದು ಹಿರಿಯ ವನ್ಯಜೀವಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ (ಏಜನ್ಸೀಸ್)

    35 ವರ್ಷದ ಹಣಕಾಸು ಸಚಿವೆ ಕರೊನಾ ಸಂಕಷ್ಟದಲ್ಲಿ ದೇಶದ ಆರ್ಥಿಕ ಶಿಸ್ತು ರೂಪಿಸಿದ್ದು ಹೇಗೆ? 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts