More

    ಕರೊನಾ ಭೀತಿಯಿಂದ ಮತ್ತೊಂದು ಪ್ರಮುಖ ಕ್ರಿಕೆಟ್ ಟೂರ್ನಿ ರದ್ದು!

    ಕೊಲಂಬೊ: ಕರೊನಾ ವೈರಸ್ ಭೀತಿಯಿಂದಾಗಿ ಈ ವರ್ಷವೂ ಕೆಲ ಕ್ರೀಡಾಕೂಟಗಳಿಗೆ ತೊಂದರೆ ಎದುರಾಗಿದೆ. ಏಷ್ಯಾಕಪ್ ಇದಕ್ಕೆ ತಾಜಾ ದೃಷ್ಟಾಂತವಾಗಿದೆ. ಜೂನ್‌ನಲ್ಲಿ ನಿಗದಿಯಾಗಿದ್ದ ಟಿ20 ಏಷ್ಯಾಕಪ್ ಟೂರ್ನಿಯನ್ನು ಕರೊನಾ ವೈರಸ್ ಹಾವಳಿಯಿಂದಾಗಿ ಆತಿಥೇಯ ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) ಬುಧವಾರ ಅಧಿಕೃತವಾಗಿ ರದ್ದುಗೊಳಿಸಿದೆ. ಕಳೆದ ವರ್ಷ ಪಾಕಿಸ್ತಾನದಲ್ಲಿ ನಿಗದಿಯಾಗಿದ್ದ ಏಷ್ಯಾಕಪ್ ಕೂಡ ಕರೊನಾ ಭೀತಿಯಿಂದಾಗಿದ್ದ ರದ್ದುಗೊಂಡಿತ್ತು.

    ‘ಹಾಲಿ ಸನ್ನಿವೇಶದಲ್ಲಿ ಟೂರ್ನಿಯನ್ನು ಸಂಘಟಿಸಲು ಸಾಧ್ಯವಾಗುತ್ತಿಲ್ಲ’ ಎಂದು ಎಸ್‌ಎಲ್‌ಸಿ ಮುಖ್ಯಸ್ಥ ಆಶ್ಲೆ ಡಿ ಸಿಲ್ವ ಹೇಳಿದ್ದಾರೆ. ಜೂನ್​ನಲ್ಲೇ ನಡೆಯುವ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆದ ಕಾರಣ ಭಾರತ ತಂಡ ಈ ವರ್ಷ ಏಷ್ಯಾಕಪ್ ನಡೆದರೂ ಅದರಲ್ಲಿ ಆಡಲು ಸಾಧ್ಯವಿರಲಿಲ್ಲ.

    ಇದನ್ನೂ ಓದಿ: ಗೆಸ್ಟ್‌ಹೌಸ್‌ನಲ್ಲಿ ಲಸಿಕೆ ಹಾಕಿಸಿಕೊಂಡು ವಿವಾದಕ್ಕೀಡಾದ ಕ್ರಿಕೆಟಿಗ ಕುಲದೀಪ್ ಯಾದವ್

    ಮುಂದಿನ 2 ವರ್ಷಗಳ ಕ್ರಿಕೆಟ್ ವೇಳಾಪಟ್ಟಿ ಸಾಕಷ್ಟು ಬಿಡುವಿಲ್ಲದೆ ಕೂಡಿರುವುದರಿಂದ ಇನ್ನು 2023ರ ಏಕದಿನ ವಿಶ್ವಕಪ್‌ವರೆಗೂ ಏಷ್ಯಾಕಪ್ ಟೂರ್ನಿ ನಡೆಯುವ ಸಾಧ್ಯತೆ ಇಲ್ಲ ಎಂದು ಡಿಸಿಲ್ವ ತಿಳಿಸಿದ್ದಾರೆ. ಶ್ರೀಲಂಕಾದಲ್ಲಿ ಇತ್ತೀಚೆಗೆ ಕರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, 10 ದಿನಗಳ ಕಾಲ ವಿದೇಶಿ ವಿಮಾನಗಳಿಗೆ ನಿರ್ಬಂಧ ಹೇರಲಾಗಿದೆ.

    2018ರಲ್ಲಿ ಯುಎಇಯಲ್ಲಿ ನಡೆದ ಏಕದಿನ ಮಾದರಿಯ ಏಷ್ಯಾಕಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಭಾರತ ಟೂರ್ನಿಯ ಹಾಲಿ ಚಾಂಪಿಯನ್ ತಂಡವಾಗಿದೆ. 2016ರಲ್ಲಿ ಮೊದಲ ಬಾರಿ ಟಿ20 ಮಾದರಿಯಲ್ಲಿ ಏಷ್ಯಾಕಪ್ ನಡೆದಾಗಲೂ ಭಾರತವೇ ಪ್ರಶಸ್ತಿ ಜಯಿಸಿತ್ತು. ಭಾರತ ಒಟ್ಟು 7 ಬಾರಿ ಏಷ್ಯಾಕಪ್ ಜಯಿಸಿದೆ.

    ಮಹಿಳಾ ಕ್ರಿಕೆಟರ್ ತಾಯಿಯ ಕೋವಿಡ್ ಚಿಕಿತ್ಸೆಗೆ ನೆರವಾದ ವಿರಾಟ್ ಕೊಹ್ಲಿ

    ಆ ಪಂದ್ಯದ ಬಳಿಕ ನನಗೆ ಮತ್ತು ಪತ್ನಿಗೆ ಜೀವ ಬೆದರಿಕೆ ಬಂದಿತ್ತು ಎಂದ ಫಾಫ್​ ಡು ಪ್ಲೆಸಿಸ್!

    ಬ್ರಿಟನ್​ಗೆ ತೆರಳಲು ಮಗನಿಗೆ ವೀಸಾ ಕೇಳಿದ ಸ್ಟಾರ್​ ಟೆನಿಸ್​ ಪಟು ಸಾನಿಯಾ ಮಿರ್ಜಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts