More

    ಮನಸೆಳೆದ ದ ಡಾಪರ್ ಶೋ; ಕಲಾವಿದ ಉದಯಕೃಷ್ಣ , ನಿಯತಿ ಭಟ್ ಕಲಾಕೃತಿಗಳ ಪ್ರದರ್ಶನ

    ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಲಾವಿದ ಉದಯ ಕೃಷ್ಣ ಮತ್ತು ಪುತ್ರಿ ನಿಯತಿ ಯು. ಭಟ್ ಕಲಾಕೃತಿಗಳು ಮತ್ತು ಛಾಯಾಚಿತ್ರಗಳ ಪ್ರದರ್ಶನಕ್ಕೆ ಜಿ.ಎಸ್.ಶಂಕರಿ ದೀಪ ಬೆಳಗಿಸಿ ಚಾಲನೆ ನೀಡಿದರು. ‘ದ ಡಾಪರ್ ಶೋ’ ಹೆಸರಿನಲ್ಲಿ ಮೂರು ದಿನಗಳ ಕಾಲ ನಡೆದ ವಿಶಿಷ್ಟ ಪ್ರದರ್ಶನ ಕಲಾಸಕ್ತರ ಮನಸೆಳೆಯಿತು.

    ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ದಾಸವಾಣಿ ಸಂಗೀತಜ್ಞ ಡಾ. ವಿದ್ಯಾಭೂಷಣ ಅವರು ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಯಾವುದಾದರೊಂದು ಪ್ರವೃತ್ತಿಯನ್ನು ಕಲಿಸಬೇಕು, ಅದರಿಂದಾಗಿ ಸಮೃದ್ಧ, ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ. ಉದಯ ಕೃಷ್ಣ ಅವರು ತಮ್ಮ ಪುತ್ರಿ ನಿಯತಿ ಅವರ ಪ್ರತಿಭೆಗೆ ಆಸರೆಯಾಗಿ ನಿಂತಿರುವುದು ಶ್ಲಾಘನೀಯ ಎಂದರು.

    ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಮಾತನಾಡಿ ಮಗ ಮತ್ತು ಮೊಮ್ಮಗಳ ಕಲಾ ಪ್ರದರ್ಶನವನ್ನು ತಾಯಿ ಉದ್ಘಾಟನೆ ಮಾಡುವುದನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ನಮ್ಮ ತೃಪ್ತಿಗಾಗಿ, ನಮ್ಮ ಬದುಕನ್ನು ಸುಂದರಗೊಳಿಸುವುದಕ್ಕಾಗಿ ಕಲೆಗಳನ್ನು ಕಲಿಯುವುದು ಬಹಳ ಮುಖ್ಯ. ಚಿತ್ರ, ಫೋಟೋಗ್ರಫಿಯಂಥ ಕಲೆಗಳಿಂದ ಏಕಾಗ್ರತೆ ಸಿದ್ಧಿಸುತ್ತದೆ. ಒಂದು ಚಿತ್ರ ಸಾವಿರ ಶಬ್ದಗಳಿಗೆ ಸಮಾನ. ಅಂತಹ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಉದಯ ಕೃಷ್ಣ ಅವರ ರೇಖಾ ವ್ಯಕ್ತಿ ಚಿತ್ರಗಳು, ಜಲವರ್ಣ ಚಿತ್ರಗಳು ಹಾಗೂ ಸುಂದರ ಛಾಯಾಚಿತ್ರಗಳು ಹಾಗೂ ನಿಯತಿ ರಚಿಸಿದ ಮಂಡಲ ಕಲ್ ಮತ್ತು ಸೆರೆ ಹಿಡಿದ ಪ್ರಕೃತಿ ಮತ್ತು ಪಕ್ಷಿಗಳ ಛಾಯಾಚಿತ್ರಗಳು ಪ್ರದರ್ಶನದಲ್ಲಿ ಮುಖ್ಯ ಆಕರ್ಷಣೆಗಳಾಗಿದ್ದವು. ಒಟ್ಟು 5 ವಿಭಾಗಗಳಲ್ಲಿ 139 ಕಲಾಕೃತಿಗಳು ಪ್ರದರ್ಶನಗೊಂಡಿದ್ದು, ನಾಡಿನ ವಿವಿಧೆಡೆಯಿಂದ ಆಗಮಿಸಿದ ಕಲಾಸಕ್ತರು ಪ್ರದರ್ಶನವನ್ನು ಕಣ್ತುಂಬಿಕೊಂಡರು.

    ಮನಸೆಳೆದ ದ ಡಾಪರ್ ಶೋ; ಕಲಾವಿದ ಉದಯಕೃಷ್ಣ , ನಿಯತಿ ಭಟ್ ಕಲಾಕೃತಿಗಳ ಪ್ರದರ್ಶನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts