More

    ಲಾಕ್​ಡೌನ್​ ಸಮಯದಲ್ಲಿ ಕದ್ದುಮುಚ್ಚಿ ಮಾಡೋದೇನು? ಇಲ್ಲಿದೆ ಬೆಚ್ಚಿಬೀಳಿಸೋ ವರದಿ

    ನವದೆಹಲಿ: ಮಾರ್ಚ್​ 25ರಿಂದ ಲಾಕ್​ಡೌನ್​ -1 ಶುರುವಾಯಿತು. ಅಲ್ಲಿಂದ ಲಾಕ್​ಡೌನ್​ 2 ಆಗಿ ಇದೀಗ ಲಾಕ್​ಡೌನ್​ 3 ಆರಂಭವಾಗಿದೆ. ಅಂದರೆ ಈಗಾಗಲೇ ಒಂದು ತಿಂಗಳು ಮುಗಿದು ಎರಡನೆಯ ತಿಂಗಳಿಗೆ ಕಾಲಿಟ್ಟಾಗಿದೆ.

    ಈ ಅವಧಿಯಲ್ಲಿ ಕರೊನಾ ಸೋಂಕಿನ ಭೀತಿಯಿಂದ ಬಹುತೇಕ ಕಚೇರಿಗಳು ತಮ್ಮ ಸಿಬ್ಬಂದಿಗೆ ವರ್ಕ್​ ಫ್ರಂ ಹೋಂ ಕೆಲಸ ನೀಡಿದ್ದರೆ, ಇನ್ನು ಹಲವಾರು ಸಂಸ್ಥೆಗಳಲ್ಲಿ ಕೆಲಸವೇ ಇಲ್ಲದೇ ಜನರು ಮನೆಯಲ್ಲಿಯೇ ಇದ್ದಾರೆ.

    ಈ ಅವಧಿಯಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಸಚಿವಾಲಯ ಈಚೆಗೆ ವರದಿ ಮಾಡಿದೆ. ಜತೆಗೆ, 70 ಲಕ್ಷಕ್ಕೂ ಅಧಿಕ ಮಹಿಳೆಯರು ಇಷ್ಟವಿಲ್ಲದ ಗರ್ಭವನ್ನು ಧರಿಸಿರುವ ಬಗ್ಗೆಯೂ ವರದಿಯಾಗಿದೆ.

    ಇದನ್ನೂ ಓದಿ: ಲಾಕ್​ಡೌನ್​ ಎಫೆಕ್ಟ್​: ದಂಪತಿ ನಡುವೆ ಹೆಚ್ಚಿದ ಸರಸ- ಸಲ್ಲಾಪಕ್ಕೆ ವಿಶ್ವ ಸಂಸ್ಥೆ ಬೆಚ್ಚಿ ಬಿದ್ದದ್ದೇಕೆ?

    ಇವುಗಳ ಬೆನ್ನಲ್ಲೇ ಆತಂಕಕಾರಿ ಎನ್ನುವ ವರದಿ ಈಗ ಬಹಿರಂಗಗೊಂಡಿದೆ. ಅದೇನೆಂದರೆ ಲಾಕ್​ಡೌನ್​ ಅವಧಿಯಲ್ಲಿ ಅಶ್ಲೀಲ ವೆಬ್​ಸೈಟ್​ಗಳ (ಪೋರ್ನ್​ ವೆಬ್​ಸೈಟ್​) ವೀಕ್ಷಣೆಯಲ್ಲಿ ವಿಪರೀತ ಏರಿಕೆಯಾಗಿದೆ, ಇದರ ಸಂಖ್ಯೆ ಶೇ.95ರಷ್ಟು ಹೆಚ್ಚಾಗಿದೆ ಎಂದು ಸಮೀಕ್ಷೆ ಹೇಳಿದೆ! ಭಾರತದಲ್ಲಿ 3,500ಕ್ಕೂ ಅಧಿಕ ಅಶ್ಲೀಲ ವೆಬ್​ಸೈಟ್​ಗಳನ್ನು ನಿಷೇಧಿಸಲಾಗಿತ್ತು. ಆದರೂ ಇವುಗಳ ವೀಕ್ಷಣೆ ಸಂಖ್ಯೆ ಹೆಚ್ಚಳವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

    ಈ ಪೈಕಿ ಶೇ.89ರಷ್ಟು ಮಂದಿ ಪೋರ್ನ್​ಸೈಟ್​ಗಳನ್ನು ತಮ್ಮ ಸ್ಮಾರ್ಟ್​ ಫೋನ್​ನಲ್ಲಿಯೇ ನೇರವಾಗಿ ನೋಡುತ್ತಿದ್ದರೆ, ಶೇ.30ರಿಂದ 40ರಷ್ಟು ಭಾರತೀಯರು ಲಾಕ್ ಡೌನ್ ಸಂದರ್ಭದಲ್ಲಿ ಪೋರ್ನ್ ವಿಡಿಯೋಗಳನ್ನು ಡೌನ್​ಲೋಡ್ ಮಾಡಿಕೊಳ್ಳಲಾಗಿದೆ.

