More

    ವಿಶ್ವಕಪ್ ಕ್ರಿಕೆಟ್ ಫೈನಲ್​ ವೀಕ್ಷಣೆಯಲ್ಲಿ ದಾಖಲೆ; ಎಷ್ಟು ಕೋಟಿ ಮಂದಿ ಪಂದ್ಯ ನೋಡಿದ್ದರು?

    ನವದೆಹಲಿ: ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಿನ್ನೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯ ಬಹುತೇಕ ಇಡೀ ದೇಶವನ್ನೇ ಕುತೂಹಲದಲ್ಲಿ ಇರಿಸಿತ್ತು. ಅದರಲ್ಲೂ ಈ ಫೈನಲ್ ಪಂದ್ಯ ದಾಖಲೆಮಟ್ಟದಲ್ಲಿ ವೀಕ್ಷಣೆ ಆಗಿರುವುದು ಕೂಡ ಕಂಡುಬಂದಿದೆ.

    ವಿಶೇಷವೆಂದರೆ ಡಿಸ್ನಿ-ಹಾಟ್​ಸ್ಟಾರ್​ನಲ್ಲಿ ಬಿತ್ತರಗೊಂಡ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯದ ಅಂತಿಮ ಹಣಾಹಣಿಯ ಆಟಕ್ಕೆ ಪೀಕ್ ವೀವರ್​ಶಿಪ್ 5.9 ಕೋಟಿ ಆಗಿದ್ದು, ಈ ಮೂಲಕ ಇದು ಹಳೆಯ ದಾಖಲೆಗಳನ್ನು ಮುರಿದಿದೆ ಎನ್ನಲಾಗಿದೆ. ಫೈನಲ್ ಮಾತ್ರವಲ್ಲದೆ ಈ ಪಂದ್ಯಾವಳಿಯ ಇತರ ಪಂದ್ಯಗಳೂ ಅತ್ಯಧಿಕ ವೀಕ್ಷಣೆ ಕಂಡಿವೆ ಎಂದು ಈ ಸಂಸ್ಥೆ ಹೇಳಿಕೊಂಡಿದೆ.

    ಇದನ್ನೂ ಓದಿ: ವಿಶ್ವಕಪ್ ಸೋಲು: ಬದಲಾಗಲಿದ್ಯಾ ಭಾರತ ಕ್ರಿಕೆಟ್ ತಂಡದ ನಾಯಕತ್ವ?; ಮುಂದೆ ಮಹತ್ವ ಯಾರಿಗೆ?

    ಮತ್ತೊಂದೆಡೆ ಅಹಮದಾಬಾದ್​ನ ಕ್ರೀಡಾಂಗಣದಲ್ಲೇ 1.3 ಲಕ್ಷ ಮಂದಿ ನೇರವಾಗಿ ಪಂದ್ಯ ವೀಕ್ಷಿಸಿದ್ದಾರೆ. ಇದಕ್ಕೆ ಹೊರತಾಗಿ ದೇಶದ ವಿವಿಧ ನಗರಗಳ ಪಿವಿಆರ್​ ಇನಾಕ್ಸ್​ನ 150 ಸಿನಿಮಾ ಮಂದಿರಗಳಲ್ಲಿ 70 ಸಾವಿರಕ್ಕೂ ಅಧಿಕ ಟಿಕೆಟ್​ಗಳು ಮಾರಾಟವಾಗಿವೆ. ಮಾತ್ರವಲ್ಲದೆ, ಕರ್ನಾಟಕ ಸರ್ಕಾರದಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ದೊಡ್ಡ ಪರದೆಯಲ್ಲಿ ಕ್ರಿಕೆಟ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

    ಭಾರತ ಮತ್ತು ನ್ಯೂಜಿಲೆಂಡ್​ನ ಸೆಮಿಫೈನಲ್​ನಲ್ಲೂ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಪೀಕ್ ಕನ್​ಕರೆನ್ಸಿ 5.3 ಕೋಟಿ ವೀವರ್​ಶಿಪ್ ದಾಖಲೆ ಮಾಡಿತ್ತು. ಲೈವ್​ ಸ್ಟ್ರೀಮ್ ಆಗುವಾಗಿನ ಗರಿಷ್ಠ ಸಂಖ್ಯೆಯ ವೀಕ್ಷಕರನ್ನು ಹೊಂದಿರುವುದನ್ನು ಪೀಕ್​ ಕನ್​ಕರೆನ್ಸಿ ಎನ್ನಲಾಗುತ್ತದೆ.

    ಖ್ಯಾತ ಬೌಲರ್​ಗೆ ಮೋದಿಯ ಸಾಂತ್ವನದ ಅಪ್ಪುಗೆ: ನಾವು ಮತ್ತೆ ಪುಟಿದೇಳುತ್ತೇವೆ ಎಂದ ಶಮಿ; ವೈರಲ್ ಆಗುತ್ತಿದೆ ಫೋಟೋ!

    ಪೋಕ್ಸೋ ಪ್ರಕರಣ: ಮುರುಘಾಶ್ರೀ ಬಂಧನಕ್ಕೆ ಹೈಕೋರ್ಟ್ ತಡೆ; ಕಾರಣ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts