ಚಿತ್ರಕಲಾ ಪರಿಷತ್​ನಲ್ಲಿ ಏ.27ರಿಂದ ‘ದ ದಾಪರ್ ಶೋ’

Dapper
Published on

ಬೆಂಗಳೂರು: ಏ.27 ರಿಂದ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ‘ದ ದಾಪರ್ ಶೋ’ ಹೆಸರಿನಲ್ಲಿ ಪ್ರಸಿದ್ದ ಕಲಾವಿದ ಉದಯಕೃಷ್ಣ ಮತ್ತು ಪುತ್ರಿ ನಿಯತಿ ಭಟ್ ಅವರ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಪ್ರದರ್ಶನದಲ್ಲಿ ವಿಶೇಷ ಪೇಂಟಿಂಗ್, ೆಟೋಗ್ರಫಿ, ಮಂಡಲ, ಗ್ರಾಫಿಕ್ಸ್ ಹೀಗೆ ವಿವಿಧ ಬಗೆಯ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಏ.27 ರಂದು ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿರುವ ಪ್ರದರ್ಶನವು ಏ.29 ರಂದು ಸಂಜೆಯವರೆಗೆ ನಡೆಯಲಿದೆ.

ಪ್ರದರ್ಶನದ ಉದ್ಘಾಟನೆಯನ್ನು ಜಿ.ಎಸ್.ಶಂಕರಿಯವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ಗಾಯಕರಾದ ಡಾ. ವಿದ್ಯಾಭೂಷಣ, ಶ್ಯಾಡೋ ಕಲಾವಿದ ಪ್ರಹ್ಲಾದ ಆಚಾರ್ಯ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net