    ಇದನ್ನೂ ಓದಿ: ಮದುವೆಯಾಗುವಂತೆ ಅಪ್ಪ-ಅಮ್ಮ ಚಿತ್ರಹಿಂಸೆ ನೀಡುತ್ತಿದ್ದಾರೆ… ದಯವಿಟ್ಟು ನನ್ನನ್ನು ಕಾಪಾಡಿ…

    ಅತೀ ಹೆಚ್ಚು ಪೋರ್ನ್​ ವೀಡಿಯೋ, ಸಿನಿಮಾ ನೋಡುವ ಪಟ್ಟಿಯಲ್ಲಿ ಅಮೆರಿಕ, ಲಂಡನ್​ ಮೊದಲೆರಡು ಸ್ಥಾನದಲ್ಲಿ ಇದ್ದರೆ, ಭಾರತ ಇಡೀ ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ವರದಿ ವಿವರಿಸಿದೆ.

    ಇಂಟರ್​ನೆಟ್​ ನೋಡಿ ಅಭ್ಯಾಸ ಮಾಡುತ್ತಿದ್ದಾರೆ ಅಂದುಕೊಂಡ್ರಾ?: ಲಾಕ್​ಡೌನ್​ ಅವಧಿಯಲ್ಲಿ ಬಹುತೇಕ ಶಿಕ್ಷಣ ಸಂಸ್ಥೆಗಳು ಆನ್​ಲೈನ್​ ಮೂಲಕ ಶಿಕ್ಷಣ ಕೊಡಲು ಶುರು ಮಾಡಿದೆ. ಆದರೆ ಕಂಪ್ಯೂಟರ್​ ಅಥವಾ ಮೊಬೈಲ್​ ಮುಂದೆ ಕೂತ ನಿಮ್ಮ ಮಕ್ಕಳು ಪ್ರತಿಸಲವೂ ಶಾಲೆಯ ಅಭ್ಯಾಸವನ್ನೇ ಮಾಡುತ್ತಿದ್ದಾರೆ ಎಂದು ತಪ್ಪು ಭಾವಿಸಬೇಡಿ ಎಂದಿದ್ದಾರೆ ತಜ್ಱರು.

    ಇದನ್ನೂ ಓದಿ: ಪೆಟ್ರೋಲ್​, ಡೀಸೆಲ್​ ಅಬಕಾರಿ ಸುಂಕದಲ್ಲಿ ಭಾರಿ ಏರಿಕೆ: ಗ್ರಾಹಕರ ಜೇಬಿಗೆ ಕತ್ತರಿ ಬೀಳತ್ತಾ? ಇಲ್ಲಿದೆ ಉತ್ತರ

    ಏಕೆಂದರೆ, ಇತ್ತೀಚೆಗೆ ಸಂಸ್ಥೆಯೊಂದು ಬೆಂಗಳೂರು ಒಂದರಲ್ಲಿಯೇ 400 ವಿದ್ಯಾರ್ಥಿಗಳನ್ನು ಸಂದರ್ಶಿಸಿತ್ತು. ಅವರ ಪೈಕಿ ಆ ಮಕ್ಕಳಲ್ಲಿ ಶೇ.70ರಷ್ಟು ವಿದ್ಯಾರ್ಥಿಗಳು 10ನೇ ವಯಸ್ಸಿನಲ್ಲಿಯೇ ಅಶ್ಲೀಲ ವೀಡಿಯೋ ನೋಡಲು ಆರಂಭಿಸಿದ್ದರು ಎಂದು ಹೇಳಿದ್ದರು.

    ತಮ್ಮ ಮಕ್ಕಳು ಇಂಟರ್ನೆಟ್ ಅನ್ನು ಕೇವಲ ಓದಲು ಮಾತ್ರ ಉಪಯೋಗಿಸುತ್ತಾರೆ ಎಂದು 10ರಲ್ಲಿ 9 ಪಾಲಕರು ಅಂದುಕೊಂಡಿರುತ್ತಾರೆ. ಆದರೆ ಅವರ ಪೈಕಿ ಹೆಚ್ಚಿನವರು ಇಂಥ ಪೋರ್ನ್​ ಸೈಟ್​ಗಳ ದಾಸರಾಗಿರುತ್ತಾರೆ ಎಂದು ವರದಿ ಎಚ್ಚರಿಸಿದೆ. ಆದರೆ ಹೊಸ ಪೀಳಿಗೆ ಮತ್ತು ವಿದ್ಯಾರ್ಥಿ ಸಮುದಾಯ ಉಚಿತ ಅಶ್ಲೀಲ ವಿಡಿಯೋ ನೋಡುವ ಮೂಲಕ ಅವರ ಭವಿಷ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಅವರ ಮನಸ್ಸಿನ ಮೇಲೂ ಗಾಢ ಸಮಸ್ಯೆ ತಂದೊಡ್ಡಲಿದೆ ಎಂದು ಎಚ್ಚರಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts